ಕೆ.ಆರ್.ಪೇಟೆ: ತಾಲೂಕಿನ ಕೋರಮಂಡಲ್ ಸಕ್ಕರೆ ಕಾರ್ಖಾನೆಯಲ್ಲಿಕಬ್ಬು ಕಟಾವು ಕಾರ್ಮಿಕರು ಮತ್ತು ಲಾರಿ ಚಾಲಕರಿಂದ ನಡೆಯುತ್ತಿರುವ ಕಬ್ಬು ಬೆಳೆಗಾರರ ಶೋಷಣೆಯನ್ನು ತಡೆಗಟ್ಟಬೇಕು ಎಂದು ತಾಲೂಕು ರೈತ ಸಂಘ ಒತ್ತಾಯಿಸಿದೆ.
ಪಟ್ಟಣದ ಮಿನಿ ವಿಧಾನ ಸೌಧ ಸಭಾಂಗಣದಲ್ಲಿ ತಹಶೀಲ್ದಾರ್ ಎಂ.ಶಿವಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ರೈತ ಸಂಘ ಮತ್ತು ಕೋರಮಂಡಲ್ ಕಾರ್ಖಾನೆ ಪ್ರತಿನಿಧಿಗಳ ಸಭೆಯಲ್ಲಿ ರೈತರು ಆಗ್ರಹಿಸಿದರು.
ರೈತ ಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್ ಮಾತನಾಡಿ,ಕಳೆದನಾಲ್ಕುವರ್ಷದಿಂದಕಾರ್ಖಾನೆ ಕಬ್ಬಿನ ಬೆಲೆ ಹೆಚ್ಚಿಸಿಲ್ಲ. ಕೇಂದ್ರದ ನಿಗದಿಪಡಿಸಿರುವ ಎಫ್ಆರ್‌ಪಿ ದರವೇ ಹೊರತು ಅದಕ್ಕಿಂತ ಹೆಚ್ಚು ಬೆಲೆ ನೀಡಬಾರದು ಎಂದು ಹೇಳಿಲ್ಲ. ಆದರೆ, ಕಾರ್ಖಾನೆಯವರು ಎಫ್ಆರ್‌ಪಿ ದರವನ್ನೇ ಮೂಲವನ್ನಾಗಿಸಿಕೊಂಡು ಹೆಚ್ಚು ಬೆಲೆ ನೀಡದೆ ರೈತರನ್ನು ವಂಚಿಸುತ್ತಿದ್ದಾರೆ ಎಂದು ದೂರಿದರು.
ಅನುಕೂಲ ಕಲ್ಪಿಸಲು ವಿಫಲ: ಕಾರ್ಖಾನೆ ವ್ಯಾಪ್ತಿಯಲ್ಲಿ ಕಬ್ಬು ಬೆಳೆಗಾರರಿಗೆ ಹೆಚ್ಚು ಬೆಲೆ ನೀಡದೆ ವಂಚಿಸುತ್ತಿದ್ದಾರೆ. ಅಲ್ಲದೆ, ಕಾರ್ಖಾನೆ ಸಿಬ್ಬಂದಿ ಮತ್ತುಕಬ್ಬುಕಟಾವುಕಾರ್ಮಿಕರ ನಡುವೆ ಅನೈತಿಕ ಒಳ ಒಪ್ಪಂದ ನಡೆದು ಪ್ರತಿ ಟನ್ ಕಬ್ಬು ಕಟಾವಿಗೆ ಕಾರ್ಖಾನೆ ನಿಗದಿಪಡಿಸಿದ ದರಕ್ಕಿಂತ 2-3 ಪಟ್ಟು ಹೆಚ್ಚು ಪಡೆಯಲಾಗುತ್ತಿದೆ. ಪ್ರತಿವರ್ಷ ರೈತರು ಇದರ ವಿರುದ್ಧ ಧ್ವನಿಯೆತ್ತಿದರು ಕಾರ್ಖಾನೆ ಆಡಳಿತ ಮಂಡಲಿ ವ್ಯವಸ್ಥೆ ಸರಿಪಡಿಸಿ ರೈತರಿಗೆ ಅನುಕೂಲ ಮಾಡಲು ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಸಮಸ್ಯೆಗೆ ಸ್ಪಂದಿಸಿಲ್ಲ: ಕಾರ್ಖಾನೆಯ ಹಿಂದಿನ ಉಪಾಧ್ಯಕ್ಷರಾಗಿದ್ದ ಪವನ್ ಕುಮಾರ್ ಅವರು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಆದರೆ, ಇಂದಿನ ಉಪಾಧ್ಯಕ್ಷ ರವಿರೆಡ್ಡಿ ನಮ್ಮ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಸಮಸ್ಯೆಗಳನ್ನುಪರಿಹರಿಸಬೇಕಾದ ಕಾರ್ಖಾನೆ ಉಪಾಧ್ಯಕ್ಷರು ಸಭೆಗೆ ಹಾಜರಾಗಿಲ್ಲ. ರೈತರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ನ.17ರಂದು ತಾಲೂಕು ರೈತ ಸಂಘದಿಂದ ಮಿನಿ ವಿಧಾನ ಸೌಧದ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಮುಖಂಡ ಮರುವನಹಳ್ಳಿ ಶಂಕರ್ ಎಚ್ಚರಿಸಿದರು.
ಕೋರಮಂಡಲ್ ಕಾರ್ಖಾನೆ ಕಬ್ಬು ಅಭಿವೃದ್ಧಿ ಅಧಿಕಾರಿ.ಕೆ.ಬಾಬುರಾಜ್, ಕಬ್ಬು ವಿಭಾಗದ ದತ್ತಾತ್ರೇಯ, ರೈತ ಮುಖಂಡರಾದ ಎಲ್ .ಬಿ.ಜಗದೀಶ್, ಮುದ್ದುಕುಮಾರ್, ಪುಟ್ಟೇಗೌಡ, ಹೊನ್ನೇಗೌಡ, ನಾರಾಯಣ ಸ್ವಾಮಿ, ಕರೋಟಿ ತಮ್ಮಯ್ಯ, ಮಡುವಿನಕೋಡಿ ಪ್ರಕಾಶ್, ಮಧು, ಕೃಷ್ಣೇಗೌಡ ಉಪಸ್ಥಿತರಿದ್ದರು.