Advertisement

ತೊಗರಿ ಹಾನಿಯ ಪರಿಹಾರದ ಮೊತ್ತ ದ್ವಿಗುಣಗೊಳಿಸಲು ತಹಶೀಲ್ದಾರಿಗೆ ರೈತರ ಮನವಿ

04:25 PM Jan 24, 2022 | Team Udayavani |

ಕುಷ್ಟಗಿ: ಅಕಾಲಿಕ ಮಳೆಯಿಂದ ತೊಗರಿ ಸೇರಿದಂತೆ ಇತರೇ ಬೆಳೆಗಳು ಹಾನಿಯಾಗಿದ್ದು ಸರ್ಕಾರ ತೊಗರಿ ಬೆಳೆಗೆ ಅತ್ಯಲ್ಪ ಪರಿಹಾರ ನೀಡಿದೆ.‌ ತೊಗರಿ ಹಾನಿಯ ಪರಿಹಾರದ ಮೊತ್ತ ದ್ವಿಗುಣಗೊಳಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಅಕಾಲಿಕ ಮಳೆಯಿಂದ ಶೇ.50 ರಷ್ಟು ತೊಗರಿ ಹಾಳಾಗಿದೆ. ತೋಟಗಾರಿಕೆ ಬೆಳೆಗಳಾದ ಈರುಳ್ಳಿ, ಪೇರಲ, ದ್ರಾಕ್ಷಿ ಸೇರಿದಂತೆ ಮಣಸಿಕಾಯಿ, ನೀರಾವರಿ ಅಶ್ರೀತ ಭತ್ತದ ಬೆಳೆಗೆ ಹಾನಿಯಾಗಿದ್ದರೂ ಪರಿಗಣಿಸಿಲ್ಲ. ಕುಷ್ಟಗಿ, ಹನುಮಸಾಗರ, ತಾವರಗೇರಾ ದಲ್ಲಿ ಬೆಂಬಲ ಬೆಲೆ ತೊಗರಿ ಖರೀಧಿ ಕೇಂದ್ರ ಕಾಟಾಚಾರ ಎನ್ನುವಂತಾಗಿದ್ದು ರೈತರಿಗೆ ಅನಕೂಲ ಆಗಿಲ್ಲ. ಮೊದಲ‌ ಎರಡು ದಿನ ಆರಂಭಿಸಿ ನಂತರ್ ಬಂದ್ ಮಾಡುವುದು ನಡೆದಿದ್ದು ಸಮರ್ಪಕವಾಗಿ ನಡೆದಿಲ್ಲ. ತೊಗರಿ ಗುಣಮಟ್ಟದ ನೆಪದಲ್ಲಿ ತೊಗರಿಯನ್ನು ಖರೀದಿಸದೇ ನಿರಾಕರಿಸುತ್ತಿದ್ದಾರೆ ಎಂದು ಕರ್ನಾಟಕ ರೈತ ಸಂಘದ ಜಿಲ್ಲಾ ಅಧ್ಯಕ್ಷ ನಜೀರಸಾಬ್ ಮೂಲಿ‌ಮನಿ ಆರೋಪಿಸಿದರು.

ಕುಷ್ಟಗಿಯಿಂದ ತಾವರಗೇರಾಕ್ಕೆ ಕೆಪಿಸಿಎಲ್ ಬೃಹತ್  ವಿದ್ಯುತ್ ಟಾವರ್ ಹಾಗೂ ಕಾರಿಡಾರ್ ಅಳವಡಿಸುವ ಕಾರ್ಯ ನಡೆದಿದೆ. ವಿದ್ಯುತ್ ಟಾವರ್ ಅಳವಡಿಸಿದ ಜಮೀನುಗಳ ರೈತರಿಗೆ ಯಾವೂದೇ ಪರಿಹಾರ ಇಲ್ಲ. ಸುಜಲಾನ್ ಪವರ್ ಕಂಪನಿ ರೈತರ ಜಮೀನುಗಳನ್ನು ಭೂ ಪರಿವರ್ತನೆ ಇಲ್ಲದೇ ಕಾಮಗಾರಿ ನಡೆಸಿದ್ದು ಸದರಿ ಕಾಮಗಾರಿಗೆ ತಡೆಗೆ ಆಗ್ರಹಿಸಿದರು.

ಇದೇ ವೇಳೆ ತಹಶೀಲ್ದಾರ ಎಂ.ಸಿದ್ದೇಶ ಅವರಿಗೆ ಮನವಿ ಸಲ್ಲಿಸಲಾಯಿತು. ಶಂಕರಗೌಡ ಪಾಟೀಲ ಬೀಳಗಿ, ಬಸಪ್ಪ ಅಮ್ಮಣ್ಣನವರ್, ಮಹಿಳಾ ಘಟಕದ ಅಧ್ಯಕ್ಷೆ ಮಹಾಂತಮ್ಮ ಪಾಟೀಲ, ನಾಗರಾಜ ಇಟಗಿ, ವೆಂಕಟೇಶ್ ರಾಠೋಡ್,ಯಮನೂರಪ್ಪ ಮಡಿವಾಳ, ಉಮೇಶ ಬಾಚಲಾಪೂರ, ಶರಣಪ್ಪ ಬಾಚಲಾಪೂರ, ಮಲ್ಲಪ್ಪ ಹವಾಲ್ದಾರ್, ಪ್ರವೀಣ್ ಕುಮಾರ ಕೊರಡಕೇರಾ,ಯಂಕಣ್ಣ ಉಪ್ಪಳೆರ  ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next