ಕೆ.ಆರ್.ಪೇಟೆ: ಪಟ್ಟಣ ಹೊರವಲಯದ ಸರ್ವೆ ನಂ.287ರಲ್ಲಿ ಅನುಭವದಲ್ಲಿರುವ ರೈತರನ್ನು ಒಕ್ಕ ಲೆಬ್ಬಿಸಲು ಕ್ಷೇತ್ರದ ಶಾಸಕರೂ ಆದ ಸಚಿವ ನಾರಾ ಯಣಗೌಡ, ತಾಲೂಕು ಆಡಳಿತ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿ ಪುರಸಭಾ ಸದಸ್ಯ ಕೆ.ಸಿ.ಮಂಜುನಾಥ್ ನೇತೃತ್ವದಲ್ಲಿ ಫಲಾನುಭವಿ ರೈತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದ ಮುಂದೆ ಸುದ್ದಿಗಾರರ ಜತೆ ಮಾತನಾಡಿದ ಪುರಸಭಾ ಸದಸ್ಯ ಕೆ.ಸಿ.ಮಂಜುನಾಥ್, ಪಟ್ಟಣದ ಹೊರವಲಯದ ಸರ್ವೆ ನಂ.287ರಲ್ಲಿ 135 ಎಕರೆ ಸರ್ಕಾರಿ ಗೋಮಾ ಳವಿದೆ. ಅಲ್ಲಿ ಕೆ.ಆರ್.ಪೇಟೆ ಪಟ್ಟಣ, ಪುರಸಭಾ ವ್ಯಾಪ್ತಿಯ ಹೊಸಹೊಳಲಿನ 65 ಜನ ಭೂರಹಿತ ಕಡು ಬಡವ ರೈತರಿಗೆ 1977-78 ರಲ್ಲಿ ತಲಾ ಒಂದು, ಒಂದೂವರೆ ಎಕರೆ ಭೂಮಿಯನ್ನು ದರ ಕಾಸ್ತು ಸಮಿತಿ ಮೂಲಕ ಮಂಜೂರಾತಿ ಮಾಡಿದ್ದು, ರೈತರು ಸಾಗುವಳಿ ಮಾಡುತ್ತಿದ್ದಾರೆ. ಕಂದಾಯ ಇಲಾಖೆ ಕಿಮ್ಮತ್ತು ಹಣ ಕಟ್ಟಿಸಿಕೊಂಡು ಸಾಗುವಳಿ ಚೀಟಿ ನೀಡಿದೆ ಎಂದು ಹೇಳಿದರು.
ರೈತ ಪರ ನಿಂತಿದ್ದರು: ಈ ಹಿಂದೆ ಶಾಸಕರಾಗಿದ್ದ ಮಾಜಿ ಸ್ಪೀಕರ್ ದಿ.ಕೃಷ್ಣ, ಕೆ.ಬಿ.ಚಂದ್ರಶೇಖರ್ ವಿವಿಧ ಉದ್ದೇಶಕ್ಕೆ 28 ಎಕರೆ ಭೂಮಿ ರೈತರಿಂದ ಕಿತ್ತುಕೊಳ್ಳಲು ಮುಂದಾದರು. ಫಲಾನುಭವಿ ರೈತರ ಸಂಕಷ್ಟ ಆಲಿಸಿದ ಇವರುಗಳು ರೈತರ ಪರ ನಿಂತರು ಎಂದು ಹೇಳಿದರು.
ಕಡತ ದೂಳು ಹಿಡಿಯುತ್ತಿದೆ: ಪುರಸಭೆಗೆ ಮಂಜೂರಾದ 28 ಎಕರೆ ಕೃಷಿ ಭೂಮಿಯ ಫಲಾನುಭವಿ ರೈತರು ತಹಶೀಲ್ದಾರರ ಆದೇಶದ ವಿರುದ್ಧ ಹೈಕೋರ್ಟ್ ಮತ್ತು ಕೆ.ಎ.ಟಿ ಹೋಗಿ ತಡೆಯಾಜ್ಞೆ ತಂದರು. ರೈತರ ಅಹವಾಲು ಆಲಿಸಿದ ಹೈಕೋರ್ಟ್ ರೈತರ ದಾಖಲೆಗಳನ್ನು ಪರಿಶೀಲಿಸಿ ಅರ್ಹರಿಗೆ ಜಮೀನು ನೀಡುವಂತೆ ಆದೇಶಿಸಿದ್ದು, ತಹಶೀಲ್ದಾರರ ಕಾರ್ಯಾಲಯದಲ್ಲಿ ಕಡತ ಇತ್ಯ ರ್ಥಕ್ಕಾಗಿ ಕಾದು ಕುಳಿತಿದೆ ಎಂದು ವಿವರಿಸಿದರು.
ಸಚಿವರೆ ದುಡ್ಡುಕೊಟ್ಟಿದ್ದರು: ರೈತರ ನ್ಯಾಯಾಲಯದ ಹೋರಾಟಕ್ಕೆ 2012ರಲ್ಲಿ ಇನ್ನೂ ಶಾಸಕರಾಗಿ ರದ ಇಂದಿನ ಸಚಿವ ನಾರಾಯಣಗೌಡ 50 ಸಾವಿರ ರೂ. ಧನ ಸಹಾಯ ಮಾಡಿದ್ದರು. ಅಂದು ರೈತರ ಪರವಾಗಿದ್ದ ನಾರಾಯಣಗೌಡ, ಸಚಿವರಾದ ಕೂಡಲೇ ರಾಜಕೀಯ ಲಾಭಕ್ಕಾಗಿ ಸಾಗುವಳಿಯಲ್ಲಿರುವ ರೈತರನ್ನು ಒಕ್ಕಲೆಬ್ಬಿಸಿ, ಸಾಗುವಳಿ ಭೂಮಿಯನ್ನು ವಿವಿಧ ಉದ್ದೇಶಗಳಿಗೆ ನೀಡಲು ಮುಂದಾಗಿರುವ ಕ್ರಮ ಅವರಿಗೆ ಶೋಭೆ ತರುವು ದಿಲ್ಲ ಎಂದು ಕಿಡಿಕಾರಿದರು.
ಸಚಿವರ ಏಜೆಂಟರಂತೆ ಕೆಲಸ ನಿರ್ವಹಿಸದಿರಿ: ಸಚಿವ ನಾರಾಯಣಗೌಡರ ಮತಬ್ಯಾಂಕ್ ರಾಜ ಕಾರಣ ವನ್ನು ಖಂಡಿಸಿದ ಕೆ.ಸಿ.ಮಂಜುನಾಥ್, ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿದರೆ ನಾವು ಅವರನ್ನು ಗೌರವಿಸುತ್ತೇವೆ. ಅದನ್ನು ಬಿಟ್ಟು ಸಚಿವ ನಾರಾಯಣಗೌಡರ ರಾಜಕೀಯ ಏಜೆಂಟರಂತೆ ಕೆಲಸ ಮಾಡಿ ಸುಳ್ಳು ವರದಿ ತಯಾರಿಸಿ ಜನ ರನ್ನು ವಂಚಿಸುವ ಕೆಲಸ ಮಾಡಿದರೆ ಅದರ ಪರಿ ಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪುರಸಭಾ ಸದಸ್ಯ ಡಿ.ಪ್ರೇಮ್‌ಕುಮಾರ್, ಮಾಜಿ ಅಧ್ಯಕ್ಷ ಚಂದ್ರೇಗೌಡ, ಮಾಜಿ ಸದಸ್ಯ ಎಚ್. ಜಿ.ಗೋಪಾಲ್, ಮುಖಂಡ ರಮೇಶ್ ಉಪಸ್ಥಿತರಿದ್ದರು