Advertisement

ರೈತ ಪರ ಆಡಳಿತ, ಸರ್ಕಾರ ನಮ್ಮದು

07:26 AM Feb 16, 2019 | Team Udayavani |

ಚನ್ನರಾಯಪಟ್ಟಣ: ರಾಜ್ಯದಲ್ಲಿ ಎರಡು ಭಾರಿ ಮೈತ್ರಿ ಆಧಾರದ ಮೇಲೆ ಸರ್ಕಾರ ರಚನೆಯಾಗಿದ್ದು ದೇವರ ಆಶೀರ್ವಾದದಿಂದ ಹಾಗಾಗಿ ದೇವರ ಮಕ್ಕಳಾದ ರೈತರ ಪರವಾಗಿ ಆಡಳಿತ ನಡೆಸುವುದೇ ನನ್ನ ಮುಖ್ಯ ಉದ್ದೇಶ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

Advertisement

ತಾಲೂಕಿನ ದಂಡಿಗನಹಳ್ಳಿ ಹೋಬಳಿ ಬಿರೂರು ಗ್ರಾಮದ ಸಮೀದಲ್ಲಿ ನಡೆದ ತಾಲೂಕಿನ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ರೈತರ ಪರವಾಗಿ ಆಡಳಿತ ಮಾಡುವುದಕ್ಕೆ ಯಾರೂ ಅಂಜುವ ಅಗತ್ಯವಿಲ್ಲ. ಹಲವು ಮಂದಿ ಹಾಸನ ಬಜೆಟ್‌ ಎನ್ನುತ್ತಾರೆ ಆದರೆ ರಾಜ್ಯದ ರೈತರ ಹಿತದೃಷ್ಟಿಯಿಂದ ಬಜೆಟ್‌ ಮಂಡಣೆ ಮಾಡಿದ್ದೇನೆ. ಎಂಎನ್‌ಸಿ ಸಂಸ್ಥೆಗಳು ರೈತರ ಒಡವೆ ಜೊತೆ ಅಧಿಕ ಬಡ್ಡಿ ವಸೂಲಿಗೆ ಮುಂದಾಗಿದ್ದರು ಇದಕ್ಕೆ ಖಡಿವಾಣ ಹಾಕಿದ್ದೇನೆ ಎಂದರು.

ಅರಸೀಕೆರೆ, ಚನ್ನರಾಯಪಟ್ಟಣ, ತಿಪಟೂರು ತಾಲೂಕಿನ ತೆಂಗು ಬೆಳೆಗಾರರು ಬರಗಾಲದಿಂದ ಕಂಗಾಗಲಾಗಿ ಆತ್ಮಹತ್ಯೆ ದಾರಿ ಹಿಡಿದಿದ್ದರು ಹಲವು ಸಲ ಈ ಕ್ಷೇತ್ರದ ಶಾಸಕ ದೇವೇಗೌಡರೊಂದಿಗೆ ಕೇಂದ್ರಕ್ಕೆ ಮನವಿ ಮಾಡಿದರು ಪ್ರಯೋಜನವಾಗಲಿಲ್ಲ. ರೈತರ ಹಿತದೃಷ್ಟಿಯಿಂದ ಎಕರೆ ತೆಂಗು ನಾಶವಾಗಿದ್ದರೆ 18 ರಿಂದ 20 ಸಾವಿರ ಪರಿಹಾರ ನೀಡುತ್ತಿದ್ದೇನೆ ಇದು ಹಾಸನಕ್ಕೆ ಮಾತ್ರ ಸೀಮಿತವಲ್ಲ ಎಂದರು.

2 ಕಂತ್ತಿನಲ್ಲಿ ಸಾಲಮನ್ನಾ: ನಾಲ್ಕು ತಿಂಗಳಲ್ಲಿ ಮೊದಲ ರಾಜ್ಯದ 12 ಸಾವಿರ ಕೋಟಿ ರೂ. ಸಾಲಮನ್ನ ಮಾಡಲಾಗುತ್ತಿದ್ದು, ಸುಮಾರು 6 ಲಕ್ಷ ರೈತರು ಋಣ ಮುಕ್ತರಾಗಲಿದ್ದಾರೆ. ಮುಂದಿನ ಮಾರ್ಚ್‌ ಅಂತ್ಯಕ್ಕೆ ಉಳಿಕೆ ಹಣ ಬಿಡುಗಡೆ ಮಾಡುವ ಮೂಲಕ ಕೇವಲ 2 ಕಂತ್ತಿನಲ್ಲಿ ರಾಜ್ಯದ ಎಲ್ಲಾ ರೈತರನ್ನು ಬೆಳೆ ಸಾಲದಿಂದ ಮುಕ್ತಿ ಹೊಂದುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ತಪ್ಪಿದ ಮಧ್ಯವರ್ತಿ ಕಾಟ: ಬೆಳೆ ಸಾಲ ಮನ್ನ ಮಾಡಲು ಹಲವು ನಿಬಂಧನೆ ಹಾಕಿರುವುದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಲಿದೆ, ಇಲ್ಲದೆ ಹೋಗಿದ್ದರೆ ರೈತರ ಹಾಗೂ ಬ್ಯಾಂಕ್‌ ನಡುವೆ ದಲ್ಲಾಳಿಗಳು ಹುಟ್ಟಿಕೊಂಡು ಸರ್ಕಾರದ ಹಣ ಲೂಟಿಕೋರರ ಪಾಲಾಗತ್ತಿತ್ತು ಆದ್ದರಿಂದ ನಿಬಂಧನೆ ಹಾಕಲಾಗಿದೆ ಇದಕ್ಕೆ ವಿರೋಧ ಪಕ್ಷಗಳು ಅನ್ಯ ಅರ್ಥ ಕಲ್ಪಿಸುತ್ತಿವೆ ಎಂದು ಹೇಳಿದರು.

Advertisement

ಮುಂದಿನ ಬಜೆಟ್‌ ಜನಪರಕ್ಕೆ ಸೀಮಿತ: ಸಾಲಮನ್ನಾದಿಂದ ಈ ಭಾರಿ ಹೊಸ ಯೋಜನೆ ಜಾರಿಗೆ ತರಲು ಸಾಧ್ಯವಾಗಲಿಲ್ಲ ಮುಂದಿನ ಸಾಲಿನಲ್ಲಿ ರೈತರ ಸಾಲ ಸಂಪೂರ್ಣ ಮನ್ನಾ ಆದ ಮೇಲೆ ಆರ್ಥಿಕವಾಗಿ ಸರ್ಕಾರ ಸದೃಢತೆ ಹೊಂದುವುದರಿಂದ ಹಲವು ಜನಪರ ಯೋಜನೆಗಳನ್ನು ತರಲಾಗುವುದು. ಅಲ್ಲಿಯವರೆಗೆ ರೈತರಿಗಾಗಿ ರಾಜ್ಯದ ಜನತೆ ತಾಳ್ಮೆಯಿಂದ ಇರಬೇಕು ಎಂದು ಮನವಿ ಮಾಡಿದರು.

ಪ್ರವಾಸೋದ್ಯಮಕ್ಕೆ ಆದ್ಯತೆ: ಹಾಸನ ಜಿಲ್ಲೆಯಲ್ಲಿ ಹೇಮಾವತಿ ಹಾಗೂ ಯಗಜಿ ಅಣೆಕಟ್ಟೆಗಳು ಇರುವುದರಿಂದ ಆ ಎರಡು ಸ್ಥಳಗಳಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಆಸಕ್ತಿ ನೀಡುವ ಮೂಲಕ ಜಿಲ್ಲೆಯ ವಿದ್ಯಾವಂತ ಯುವಕರಿಗೆ ಉದ್ಯೋಗ ಸೃಷ್ಟಿ ಹಾಗೂ ಜಿಲ್ಲೆಯನ್ನು ಪ್ರವಾಸ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಲಾಗುವುದು. ಈಗಾಗಲೇ ಕೆಆರ್‌ಎಸ್‌ ಅಣೆಕಟ್ಟೆಯನ್ನು ಪ್ರವಾಸೋದ್ಯಮದ ಮೂಲಕ ಆದ್ಯತೆ ನೀಡಲು ಮುಂದಾಗಿದ್ದೆವು. ಅದಕ್ಕೂ ತೊಂದರೆ ನೀಡುತ್ತಿದ್ದಾರೆ ಎಂದರು.

ಶೀಘ್ರದಲ್ಲಿ ಬೇಲೂರಿಗೆ ಆಗಮನ: ಬೇಲೂರಿನ ರಣಘಟ್ಟ ನೀರಾವರಿಗೆ ಯೋಜನೆಗೆ ಈಗಾಗಲೆ 100 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಶಂಕುಸ್ಥಾಪನೆ ಮಾಡಲು ಅತಿ ಶೀಘ್ರದಲ್ಲಿ ದೇವೇಗೌಡರೊಂದಿಗೆ ಮತ್ತೆ ಜಿಲ್ಲೆಗೆ ಆಗಮಿಸುತ್ತೇನೆ ಎಂದು ಹೇಳಿದರು. ಅಕರಲಗೂರು ಕ್ಷೇತ್ರದ ಅಭಿವೃದ್ದಿಗೂ ನೂರಾರು ಕೋಟಿ ಹಣ ನೀಡಲಾಗಿದೆ, ರೈತರು ನೆಮ್ಮದಿಯಿಂದ ಬದುಕು ಉತ್ತಮ ಆಡಳಿತ ನೀಡುತ್ತೆನೆ ಅವರಿಗಾಗಿ ನಾನು ಎಂತಹ ತ್ಯಾಗಕ್ಕೂ ಸಿದ್ದನಾಗಿರುತ್ತೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next