Advertisement
ತಾಲೂಕಿನ ತೆರಕಣಾಂಬಿ ಮತ್ತು ಕಸಬಾ ಹೋಬಳಿಯ ಹಲವು ಕಡೆಗಳಲ್ಲಿ ಗುರುವಾರ ಮತ್ತು ಶುಕ್ರವಾರ ಉತ್ತಮ ಮಳೆಯಾಗಿದೆ. ಮಳೆಯಿಂದಾಗಿ ಬಿಗಿಯಾಗಿದ್ದ ಭೂಮಿ ತಂಪಿನಿಂದ ತಣ್ಣಗಾಗಿದ್ದರೆ, ಮುಂಗಾರಿನ ಫಸಲು ತೆಗೆಯುವ ಹುಮ್ಮಸ್ಸಿನಲ್ಲಿ ರೈತರು ವ್ಯವಸಾಯ ಚಟುವಟಿಕೆ ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.
Related Articles
Advertisement
ಅದೇ ರೀತಿ ಕಸಬಾ ಹೋಬಳಿಯ ಪಶ್ಚಿಮ ಭಾಗದ ಕಾಡಂಚಿನ ಗ್ರಾಮಗಳಾದ ಬರಗಿ, ಹೊಂಗಹಳ್ಳಿ, ಚನ್ನಮಲ್ಲಿಪುರ, ಬೇರಂಬಾಡಿ, ಗೋಪಾಲಪುರ, ಭೀಮನಬೀಡು ಸುತ್ತಮುತ್ತ ಮಧ್ಯಾಹ್ನ ಮೂರು ಗಂಟೆ ವೇಳೆಗೆ ಪ್ರಾರಂಭವಾದ ಮಳೆ ಸತತವಾಗಿ 4 ಗಂಟೆಗಳ ಕಾಲು ಸುರಿಯಿತು.
ತುಂಬಾ ದಿನಗಳಿಂದ ಬಿಸಿಲ ಬೇಗೆಯಿಂದ ಗಟ್ಟಿಯಾಗಿದ್ದ ಭೂಮಿಗೆ ಇದರಿಂದ ಉಳುಮೆ ಮಾಡಲು ಆಸಕ್ತ ವಾತಾವರಣ ಉಂಟಾಯಿತು. ಈ ಪ್ರದೇಶದ ಜನರು ಶೀಘ್ರದಲ್ಲಿ ಚೆಂಡುಮಲ್ಲಿಗೆ ಹೂವಿನ ಬಿತ್ತನೆ ಬೀಜ ಪಡೆದು ಒಟ್ಟು ಮಾಡಲಿದ್ದಾರೆ. 15 -20 ದಿನಗಳಲ್ಲಿ ನಾಟಿ ಮಾಡುವ ಮೂಲಕ ಮುಂಗಾರಿನ ಫಸಲಿನ ಪ್ರಾರಂಭವಾಗುತ್ತದೆ. ಇನ್ನು ಪಟ್ಟಣ ಪ್ರದೇಶದಲ್ಲಿ ಮಳೆ ಹೆಚ್ಚಿನ ಘರ್ಜನೆ ನಡೆಸದಿದ್ದರೂ, ಚುನಾವಣಾ ಕಾವಿನಲ್ಲಿ ಮುಳುಗಿದ್ದ ಜನರಲ್ಲಿ ಉತ್ಸಾಹದ ಸೆಲೆ ಚಿಮ್ಮಿಸಿದೆ.