Advertisement

ರೈತರಿಗೆ ನೀರು ಕೊಡಿ; ಇಲ್ಲವೇ ರಾಜೀನಾಮೆ ನೀಡಿ: ರವೀಶ್‌

06:45 PM Aug 18, 2020 | Suhan S |

ಚಿಕ್ಕಮಗಳೂರು: ನೀವು ಜಿಲ್ಲೆಯ ಉಸ್ತುವಾರಿ ಮಂತ್ರಿ. ರೈತರಿಗೆ ನೀರು ಕೊಡಿ ಎಂದು ಹೋರಾಟ ಮಾಡಿದ್ದೇವೆ. ಹೊಟ್ಟೆಪಾಡಿಗೆ ನಾವು ಹೋರಾಟ ಮಾಡುತ್ತಿಲ್ಲ. ರೈತರಿಗೆ ನೀರು ಕೊಡಿ ಇಲ್ಲವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಕರಗಡ ಹೋರಾಟ ಸಮಿತಿ ರವೀಶ್‌ ಕ್ಯಾತನಬೀಡು ಆಕ್ರೋಶ ವ್ಯಕ್ತಪಡಿಸಿದರು.

Advertisement

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆ ಸಂಬಂಧ ಯಾರೂ ಮನವಿ ನೀಡಿಲ್ಲ ಎಂಬ ಸಚಿವ ಸಿ.ಟಿ. ರವಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಈ ಹಿಂದೆಕರಗಡ ಯೋಜನೆ ಪೂರ್ಣಗೊಳಿಸುವಂತೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದವರು ಯಾರು? ಅವರಿಗೆ ಯಾವ ರೀತಿ ಮನವಿ ನೀಡಬೇಕು. ನೀವೇಸ ರ್ಕಾರಕ್ಕೆ ಮನವಿ ನೀಡಿದ ಅರಿವಿಲ್ಲವೇ ಎಂದು ಪ್ರಶ್ನಿಸಿದರು.

ಅಭಿವೃದ್ಧಿ ಸಹಿಸದೆ ಹೊಟ್ಟೆಕಿಚ್ಚಿಗೆ ಹೋರಾಟಕ್ಕೆ ಮುಂದಾಗಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ರವೀಶ್‌, ನಿಮ್ಮ ಅಭಿವೃದ್ಧಿ ಗೊತ್ತಿದೆ. ನಗರದ ಕೋಟೆಕೆರೆ, ಬಸವನಹಳ್ಳಿಕೆರೆ ನೋಡಿದರೇ ಗೊತ್ತಾಗುತ್ತದೆ. ಎಂ.ಜಿ. ರಸ್ತೆ, ಅಗಲೀಕರಣ ಸಂದರ್ಭದಲ್ಲಿ ನೀವೆಷ್ಟು ಅಭಿವೃದ್ಧಿ ಪರ ಎಂಬುದು ನಮಗೆ ಗೊತ್ತಿದೆ. ಜೆಸಿಬಿ ಅಡಿ ಮಲಗಿ ಪ್ರತಿಭಟನೆ ಮಾಡಿದವರು ಯಾರು ಎಂಬುದು ತಿಳಿದಿದೆ ಎಂದರು.

ಕರಗಡ ಹೋರಾಟ ಸಮಿತಿಯ ಎಚ್‌. ಎಂ. ರೇಣುಕಾರಾಧ್ಯ ಮಾತನಾಡಿ, ಕರಗಡ ಯೋಜನೆ ಸಂಬಂಧ ರಾಜ್ಯದಲ್ಲಿ ಮೂರು ಪಕ್ಷ ಅಧಿಕಾರದಲ್ಲಿ ಇದ್ದಾಗಲೂ ಹೋರಾಟ ಮಾಡಿದ್ದೇವೆ. ರೈತರ, ಬಡವರ ಪರ ಹೋರಾಟ ಮಾಡಿದರೆ ತಪ್ಪೇ? ಅವರು ಹೋರಾಟ ಮಾಡಿದರೆ ಮಾತ್ರ ಸರಿಯೇ ಎಂದು ಪ್ರಶ್ನಿಸಿದರು. ಸೋಕಾಲ್ಡ್‌ ಹೋರಾಟಗಾರರು ಎಂದು ಅವಹೇಳನ ಮಾಡಿದ್ದಾರೆ. ಅಧಿಕಾರ ಶಾಶ್ವತವಲ್ಲ, ನಿಮ್ಮ ಕುತಂತ್ರ ರಾಜಕಾರಣವನ್ನು ನಿಮ್ಮೊಳಗೆ ಇಟ್ಟುಕೊಂಡು ಕರಗಡ ಯೋಜನೆ ಬಗ್ಗೆ ಸರ್ಕಾರ ಮೇಲೆ ಒತ್ತಡ ತಂದು ಯೋಜನೆ ಪೂರ್ಣಗೊಳಿಸಿ ಎಂದರು.

ಹೋರಾಟ ಸಮಿತಿಯ ನಟರಾಜ್‌ ಎಸ್‌. ಕೊಪ್ಪಲು ಮಾತನಾಡಿ, ರೈತರು ನೀರು ಕೇಳುವುದು ಹೊಟ್ಟೆಕಿಚ್ಚೇ? ಯೋಜನೆ ಪೂರ್ಣಗೊಳಿಸುವಂತೆ ಚಿಕ್ಕದೇವನೂರಿನಿಂದ ಚಿಕ್ಕಮಗಳೂರಿಗೆ ಬೈಕ್‌ ಜಾಥಾ ನಡೆಸಿದಾಗ ಸಿ.ಟಿ. ರವಿಅವರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಹೋರಾಟಗಾರರು ಈಗ ಹೇಗೆ ಸೋಕಾಲ್ಡ್‌ ಹೋರಾಟಗಾರರಾದರು ಎಂದರು.

Advertisement

ಹೋರಾಟವನ್ನು ಹತ್ತಿಕ್ಕಲು ಆ.12ರ ರಾತ್ರಿಯಿಂದ ಮೋಟಾರ್‌ನಲ್ಲಿ ನಾಲೆಗೆ ನೀರು ಹಾಯಿಸುವ ಕೆಲಸ ಮಾಡಿದರು. ನಮಗೆ ಶಾಶ್ವತವಾಗಿ ನೀರು ಹರಿಯುವಂತೆ ಮಾಡಬೇಕು ಎಂದರು. ಪಂಪ್‌ಸೆಟ್‌ ಇಟ್ಟು ಕಾಲುವೆಯಲ್ಲಿ ನೀರು ಹರಿಸುವುದನ್ನು ಕೈಬಿಡಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next