Advertisement

ರೈತರ ಪ್ರತಿಭಟನೆ ವಾಪಸ್‌? ಸಿಂಘು ಗಡಿಯಲ್ಲಿ ಸಭೆ ಬಳಿಕ ಇಂದು ನಿರ್ಧಾರ ಪ್ರಕಟ

01:44 AM Dec 08, 2021 | Team Udayavani |

ಹೊಸದಿಲ್ಲಿ: ಕೇಂದ್ರ ಕೃಷಿ ಕಾಯ್ದೆ ರದ್ದಾದರೂ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಮುಂದುವರಿಸಿರುವ ರೈತರು ಈಗ ಪ್ರತಿಭಟನೆ ಕೈಬಿಡುವ ಹಂತಕ್ಕೆ ಬಂದಿದ್ದಾರೆ.
ಪ್ರತಿಭಟನನಿರತರ ಬಹುತೇಕ ಬೇಡಿಕೆ ಗಳಿಗೆ ಕೇಂದ್ರ ಸರಕಾರ ಒಪ್ಪಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲು ರೈತ ಒಕ್ಕೂಟಗಳು ಚಿಂತನೆ ನಡೆಸಿದ್ದು, ಬುಧವಾರ ಅಧಿಕೃತ ಘೋಷಣೆ ಹೊರಬೀಳಲಿದೆ.

Advertisement

ಸರಕಾರದಿಂದ ಲಿಖಿತ ಭರವಸೆ
ಸರಕಾರದ ಜತೆಗೆ ಮಾತುಕತೆಗೆ ಇತ್ತೀಚೆಗಷ್ಟೇ ರೈತ ಒಕ್ಕೂಟವು ಐವರು ಸದಸ್ಯರ ಸಮಿತಿ ರಚಿಸಿತ್ತು. ಮಾತುಕತೆ ಯಶಸ್ವಿಯಾಗಿದ್ದು, ಎಂಎಸ್‌ಪಿಗೆ ಕಾನೂನು ಮಾನ್ಯತೆ, ರೈತರ ವಿರುದ್ಧದ ಎಫ್ಐಆರ್‌ ರದ್ದು, ಮೃತ ರೈತರಿಗೆ ಪರಿಹಾರ ಮತ್ತಿತರ ರೈತರ ಬಹುತೇಕ ಬೇಡಿಕೆಗಳನ್ನು ಈಡೇರಿಸುವುದಾಗಿ ಸರಕಾರ ಲಿಖಿತ ಭರವಸೆ ನೀಡಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ 15 ತಿಂಗಳುಗಳಿಂದ ನಡೆಯುತ್ತಿದ್ದ ಪ್ರತಿಭಟನೆ ಕೈಬಿಡಲು ರೈತರು ಮುಂದಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಕೋವಿಡ್ ಸೋಂಕಿತ ದಕ್ಷಿಣ ಆಫ್ರಿಕಾ ಪ್ರಜೆ ಪರಾರಿ : ಖಾಸಗಿ ಹೋಟೆಲ್‌ ವಿರುದ್ಧ ಎಫ್ಐಆರ್‌

ಇಂದು ನಿರ್ಧಾರ: ಟಿಕಾಯತ್‌
ಬುಧವಾರ ಅಪರಾಹ್ನ 2ಕ್ಕೆ ಸಿಂಘು ಗಡಿಯಲ್ಲಿ ರೈತ ನಾಯಕರೆಲ್ಲ ಸಭೆ ಸೇರಿ, ಮುಂದಿನ ಕ್ರಮದ ಬಗ್ಗೆ ನಿರ್ಧ ರಿಸಲಿದ್ದೇವೆ. ಪ್ರತಿಭಟನೆ ವಾಪಸ್‌ ಪಡೆಯುವುದೋ, ಇಲ್ಲವೋ ಎಂಬು ದನ್ನೂ ಬುಧವಾರವೇ ಘೋಷಿಸ ಲಾಗುತ್ತದೆ ಎಂದು ಮಂಗಳವಾರ ಈ ಬಗ್ಗೆ ಸಂಯುಕ್ತ ಕಿಸಾನ್‌ ಮೋರ್ಚಾ ಅಧ್ಯಕ್ಷ ರಾಕೇಶ್‌ ಟಿಕಾಯತ್‌ ಹೇಳಿದ್ದಾರೆ.

ಬೇಡಿಕೆ ಏನು?
-ಎಂಎಸ್‌ಪಿಗೆ ಕಾನೂನು ಮಾನ್ಯತೆ
-ವಿದ್ಯುತ್ಛಕ್ತಿ ತಿದ್ದುಪಡಿ ಮಸೂದೆ, 2021ರ ಕರಡು ವಾಪಸ್‌
-ರೈತರ ವಿರುದ್ಧ ದಾಖಲಾದ ಎಫ್ಐಆರ್‌ ರದ್ದು
-ಪ್ರತಿಭಟನೆ ವೇಳೆ ಮೃತಪಟ್ಟ ರೈತರ ಸ್ಮಾರಕ ನಿರ್ಮಾಣಕ್ಕೆ ಭೂಮಿ
– ಲಖೀಂಪುರ ಘಟನೆಗೆ ಕಾರಣ ವಾದ ಕೇಂದ್ರ ಸಚಿವ ಅಜಯ್‌ ಮಿಶ್ರಾ ವಜಾ

Advertisement

 

Advertisement

Udayavani is now on Telegram. Click here to join our channel and stay updated with the latest news.

Next