ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ನೀತಿಯನ್ನು ವಿರೋಧಿಸಿ ರೈತ ಸಂಘಟನೆಗಳು ಜಂತರ್ ಮಂತರ್ ನಲ್ಲಿ ಹಮ್ಮಿಕೊಂಡಿರುವ ಸಂಸತ್ ಚಲೋ ಪ್ರತಿಭಟನೆ ನಡೆಸಲು ಕೋವಿಡ್ ಮಾರ್ಗಸೂಚಿಯೊಂದಿಗೆ ದೆಹಲಿ ಸರ್ಕಾರ ಅನುಮತಿ ನೀಡಿರುವುದಾಗಿ ಮೂಲಗಳು ತಿಳಿಸಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ:ಐಇಡಿ ಬಳಸಿ ಎಟಿಎಂ ಸ್ಫೋಟ, 30 ಲಕ್ಷ ನಗದು ದೋಚಿ ದರೋಡೆಕೋರರು ಪರಾರಿ!
ಪ್ರತಿಭಟನೆ ನಡೆಸಲು ಪೊಲೀಸ್ ಇಲಾಖೆ ಕೂಡಾ ಹಸಿರು ನಿಶಾನೆ ತೋರಿಸಿದ್ದು, ಒಂದು ವೇಳೆ ಜನವರಿ 26ರ ರೀತಿ ರೈತರ ಪ್ರತಿಭಟನೆ ಕೈಮೀರಿ ಹೋಗುವ ಸಂದರ್ಭ ಬಂದಾಗ ಅದನ್ನು ನಿಯಂತ್ರಿಸಲು ಪೊಲೀಸರು ಸಕಲ ಸಿದ್ಧತೆ ನಡೆಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಸಿಂಘು ಗಡಿ ಪ್ರದೇಶದಿಂದ ಸಂಸತ್ ಚಲೋ ಪ್ರತಿಭಟನೆಯಲ್ಲಿ ಪ್ರತಿದಿನ 200 ರೈತರು ಹೊರಡಲು ಸಿದ್ಧತೆ ನಡೆಸಿದ್ದಾರೆನ್ನಲಾಗಿದೆ. ಪ್ರತಿಭಟನೆಯ ಸ್ಥಳವನ್ನು ತಲುಪುವಲ್ಲಿ ಪೊಲೀಸರು ಕೂಡಾ ರಕ್ಷಣೆ ನೀಡಲಿದ್ದಾರೆ ಎಂದು ವರದಿ ವಿವರಿಸಿದೆ.
ಕೋವಿಡ್ ಮಾರ್ಗಸೂಚಿ ಅನುಸರಿಸುವ ಮೂಲಕ ಪ್ರತಿಭಟನೆ ನಡೆಸಲು ರೈತ ಸಂಘಟನೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ನಾಳೆಯಿಂದ ಜಂತರ್ ಮಂತರ್ ನಲ್ಲಿ ರೈತರ ಪ್ರತಿಭಟನೆ ನಡೆಯಲಿದೆ ಎಂದು ವರದಿ ಹೇಳಿದೆ.