Advertisement

ಕೇಂದ್ರದ ನಡೆ ಖಂಡಿಸಿ ರೈತರ ಪ್ರತಿಭಟನೆ

05:16 PM Jan 31, 2021 | Team Udayavani |

ಮುಧೋಳ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಹತ್ತಿಕ್ಕುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರತಿಭಟನಾನಿರತ ರೈತರ ಮನೆಗಳ ಮೆಲೆ ದಾಳಿ ನಡೆಸುತ್ತಿದೆ ಎಂದು ಆರೋಪಿಸಿ ನಗರದ ಗಾಂಧಿ  ವೃತ್ತದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಪ್ರತಿಭಟನೆ ನಡೆಸಿದರು.

Advertisement

ಕೇಂದ್ರದ ನಡೆಯಿಂದ ಪ್ರತಿಭಟನಾಕಾರರು ಹಿಂಜರಿಯುವುದಿಲ್ಲ. ಕೇಂದ್ರ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಕೃಷಿ ಕಾಯ್ದೆ ರದ್ದುಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಕೋವಿಡ್ ಹೆಸರಲ್ಲಿ ದೇಶದ ಜನರನ್ನು ಮನೆಯೊಳಗೆ ಕೂಡಿಹಾಕಿ ರೈತ ವಿರೋಧಿ ಕಾಯ್ದೆ ಜಾರಿಗೆ ತಂದಿದ್ದಾರೆ. ಶ್ರೀಮಂತರ ಅನುಕೂಲಕ್ಕೆ ಕಾನೂನು ಜಾರಿಗೆ ತರುತ್ತಿರುವ ಮೋದಿ ಬಡವರು ಹಾಗೂ ರೈತರ ಹಿತಾಸಕ್ತಿ ಮರೆತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ:ಕೇಂದ್ರದಿಂದ ರೈತರ ಮೇಲೆ ದಬ್ಬಾಳಿಕೆ

ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆ, ಮುಖಂಡರಾದ ಸಿದ್ದು ಉಳ್ಳಾಗಡ್ಡಿ, ಯಂಕಣ್ಣ ಮಳಲಿ, ಮಲ್ಲಪ್ಪ ದೇಸಾಯಿ, ಸದಾಶಿವ ಮಡ್ಡೆಪ್ಪನವರ, ದುಂಡಪ್ಪ ಕುಡಚಿ, ಕಲ್ಲಪ್ಪ ನಾಗರಾಳ, ಸುರೇಶ ಚಿಂಚಲಿ, ಶಂಕರ ನಾಯಕ, ಚಂದ್ರಶೇಖರ ನಿಂಗನ್ನವರ,ದೇವಪ್ಪ ನಾಗನೂರ, ಬಸಲಿಂಗಪ್ಪ ಸಾವಂತ, ರಮೇಶ ಕಡ್ಲಿ  ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next