Advertisement

ಅತಂತ್ರ ಸ್ಥಿತಿಯಲ್ಲಿ ರೈತರ ಕುಟುಂಬ

12:09 AM Feb 13, 2022 | Team Udayavani |

ಮಂಗಳೂರು: ಕೊರೊನಾದಿಂದ ಮೃತಪಟ್ಟ ರೈತರ ಸಾಲ ಮನ್ನಾ ಹೊಣೆಯನ್ನು ಡಿಸಿಸಿ ಬ್ಯಾಂಕ್‌ಗಳಿಗೆ ವರ್ಗಾಯಿಸಿ ಸರಕಾರ ಕೈತೊಳೆದುಕೊಂಡಿದ್ದು, ಘೋಷಣೆಯನ್ನು ನಂಬಿ ಸಾಲ ಮನ್ನಾ ನಿರೀಕ್ಷೆಯಲ್ಲಿದ್ದ ಸಂತ್ರಸ್ತ ರೈತರ ಕುಟುಂಬಗಳು ಇದೀಗ ಅತಂತ್ರವಾಗಿವೆ.

Advertisement

ರಾಜ್ಯದಲ್ಲಿ ಕೊರೊನಾ ಒಂದು ಮತ್ತು ಎರಡನೇ ಅಲೆಯಲ್ಲಿ ಮೃತಪಟ್ಟಿರುವ 10,187 ರೈತರ 79.47 ಕೋ.ರೂ. ಸಾಲ ಮನ್ನಾ ಮಾಡಲು ಸರಕಾರ ನಿರ್ಧರಿಸಿರುವುದಾಗಿ ಸಹಕಾರ ಸಚಿವ

ಎಸ್‌.ಟಿ. ಸೋಮಶೇಖರ್‌ 2021ರ ಜುಲೈಯಲ್ಲಿ ಘೋಷಿಸಿದ್ದರು. ಕುಟುಂಬದ ಅಧಾರವನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ರೈತರ ಕುಟುಂಬಗಳಲ್ಲಿ ಇದು ಹೊಸ ಭರವಸೆ ಮೂಡಿಸಿತ್ತು. ಇನ್ನೇನು ಸಾಲಮನ್ನಾ ಆಗುತ್ತದೆ ಎಂದು ಕುಟುಂಬಗಳು ನಿರೀಕ್ಷೆಯಲ್ಲಿರುವಾಗ ತನ್ನ ಘೋಷಣೆಯನ್ನು ಅನುಷ್ಠಾನಗೊಳಿಸುವ ಬದಲಾಗಿ ಸಾಲ ಮನ್ನಾ ಮಾಡುವ ಹೊಣೆಯನ್ನು ಅಪೆಕ್ಸ್‌ ಬ್ಯಾಂಕ್‌, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳಿಗೆ ವರ್ಗಾಯಿಸಿ ಕೈತೊಳೆದುಕೊಂಡಿದೆ. ತಮ್ಮ ಲಾಭದ ಮೊತ್ತದಲ್ಲಿ ಭರಿಸುವಂತೆ ಡಿಸಿಸಿ ಬ್ಯಾಂಕ್‌ಗಳಿಗೆ ಸೂಚಿಸಿದೆ. ಇಷ್ಟು ದೊಡ್ಡ ಮೊತ್ತವನ್ನು ಭರಿಸಲು ಕಷ್ಟಸಾಧ್ಯ ಎಂಬುದಾಗಿ ಬಹುತೇಕ ಡಿಸಿಸಿ ಬ್ಯಾಂಕ್‌ಗಳು ಹೇಳುತ್ತಿವೆ. ಪರಿಣಾಮ ಇದೀಗ ಸುಸ್ತಿ ಅವಧಿ ಮೀರಿರುವ ಸಾಲಗಳ ಪಾವತಿಗೆ ಸಹಕಾರಿ ಬ್ಯಾಂಕ್‌ಗಳಿಂದ ನೋಟಿಸ್‌ ಬರುತ್ತಿದ್ದು ರೈತರ ಕುಟುಂಬಗಳು ಕಂಗಲಾಗಿವೆ.

ಕೊರೊನಾದಿಂದಾಗಿ ಹೆಚ್ಚಿನ ಡಿಸಿಸಿ ಬ್ಯಾಂಕ್‌ಗಳು ಯಥೇಷ್ಟ ಲಾಭದಲ್ಲಿಲ್ಲ. ಭಾರೀ ಲಾಭದಲ್ಲಿರುವ ಬ್ಯಾಂಕ್‌ಗಳಿಗೆ ಇದು ಸಾಧ್ಯವಾಗಬಹುದು. ಈ ಪರಿಸ್ಥಿತಿಯಲ್ಲಿ ಕೋಟ್ಯಂತರ ರೂ. ಹೆಚ್ಚುವರಿ ಹೊರೆಯನ್ನು ಸರಕಾರ ನಮ್ಮ ಮೇಲೆ ಹೊರಿಸಿದರೆ ಬ್ಯಾಂಕ್‌ಗಳ ಅರ್ಥಿಕ ಸಮತೋಲನಕ್ಕೆ ಧಕ್ಕೆಯಾಗುತ್ತದೆ ಎನ್ನುವುದು ಡಿಸಿಸಿ ಬ್ಯಾಂಕ್‌ಗಳ ವಲಯದಿಂದ ಕೇಳಿಬರುತ್ತಿರುವ ಅಳಲು.

ನಿಲುವು ಸ್ಪಷ್ಟಗೊಳ್ಳಬೇಕಾಗಿದೆ

Advertisement

ಸಾಲ ಮನ್ನಾ ಮಾಡುವುದಾಗಿ ಹೇಳಿದ್ದು ಸರಕಾರ. ಇದನ್ನು ನಂಬಿದ್ದ ಸಾವಿರಾರು ರೈತರ ಕುಟುಂಬಗಳು ಇದೀಗ ಬರುತ್ತಿರುವ ಸಾಲಮರುಪಾವತಿ ನೋಟಿಸ್‌ಗಳಿಂದ ಕಂಗೆಟ್ಟಿವೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಹೊಣೆ ಸರಕಾರದ ಮೇಲಿದೆ. ಡಿಸಿಸಿ ಬ್ಯಾಂಕ್‌ಗಳು ಕೊರೊನಾದಿಂದ ಮೃತಪಟ್ಟಿರುವ ರೈತರ ಸಾಲ ಮನ್ನಾ ಮಾಡದಿದ್ದರೆ ಮುಂದೇನು ಎಂಬ ಬಗ್ಗೆ ಸರಕಾರ ಸರಕಾರ ಸ್ಪಷ್ಟ ನಿಲುವು ಪ್ರಕಟಿಸಬೇಕಾಗಿದೆ.

ಜಿಲ್ಲೆ    ಮೃತಪಟ್ಟ

ರೈತರು ಸಾಲ

(ರೂ.ಗಳಲ್ಲಿ)

ಬೆಳಗಾವಿ            3,334     23,84,51,700

ಬಾಗಲಕೋಟೆ  672         5,42,26,261

ದಕ್ಷಿಣ ಕನ್ನಡ   152         2,40,63,450

ಬಳ್ಳಾರಿ 357         3,65,98,411

ಬೆಂಗಳೂರು       381         2,36,72,500

ಬೀದರ್‌                824         5,47,68,271

ಚಿಕ್ಕಮಗಳೂರು               113         2,03,86,020

ಚಿತ್ರದುರ್ಗ         156         1,63,71,000

ದಾವಣಗೆರೆ        402         2,66,22,071

ಹಾಸನ 454         2,86,42,000

ಕಲಬುರಗಿ          224         8,73,8,776

ಧಾರವಾಡ         376         2,07,10,455

ಕೊಡಗು              113         1,82,99,040

ಮಂಡ್ಯ               410         2,73,28,268

ಮೈಸೂರು          281         3,13,99,000

ರಾಯಚೂರು    237         1,92,03,700

ಶಿವಮೊಗ್ಗ          307         3,27,01,000

ತುಮಕೂರು       307         1,87,22,000

ವಿಜಯಪುರ      754         5,13,40,000

ಕೊರೊನಾದಿಂದ ಮೃತಪಟ್ಟಿರುವ ರೈತರ ಸಾಲ ಮನ್ನಾ ಮಾಡುವಂತೆ ಡಿಸಿಸಿ ಬ್ಯಾಂಕ್‌ಗಳಿಗೆ ಯಾವುದೇ ಆದೇಶ ನೀಡಿಲ್ಲ. ಆದರೆ ಬ್ಯಾಂಕ್‌ಗಳಿಗೆ ಆರ್ಥಿಕ ಹೊಡೆತ ಬೀಳದಂತೆ ಲಾಭಾಂಶದಲ್ಲಿ ಒಂದಷ್ಟು ಪರ್ಸೆಂಟೇಜ್‌ ಸಾಲ ಮನ್ನಾ ಮಾಡಿ ಎಂದು ಸೂಚಿಸಿದ್ದೇವೆ. 1 ಲಕ್ಷ, 75 ಸಾವಿರ, 50 ಸಾವಿರ, 25,000 ರೂ. ಹೀಗೆ ಬ್ಯಾಂಕ್‌ಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಮನ್ನಾ ಮಾಡುತ್ತಾರೆ. ಎಸ್‌.ಟಿ. ಸೋಮಶೇಖರ್‌, ಸಹಕಾರ ಸಚಿವ

 

-ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next