Advertisement

ಆರನೇ ದಿನಕ್ಕೆ ಕಾಲಿಟ್ಟ ರೈತರ ಧರಣಿ

10:49 AM Nov 13, 2017 | Team Udayavani |

ಅಫಜಲಪುರ: ಕಬ್ಬಿಗೆ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿ ಕಬ್ಬು ಬೆಳೆಗಾರ ಸಂಘದವರು ಮತ್ತು ಕಬ್ಬು ಬೆಳೆಗಾರ ರೈತರು ರೇಣುಕಾ ಸಕ್ಕರೆ ಕಾರ್ಖಾನೆ ಎದುರು ಕುಳಿತಿರುವ ಧರಣಿ ಆರನೇ ದಿನಕ್ಕೆ ಕಾಲಿಟ್ಟಿದೆ.

Advertisement

ಧರಣಿ ಸ್ಥಳಕ್ಕೆ ಬಿಜೆಪಿ ಮುಖಂಡ, ಸಮಾಜ ಸೇವಕ ರಾಜೇಂದ್ರ ಪಾಟೀಲ ಭೇಟಿ ನೀಡಿ ಮಾತನಾಡಿ, ತಾಲೂಕಿನಲ್ಲಿ ವಿದ್ಯುತ್‌ ಸಮಸ್ಯೆ, ನೀರಿನ ಅಭಾವದ ಮಧ್ಯೆ ಸಾಲ ಮಾಡಿ ಕಬ್ಬು ಬೆಳೆದಿರುವ ರೈತರಿಗೆ ನ್ಯಾಯಯುತ ಬೆಲೆಯನ್ನು
ಕಾರ್ಖಾನೆಯವರು ನೀಡುತ್ತಿಲ್ಲ. ಇಷ್ಟು ವರ್ಷಗಳ ಕಾಲ ರೈತರಿಗೆ ಅನ್ಯಾಯ ಮಾಡಿದ್ದಾರೆ. ಈಗಲೂ ಇದೇ ಪ್ರವೃತ್ತಿ ಮುಂದುವರಿಸಿದ್ದಾರೆ. ಹೀಗಾಗಿ ಪ್ರತಿಭಟನೆ, ಧರಣಿ ಅನಿವಾರ್ಯವಾಗಿದ್ದು, ರೈತರ ಧರಣಿಗೆ ನಾವು ಬೆಂಬಲಿಸುತ್ತೇವೆ. ಅಲ್ಲದೆ ರಾಜ್ಯದಲ್ಲಿ ಬೇರೆ ಕಾರ್ಖಾನೆಗಳಲ್ಲಿ ಸಿಗುತ್ತಿರುವ ಬೆಲೆ ಇಲ್ಲೂ ಸಿಗಬೇಕು ಎಂದು ಹೇಳಿದರು.

ಧರಣಿ ಕುಳಿತಿರುವ ರೈತರಿಗೆ ಧರಣಿ ಮುಗಿಯುವ ವರೆಗೂ ನಮ್ಮ ಆರ್‌.ವಿ ಫೌಂಡೇಶನ್‌ ವತಿಯಿಂದ ಊಟ ಮತ್ತು
ಉಪಹಾರದ ವ್ಯವಸ್ಥೆ ಮಾಡಲಾಗುತ್ತಿದೆ. ನಾವು ಸದಾ ರೈತರೊಂದಿಗೆ ಇರುತ್ತೇವೆ ಎಂದು ಹೇಳಿದರು.

ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ರಮೇಶ ಹೂಗಾರ ಮಾತನಾಡಿ, ರೇಣುಕಾ ಸಕ್ಕರೆ ಕಾರ್ಖಾನೆಯವರು ನಮ್ಮ ತಾಲೂಕಿನ ರೈತರೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಹೀಗಾಗಿ ನಮ್ಮ ರೈತರಿಗೆ ನ್ಯಾಯ ಸಿಗುವವರೆಗೆ ನಾವು
ಧರಣಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.

ಮುಖಂಡರಾದ ಶಿವು ಪ್ಯಾಟಿ, ದಯಾನಂದ ಪಾರಗೊಂಡ, ಸುರೇಶ ಸಿಂಗೆ, ಮಹಾಂತೇಶ ಉಜನಿ, ಗಜೇಂದ್ರ ಜೇರಟಗಿ, ಪ್ರಶಾಂತ ಹಿರೇಮಠ, ರಾಜು ನಿಂಬಾಳ, ಬಸವರಾಜ ಗುಣಾರಿ, ರೈತರಾದ ಮಲ್ಲು ಬಳೂರ್ಗಿ, ಪರೇಪ್ಪ ಬಳೂರ್ಗಿ, ಮಲ್ಲು ಸೋಲಾಪುರ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next