Advertisement

ಜಮೀನುಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲು ಅನ್ನದಾತರ ಹಕ್ಕೊತ್ತಾಯ

01:58 PM Sep 25, 2018 | |

ಬಸವನಬಾಗೇವಾಡಿ: ಬಸವನಬಾಗೇವಾಡಿ ಪಟ್ಟಣದಲ್ಲಿ ಕಂದಾಯ ಇಲಾಖೆಯ ಉಪವಿಭಾಗ ಕಚೇರಿ ಸ್ಥಾಪಿಸಬೇಕು. ಜಿಲ್ಲೆಯ ರೈತರ ಜಮೀನುಗಳಿಗೆ ರಸ್ತೆ ಸಂಪರ್ಕ ಕಲ್ಪಿಸಬೇಕೆಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಪಟ್ಟಣದ ಅಹೋರಾತ್ರಿ ಧರಣಿ
ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.

Advertisement

ಸೋಮವಾರ ತಾಲೂಕಿನಿಂದ ಆಗಮಿಸಿ ನೂರಾರು ರೈತರು, ರೈತ ಮಹಿಳೆಯರು ಹಾಗೂ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಬಸವೇಶ್ವರ ದೇವಸ್ಥಾನದಲ್ಲಿ ಜಮಾಯಿಸಿ ನಂತರ ಬಸವೇಶ್ವರ ವೃತ್ತದಿಂದ ಮೆರವಣಿಗೆ ಮೂಲಕ ಮುದ್ದೇಬಿಹಾಳ ರಸ್ತೆಯ ಮಿನಿ ವಿಧಾನ ಸೌಧದ ತಹಶೀಲ್ದಾರ್‌ ಕಚೇರಿ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದರು.

ನಂತರ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಕಾರ್ಯಾಧ್ಯಕ್ಷ ಸಿದ್ದರಾಮಪ್ಪ ರಂಜಣಗಿ ಮಾತನಾಡಿ, ಪಟ್ಟಣದಲ್ಲಿ ಕಂದಾಯ ಇಲಾಖೆಯ ಉಪವಿಭಾಗ ಕಚೇರಿ ಸ್ಥಾಪಿಸಬೇಕು. ಹಲವು ವರ್ಷಗಳಿಂದ ಪಟ್ಟಣದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ, ಆಮರಣ ಉಪವಾಸ ಸತ್ಯಾಗ್ರಹ ಸೇರಿದಂತೆ ಅನೇಕ ಹೋರಾಟಗಳು ಮಾಡಿದಾಗ ಈ ಭಾಗದ
ಜನಪ್ರತಿನಿ ಧಿಗಳು ಬರುವ ದಿನಗಳಲ್ಲಿ ಪಟ್ಟಣದಲ್ಲಿ ಕಂದಾಯ ಇಲಾಖೆಯ ಉಪವಿಭಾಗ ಕಚೇರಿ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿ ವರ್ಷಗಳೆ ಗತಿಸಿದರು ಕೂಡಾ ಯಾವುದೇ ಕಾರ್ಯ ಕೈಗೊಂಡಿಲ್ಲ. ಆದ್ದರಿಂದ ಈ ಬಾರಿ ಪಟ್ಟಣದಲ್ಲಿ
ಕಂದಾಯ ಇಲಾಖೆಯ ಉಪವಿಭಾಗ ಕಚೇರಿ ಸ್ಥಾಪನೆಯಾಗುವರೆಗೂ ಹೋರಾಟ ಕೈ ಬಿಡುವ ಪ್ರಶ್ನೆಯಿಲ್ಲ ಎಂದರು.

ರಾಜ್ಯದಲ್ಲಿ ರೈತರು ಹಲವಾರು ವರ್ಷಗಳಿಂದ ತಮ್ಮ ಹೊಲ, ಗದ್ದೆ, ತೋಟಗಳಿಗೆ ತೆರಳಬೇಕಾದರೆ ರಸ್ತೆಯ ಸಮಸ್ಯೆಯಿಂದ ರೈತರು ಬೆಳೆದ ಅನೇಕ ಬೆಳೆಗಳು ಮಾರುಕಟ್ಟೆಗೆ ತರದೆ ಹೊಲದಲ್ಲೇ ಹಾಳಾಗಿ ಹೋದ ಉದಾಹರಣೆಗಳು ಸಾಕಷ್ಟಿವೆ ಆದ್ದರಿಂದ ಎಲ್ಲ
ಜಮೀನುಗಳಿಗೆ ರಸ್ತೆಯನ್ನು ನಿರ್ಮಿಸಿಕೊಡುವಂತೆ ಹಲವಾರು ವರ್ಷಗಳಿಂದ ರಾಜ್ಯ ಸರಕಾರಕ್ಕೆ ಮತ್ತು ಕಂದಾಯ ಇಲಾಖೆ ಮನವಿ ಮಾಡಿದರು ಕೂಡಾ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ರೈತರ ಬಗ್ಗೆ ಯಾವುದೇ ರೀತಿಯಲ್ಲಿ ಕೂಡಾ ಸ್ಪಂದಿ ಸುತ್ತಿಲ್ಲಾ
ಎಂದು ಆರೋಪಿಸಿದರು. ತಾಲೂಕಾಧ್ಯಕ್ಷ ಸಿದ್ದರಾಮ ಅಂಗಡಗೇರಿ, ರಜಿಯಾಬೇಗಂ ಬಿಜಾಪುರ, ಗಂಗವ್ವ ಮಾದರ, ಬೀಮಪ್ಪ ಬಡಿಗೇರ, ಚಂದ್ರರಾಮ ತಗ್ಗಿ, ಸತ್ಯಪ್ಪ ಬಿಜಾಪುರ, ಶಾರದಾ ಲಮಾಣಿ, ಶಟ್ಟೆಪ್ಪ ಲಮಾಣಿ, ಮಲಕಾಜಿಪ್ಪ ಮಳ್ಳಿ, ಹೊನ್ನಕೇರಪ್ಪ
ತೆಲಗಿ, ಅವಪ್ಪಗೌಡ ತಳ್ಳೋಳಿ, ಮೈಬುಸಾಲ ಅವಟಿ, ಹನುಮಂತ ತೋಟದ, ಶಿವಪ್ಪ ಲಮಾಣಿ, ರೇಣುಕಾ ಕುಂಬಾರ, ಹೇಮು ಲಮಾಣಿ, ಸುಮಿತ್ರಾ ಉಪ್ಪಲದಿನ್ನಿ, ಕವಿತಾ ರಾಠೊಡ, ಪಾರ್ವತಿ ಹೊಲದೂರ, ಶಾಂತಾಬಾಯಿ ರೆಡ್ಡಿ, ಶಾಂತಾ ತೆಲಗಿ, ಈರಮ್ಮ  ಹಯರೊಳ್ಳಿ, ಮಹಾದೇವ ರೆಡ್ಡಿ, ಸುಭಾಶ ಬಿಸರೊಟ್ಟಿ, ಗದಿಗೆಪ್ಪ ಕುಂಬಾರ, ಕೃಷ್ಣಪ್ಪ ಭೀಮರೆಡ್ಡಿ, ನೀಲಮ್ಮ ಕೊನರೆಡ್ಡಿ, ರಾಮು ಬೊಮ್ಮನಜೋಗಿ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next