Advertisement

ರೈತರ ಆತ್ಮಹತ್ಯೆಗಳಿಗೆ ಆಡಳಿತ ವ್ಯವಸ್ಥೆಗಳೇ ಕಾರಣ

06:30 AM Jan 29, 2018 | |

ಬೆಂಗಳೂರು: ದೇಶದಲ್ಲಿ ಸಂಭವಿಸುತ್ತಿರುವ ರೈತರ ಆತ್ಮಹತ್ಯೆಗಳಿಗೆ ಆಡಳಿತ ವ್ಯವಸ್ಥೆಯೇ ಕಾರಣ ಎಂದು ಶಾಸಕ ಕೆ.ಎಸ್‌ ಪುಟ್ಟಣ್ಣಯ್ಯ ಆರೋಪಿಸಿದರು.

Advertisement

ಅಂತಾರಾಷ್ಟ್ರೀಯ ಲಯನ್ಸ್‌ ಸಂಸ್ಥೆಗಳ ಒಕ್ಕೂಟ ರವಿವಾರ ಕುವೆಂಪು ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಪ್ರಾಂತೀಯ ಸಮ್ಮಿಲನ ಕಾರ್ಯಕ್ರಮದಲ್ಲಿ  ” ಹಸಿವು  ನೀಗಿಸುವಲ್ಲಿ  ರೈತರ ಕೊಡುಗೆ’ ವಿಚಾರದ ಕುರಿತು  ಅವರು ಮಾತನಾಡಿದರು.

ದೇಶದಲ್ಲಿ ಇದುವರೆಗೂ ಏಳು ಲಕ್ಷ ಮಂದಿ ಬೆಳೆನಾಶ, ಆರ್ಥಿಕ ಅಭದ್ರತೆ, ಸಾಲಬಾಧೆ ಸಹಿತ ವಿವಿಧ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರಿಗೆ ಅಗತ್ಯವಾದ  ಆರ್ಥಿಕ ಭದ್ರತೆ ಯೋಜನೆಗಳನ್ನು ಇದಕ್ಕೆ ಆಳುವ ಆಡಳಿತ ವ್ಯವಸ್ಥೆಗಳೇ ಪರಿಣಾಮಕಾರಿಯಾಗಿ  ಅನುಷ್ಠಾನಗೊಳಿಸದಿರುವುದೇ ಕಾರಣ ಎಂದು ಆಕ್ರೋಶವ್ಯಕ್ತಪಡಿಸಿದರು.

ದೇಶದಲ್ಲಿ ಶೇ 66 ರಷ್ಟು ಉದ್ಯೋಗ ಸೃಷ್ಟಿಸುವುದು ಕೃಷಿ ವಲಯ. ರೈತ ಬೆಳೆದ ಉತ್ಪನ್ನಗಳಿಂದ ತಾನೇ ಸಾವಿರಾರು ಉದ್ಯಮಗಳು ನೆಲೆ ನಿಲ್ಲುವುದು, ಉದ್ಯೋಗ ಸೃಷ್ಟಿಯಾಗುವುದು. ಆದರೆ ಈ ಸತ್ಯವನ್ನು ಯಾವ ಸರಕಾರಗಳು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಅಸಮಾ ಧಾನ ವ್ಯಕ್ತಪಡಿಸಿದ ಅವರು, ಸರಕಾರಿ ನೌಕರರಿಗೆ ಆರ್ಥಿಕ ಭದ್ರತೆಗೆ ವೇತನಾ ಆಯೋಗಗಳು ರಚನೆಯಾಗುತ್ತವೆ. ರೈತರಿಗೆ ಆರ್ಥಿಕ ಭದ್ರತೆ ಒದಗಿಸುವ ಯಾವ ಆಯೋಗಗಳು ಇಲ್ಲ ಎಂದು ಟೀಕಿಸಿದರು.

ಐಐಎಸ್‌ ಅಧಿಕಾರಿಗಳು ಆತ್ಮಹತ್ಯೆ ಮಾಡಿ ಕೊಂಡರೆ ಸಿಬಿಐ ತನಿಖೆಗೆ ಆದೇಶಿಸುವ ಸರಕಾರಗಳು, ರೈತರ ಆತ್ಮಹತ್ಯೆ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಏಕೆ ವಹಿಸುವುದಿಲ್ಲ ಎಂದವರು ಪ್ರಶ್ನಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next