Advertisement

ಬಹೂಪಯೋಗಿ ಬೀಜ ಸಂಸ್ಕರಣ ಯಂತ್ರ ಆವಿಷ್ಕಾರ

06:00 AM Sep 26, 2018 | Team Udayavani |

ರಾಯಚೂರು: ಕೃಷಿ ಕ್ಷೇತ್ರದ ಪ್ರಗತಿಗೆ ವಿಜ್ಞಾನಿಗಳು ಹತ್ತು ಹಲವು ರೀತಿಯ ಯಂತ್ರಗಳನ್ನು ಆವಿಷ್ಕರಿಸುತ್ತಲೇ ಇದ್ದಾರೆ. ರೈತರ ಶ್ರಮ, ಖರ್ಚು ಹಾಗೂ ಸಮಯ ಉಳಿಸುವಲ್ಲಿ ಅವುಗಳ ಪಾತ್ರ ಗಣನೀಯ. ಅಂಥದ್ದೇ ಯಂತ್ರವೊಂದು ಇಲ್ಲಿನ ಕೃಷಿ ವಿವಿಯಲ್ಲಿ ಅಳವಡಿಕೆಯಾಗಿದ್ದು, ಗಮನ ಸೆಳೆಯುತ್ತಿದೆ. ಈ ಯಂತ್ರ ಏಕಕಾಲಕ್ಕೆ ಹಲವು ಕೆಲಸಗಳನ್ನು ಮಾಡುವುದು ವಿಶೇಷ. ಕೃಷಿ ವಿವಿಯ ಬೀಜ ಘಟಕದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಬೀಜ ಸಂಸ್ಕರಣೆ, ಒಣಗಿಸುವಿಕೆ ಮತ್ತು ಪ್ಯಾಕಿಂಗ್‌ ಮಾಡುವ ಯಂತ್ರವಿದೆ. ಇಡೀ ದೇಶದಲ್ಲಿ ಸಾರ್ವಜನಿಕ ವಲಯದಲ್ಲಿ ಇರುವಂಥ
ಏಕೈಕ ಘಟಕ ಇದಾಗಿದ್ದು, ರಾಜ್ಯದ ಮಟ್ಟಿಗೆ ಖಾಸಗಿ ವಲಯದಲ್ಲೂ ಇಂಥ ಯಂತ್ರ ಅಳವಡಿಕೆ ಆಗಿಲ್ಲ ಎಂಬುದು ಗಮನಾರ್ಹ.

Advertisement

ಏನಿದರ ವಿಶೇಷ?: ಕೇಂದ್ರ ಸರ್ಕಾರದ ಭಾರತೀಯ ಸಂಶೋಧನಾ ಮಂಡಳಿಯು (ಎಸಿಎಆರ್‌) ಬೀಜ ಕೇಂದ್ರದ ಯೋಜನೆಯಿಂದ 2017ರಲ್ಲಿ ಕೃಷಿ ವಿವಿ ಆವರಣದ ಬೀಜ ಘಟಕದಲ್ಲಿ ವಿಶೇಷ ಯಂತ್ರವನ್ನು ಅಳವಡಿಸಿದೆ. ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಈ ಘಟಕ ಸ್ಥಾಪಿಸಲಾಗಿದೆ. ಎಲ್ಲ ಬೆಳೆಯ ಬೀಜಗಳನ್ನು ಈ ಯಂತ್ರದಲ್ಲಿ ಸಂಸ್ಕರಿಸುವುದರ ಜತೆಗೆ ರಾಸಾಯನಿಕ ಮಿಶ್ರಣ ಮಾಡಿ, ಒಣಗಿಸಿ, ಅಗತ್ಯಕ್ಕೆ ಅನುಸಾರ ಪ್ಯಾಕಿಂಗ್‌ ಮಾಡಬಹುದು. ಬೀಜ ಘಟಕದಲ್ಲಿರುವ ಹಳೇ ಯಂತ್ರದಲ್ಲಿ ಬೀಜಗಳನ್ನು ಹಾಕಿ ಕಸ ಕಡ್ಡಿ ಪ್ರತ್ಯೇಕಿಸಲಾಗುವುದು. ಬಳಿಕ ಹೊಸ ಯಂತ್ರದಲ್ಲಿ ಬೀಜಗಳನ್ನು ಹಾಕಿ ಅವುಗಳಿಗೆ ಬೇಕಾದಂಥ ರಾಸಾಯನಿಕ ಪದಾರ್ಥ ಮಿಶ್ರಣ ಮಾಡಿ ಬೀಜವನ್ನು ಒಣಗಿಸಿ ಅವುಗಳನ್ನು ಅಗತ್ಯಕ್ಕೆ ಅನುಸಾರ 10 ಕೆಜಿಯಿಂದ 50 ಕೆಜಿವರೆಗೆ ಪ್ರತ್ಯೇಕ ಪ್ಯಾಕಿಂಗ್‌ ಮಾಡಬಹುದು.

ಒಂದು ಗಂಟೆಗೆ ಸುಮಾರು 30ರಿಂದ 40 ಕ್ವಿಂಟಲ್‌ ಬೀಜಗಳನ್ನು ಪ್ಯಾಕ್‌ ಮಾಡಬಹುದು. ಕಳೆದ ಒಂದು ವರ್ಷದಲ್ಲಿ 55 ಸಾವಿರ ಕ್ವಿಂಟಲ್‌ಗ‌ೂ ಅಧಿಕ
ಬೀಜೋತ್ಪಾದನೆ ಮಾಡಲಾಗಿದೆ. ಕಡಲೆ, ತೊಗರಿ, ಕುಸುಬೆ, ಹೆಸರು, ಜೋಳ, ಸೂರ್ಯ ಕಾಂತಿ ಸೇರಿ ಎಲ್ಲ ರೀತಿಯ ಬೆಳೆಗಳ ಬೀಜೋತ್ಪಾದನೆಯನ್ನು ಈ ಆಧುನಿಕ ಯಂತ್ರದಿಂದ ಮಾಡಬಹುದು. ಅಲ್ಲದೇ, ಕೈಯಿಂದ ಮಾಡುವಾಗ ರಾಸಾಯನಿಕ ಬಳಕೆಯಿಂದ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆಗಳಿದ್ದವು. ಈ ಯಂತ್ರದಿಂದ ಆ ತಾಪತ್ರಯ ಇಲ್ಲ. ಅಲ್ಲದೇ, ಸಬ್ಸಿಡಿ ದರದಲ್ಲಿ ಈ ಯಂತ್ರ
ಲಭ್ಯವಿದ್ದು, ರೈತರು ಸದ್ಬಳಕೆ ಮಾಡಿಕೊಳ್ಳಬಹುದು ಎಂಬುದು ಘಟಕದ ಅ ಧಿಕಾರಿಗಳ ವಿವರಣೆ.

ಕೇಂದ್ರ ಸರ್ಕಾರದ ಭಾರತೀಯ ಸಂಶೋಧನಾ ಮಂಡಳಿಯು (ಎಸಿ ಎಆರ್‌) ಬೀಜ ಕೇಂದ್ರದ ಯೋಜನೆಯಿಂದ ಈ ಯಂತ್ರ ಅಳವಡಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಒಳಗೊಂ ಡಿದ್ದು, ಬೀಜ ಸಂಸ್ಕರಣೆ, ಒಣಗಿಸುವಿಕೆ ಮತ್ತು ಪ್ಯಾಕಿಂಗ್‌ ಮಾಡಬಹುದು. ಇದರಿಂದ ಖರ್ಚು, ಶ್ರಮ ಕಡಿಮೆಯಾಗಲಿದೆ. ಇದು ದೇಶದ ಸಾರ್ವಜನಿಕ ವಲಯದಲ್ಲಿರುವ ಏಕೈಕ ಯಂತ್ರವಾಗಿದೆ.
● ಡಾ.ಬಸವೇಗೌಡ, ವಿಶೇಷಾಧಿಕಾರಿ, ಬೀಜ ಘಟಕ, ಕೃಷಿ ವಿವಿ

Advertisement

Udayavani is now on Telegram. Click here to join our channel and stay updated with the latest news.

Next