Advertisement

ಭಾಲ್ಕಿಯಲ್ಲಿ ರೈತ ಸಂಘದಿಂದ ರಸ್ತೆ ತಡೆ

02:48 PM Dec 09, 2020 | Suhan S |

ಭಾಲ್ಕಿ: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ವಿವಿಧ ರೈತಸಂಘಟನೆಯವರು ರಾಷ್ಟ್ರಪತಿಗೆ ಬರೆದ ಮನವಿ ಪತ್ರ ತಹಶೀಲ್ದಾರ್‌ಗೆ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ರೈತ ಮುಖಂಡರಾದ ನಾಗಶೆಟೆಪ್ಪ ಲಂಜವಾಡೆ, ಕಿರಣಕುಮಾರ ಖಂಡ್ರೆ, ಓಂಪ್ರಕಾಶ ರೊಟ್ಟೆ, ನಿರ್ಮಲಾಕಾಂತ ಪಾಟೀಲ ಮಾತನಾಡಿ, ಸರ್ಕಾರ ರೈತರನ್ನು ಮಸಣಕ್ಕೆ ತಳ್ಳುವಶಾಸನ ರೂಪಿಸುತ್ತಿದೆ ಎಂದು ತಮ್ಮ ಅಸಮಾಧಾನ ಹೊರಹಾಕಿದರು.

ರಸ್ತೆತಡೆ: ರೈತ ವಿರೋಧಿ  ನೀತಿ ಖಂಡಿಸಿ ಪಟ್ಟಣದ ಗಾಂಧಿ ವೃತ್ತದಲ್ಲಿ ವಿವಿಧ ಸಂಘಟನೆಗಳ ಬೆಂಬಲದಿಂದ ಸುಮಾರು ನಾಲ್ಕು ಗಂಟೆವರೆಗೆ ರಸ್ತೆ ತಡೆ ನಡೆಸಿಪ್ರತಿಭಟನೆ ಮಾಡಲಾಯಿತು. ಮಧ್ಯಾಹ್ನದ ನಂತರ ಆಟೋ, ಟ್ಯಾಕ್ಸಿ, ಬಸ್‌ ಸಂಚಾರ, ಹೋಟೆಲ್‌ ಎಲ್ಲ ಅಂಗಡಿ ಮುಂಗಟ್ಟುಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಈ ಸಂದರ್ಭದಲ್ಲಿ ಅನಿಲಕುಮಾರ ದಾಡಗೆ, ಪ್ರದೀಪ ಅಷ್ಟೂರೆ, ಸಂತೋಷ ಬಿಜಿ ಪಾಟೀಲ, ಪರಮೇಶ್ವರ ಸಿದ್ದೇಶ್ವರ, ಗೌಸುದ್ದೀನ್‌ ಭಾರತಿ ಕಿಸಾನ್‌, ಭಾವುರಾವ ನೆಲವಾಡೆ, ವಿಠಲರಾವ ಮಾಸ್ಟರ್‌, ನಾಮದೇವ ತಗರಖೇಡೆ, ವಿಶ್ವನಾಥ ಚಿಲಶೆಟ್ಟಿ, ದಿಲೀಪಕುಮಾರ ಜೋಳದಾಪೆ, ಪ್ರಕಾಶ ಮಾಶಟ್ಟೆ, ನೀಲಕಂಠ ತೂಗಾಂವೆ, ಶಿವಶರಣಪ್ಪ ಪಾತ್ರೆ, ಮನೋಹರ ಡೋಣಗಾಪುರ್‌, ಪಾಂಡುರಂಗ ಪ್ಯಾಗೆ, ಇಸ್ಮಾಯಿಲ್‌, ವಿಜಯಕುಮಾರಕಾರಬಾರಿ ಇದ್ದರು.

ಭಾರತ ಬಂದ್‌ ರಾಜಕೀಯ ಕುತಂತ್ರ: ಬಿಜೆಪಿ ಆರೋಪ :

Advertisement

ಬೀದರ: ರೈತರ ಆದಾಯ ದ್ವಿಗುಣ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿದೆ. ಆದರೆ, ಕಾಂಗ್ರೆಸ್‌ ಸೇರಿ ವಿವಿಧ ಪಕ್ಷಗಳು ವಿರೋಧಿ ಸಿ ಭಾರತ್‌ ಬಂದ್‌ಗೆ ಕರೆ ನೀಡಿವೆ. ಹೋರಾಟದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಬಿಜೆಪಿ ಆರೋಪಿಸಿದೆ.

ಈ ಕುರಿತು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಶಾಂತವೀರ ಕೇಸ್ಕರ್‌, ರಾಜ್ಯ ಕಾರ್ಯಕಾರಿಣಿ ಸದಸ್ಯ ಕುಶಾಲ ಪಾಟೀಲ ಗಾದಗಿ, ಬಿಜೆಪಿ ಜಿಲ್ಲಾ ವಕ್ತಾರ ಶಿವಪುತ್ರ ವೈದ್ಯ ಹಾಗೂ ಮಾಧ್ಯಮ ಪ್ರಮುಖ ಬಸವರಾಜ ಜೋಜನಾ ಅವರು ಪ್ರಕಟಣೆ ಹೊರಡಿಸಿದ್ದಾರೆ. ಹೊಸ ಕೃಷಿ ಕಾಯ್ದೆಸಂಬಂಧ ಹೋರಾಟ ಮಾಡಲಾಗುತ್ತಿದೆ. ಆದರೆ, 2011ರಲ್ಲಿ ಶರದ್‌ ಪವಾರ್‌ ಕೇಂದ್ರದ ಕೃಷಿ ಸಚಿವರಾಗಿದ್ದಾಗ ಇದೇ ಮಾದರಿಪ್ರಸ್ತಾವನೆ ಮುಂದಿಟ್ಟಿದ್ದರು. ಕಾಂಗ್ರೆಸ್‌ 2014 ಮತ್ತು 2019ರ ಪ್ರಣಾಳಿಕೆಯಲ್ಲಿ ಇದೇ ಅಂಶಗಳನ್ನು ಪ್ರಸ್ತಾಪಿಸಲಾಗಿದೆ. ಆದರೆ ಇದೀಗ ಕಾಂಗ್ರೆಸ್‌ ವಿರೋ ಧಿಸುತ್ತಿರುವುದು ರಾಜಕೀಯ ಕುತಂತ್ರವಾಗಿದೆ ಎಂದು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next