Advertisement

ಕೆರೆ-ಹಳ್ಳಿಗಳಿಗೆ ನೀರು ಹರಿಸಲು ರೈತರ ಮನವಿ

05:52 PM Apr 26, 2022 | Shwetha M |

ಆಲಮಟ್ಟಿ: ಜಾನುವಾರು ಮತ್ತು ವನ್ಯ ಜೀವಿಗಳ ಕುಡಿಯುವ ನೀರಿಗಾಗಿ ಆಲಮಟ್ಟಿ ಬಲದಂಡೆ ಕಾಲುವೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ರೈತರು ಮುಖ್ಯ ಅಭಿಯಂತರರಿಗೆ ಮನವಿ ಸಲ್ಲಿಸಿದರು.

Advertisement

ಸೋಮವಾರ ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಅಭಿಯಂತರರ ಕಚೇರಿಗೆ ಬಾಗಲಕೋಟೆ ಜಿಲ್ಲೆಯ ಸುತಗುಂಡಾರ, ಡೊಮನಾಳ, ಬೊಮ್ಮಣಗಿ, ಹಂಡರಗಲ್ಲ, ತುರುಡಗಿ ಹಾಗೂ ಕೂಡಲಸಂಗಮದಿಂದ ಆಗಮಿಸಿದ್ದ ರೈತರು ಆಲಮಟ್ಟಿ ಬಲದಂಡೆ ಕಾಲುವೆ ಮೂಲಕ ಹಳ್ಳಗಳಿಗೆ ನೀರು ಹರಿಸುವುದರಿಂದ ಬೇಸಿಗೆಯ ಬಿರು ಬಿಸಿಲಿಗೆ ಜನ ಜಾನುವಾರುಗಳು ಹಾಗೂ ವನ್ಯ ಜೀವಿಗಳು ನೀರಿಗಾಗಿ ಪರಿತಪಿಸುವಂತಾಗಿದೆ. ಆದ್ದರಿಂದ ಆಲಮಟ್ಟಿ ಬಲದಂಡೆ ಕಾಲುವೆ ಮೂಲಕ ಕೆರೆ ಹಳ್ಳಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ಮುಖ್ಯ ಅಭಿಯಂತರರ ಪರವಾಗಿ ಮನವಿ ಸ್ವೀಕರಿಸಿದ ಕಾರ್ಯಪಾಲಕ ಅಭಿಯಂತರ ಬಿ.ಎಸ್‌. ಪಾಟೀಲ ಅವರು ತಮ್ಮ ಮನವಿ ಹಿರಿಯ ಅಧಿಕಾರಿಗಳಿಗೆ ತಲುಪಿಸಲಾಗುವುದು ಎಂದರು.

ಮಂಜುನಾಥ ಬೂದಿಹಾಳ, ಶ್ರೀಶೈಲ ಬಿದರಕುಂದಿ, ಪರಸಪ್ಪ ಚಲವಾದಿ, ಬಿ.ಎಸ್‌.ನಾಗೋಡ, ಎಂ.ಎಂ.ಪಾಟೀಲ, ಪರಶು ಹಬ್ಬದ, ಎಸ್‌.ಎಸ್‌.ರೊಟ್ಟಿ, ಜಿ.ವೈ. ಮೇಟಿ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next