Advertisement

Kurugodu:ವಿದ್ಯುತ್ ಕೊರತೆ ನೀಗಿಸುವಂತೆ ಆಗ್ರಹಿಸಿ ರೈತರಿಂದ ಜೆಸ್ಕಾಂ ಸಿಬ್ಬಂದಿಗೆ ದಿಗ್ಭಂಧನ

02:37 PM Aug 26, 2023 | Team Udayavani |

ಕುರುಗೋಡು: ಸಮೀಪದ ಸಿರಿಗೇರಿ ಮತ್ತು ಗೆಣಿಕೆಹಾಳ್ ಭಾಗದ ಸೇರಿದಂತೆ ಸುಮಾರು ಹತ್ತಾರು ಹಳ್ಳಿಯ ರೈತರು ಆ.26ರ ಶನಿವಾರ ಕ್ಯಾದಿಗೆಹಾಳ್ ಕ್ರಾಸ್‌ನಲ್ಲಿ ಕೆಇಬಿ ಅಧಿಕಾರಿಗಳಿಗೆ ದಿಗ್ಭಂಧನ ಹಾಕಿದರು.

Advertisement

ಇದೆ ವೇಳೆ ಮಾತನಾಡಿದ ರೈತರು, ಕಳೆದ ಒಂದು ವಾರದಿಂದ ರೈತರನ್ನು ವಿದ್ಯುತ್ ಸಮಸ್ಯೆ ಕಾಡುತ್ತಿದ್ದು, ಬೆಳೆ ಒಣಗಿ ಹೋಗಿವೆ. ಈಗಾಗಲೇ ಮಳೆ ಇಲ್ಲದ ಕಾರಣ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಸಾಲ ಮಾಡಿದ ರೈತರ ಗತಿ ಏನು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿ ಜೆಸ್ಕಾಂ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರನ್ನು ತಡೆಗಟ್ಟಿ ಕೆಲಕಾಲ ದಿಗ್ಭಂಧನ ಹಾಕಿ ತಡೆಗಟ್ಟಿದರು.

ಸ್ಥಳಕ್ಕೆ ಆಗಮಿಸಿದ್ದ ಜೆಸ್ಕಾಂ ವಿಭಾಗ ನಿಯಂತ್ರಣಾಧಿಕಾರಿ ಶೇಕ್ಷಾವಲಿ ಕೂಡಲೇ ವಿದ್ಯುತ್ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ಆದರೂ ಪಟ್ಟು ಬಿಡದ ರೈತರು ಇದು ತಾತ್ಕಾಲಿಕವಾಗಬಾರದು. ನಿರಂತರವಾಗಿ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಒದಗಿಸದಿದ್ದಲ್ಲಿ ಸಿರಿಗೇರಿ, ಕ್ಯಾದಿಗೆಹಾಳು, ಕೊಂಚಿಗೇರಿ, ಗೆಣಿಕೆಹಾಳು, ದಾಸಾಪುರ ಸೇರಿದಂತೆ ಸುಮಾರು ಹತ್ತಾರು ಹಳ್ಳಿಗಳ ರೈತರು ಕುರುಗೋಡು ಹಾಗೂ ಸಿರಿಗೇರಿ ಕ್ರಾಸ್‌ನ ಕೆಇಬಿ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದೆಂದು ಎಚ್ಚರಿಸಿದರು.

ಆ ಬಳಿಕ ಹೋರಾಟ ಹಿಂಪಡೆದುಕೊಂಡರು.

Advertisement

ಈ ಸಂಧರ್ಭದಲ್ಲಿ ಕ್ಯಾದಿಗೆಹಾಳಿನ ಮಾಜಿ ಗ್ರಾಪಂ ಅಧ್ಯಕ್ಷ  ಶೇಖರ್, ರೈತ ಮುಖಂಡ ಮಾಸ್ತಿ ಪ್ರಕಾಶ್, ರಾಘವೇಂದ್ರ, ಗೋಪಾಲ ಕೃಷ್ಣ, ರಾರಾವಿ ವೆಂಕಟೇಶ, ಬಕಾಡೆ ಕೊಮಾರೆಪ್ಪ, ಬಿ.ದೊಡ್ಡಬಸಪ್ಪ, ಮಾಸ್ತಿ ದಾನಪ್ಪ, ದಾಸಾಪುರ ಕೃಷ್ಣಪ್ಪ, ಕೊಂಚಿಗೇರಿ ದಾಸಾಪುರ ದೊಡ್ಡಪ್ಪ, ಕೆಇಬಿ ಸಿಬ್ಬಂದಿ ವರ್ಗದ ತಿಮ್ಮಪ್ಪ, ವಸಂತ ಸೇರಿದಂತೆ ಸುಮಾರು ನೂರಾರು ಜನ ರೈತರು ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next