Advertisement

18ರಂದು ಜಮಖಂಡಿಯಲ್ಲಿ ರೈತರ ಸಮಾವೇಶ: ಸಿಂಧೂರ

05:32 PM Feb 09, 2021 | Team Udayavani |

ಜಮಖಂಡಿ: ರೈತ ಜಾಗರಣಾ ವೇದಿಕೆ ಆಶ್ರಯದಲ್ಲಿ ಫೆ. 18ರಂದು ಸಂಜೆ 4 ಗಂಟೆಗೆ ನಗರದ ಬಸವ ಭವನ ಆವರಣದಲ್ಲಿ ರೈತರ ಸಮಾವೇಶ ನಡೆಯಲಿದೆ ಎಂದು ರೈತ ಮುಖಂಡ ಬಸವರಾಜ ಸಿಂಧೂರ ಹೇಳಿದರು.

Advertisement

ನಗರದ ರಮಾನಿವಾಸ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಜಾಗರಣ ವೇದಿಕೆ ಹಾಗೂ ಬಿಜೆಪಿ ಆಶ್ರಯದಲ್ಲಿ ನೂತನ ಕೃಷಿ ಕಾಯ್ದೆ ಜಾಗೃತಿ ಸಮಾವೇಶ ಜರುಗಲಿದೆ. ಕಾಂಗ್ರೆಸ್‌ ಆಡಳಿತದಲ್ಲಿ ಕೃಷಿ ಕಾಯ್ದೆಯನ್ನು ರೈತ ಮುಖಂಡ ಟಿಕಾಯತ್‌ ಸ್ವಾಗತಿಸಿದ್ದರು. ಆದರೆ, ಇಂದು ಅವರೇ ವಿರೋಧ ಮಾಡುತ್ತಿರುವುದು ರಾಜಕೀಯ ಪ್ರೇರಿತವಾಗಿದೆ. ನೂತನ ಕಾಯ್ದೆಯಿಂದ ಎಪಿಎಂಸಿಗೆ  ಯಾವುದೇ ರೀತಿಯ ಧಕ್ಕೆ ಉಂಟಾಗುವುದಿಲ್ಲ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಜಿ.ಎಸ್‌. ನ್ಯಾಮಗೌಡ ಮಾತನಾಡಿ, ಸಮಾವೇಶದಲ್ಲಿ ಗ್ರಾಪಂ  ಆಯ್ಕೆಯಾದ ಬಿಜೆಪಿ ಬೆಂಬಲಿತ ನೂತನ ಸದಸ್ಯರ ಸನ್ಮಾನ ನಡೆಯಲಿದೆ. ರಾಜ್ಯಸಭಾ ಸದಸ್ಯ ರೈತ ಜಾಗರಣ ವೇದಿಕೆ, ರಾಜ್ಯ ಸಂಚಾಲಕ ಈರಣ್ಣ ಕಡಾಡಿ ನೇತೃತ್ವದಲ್ಲಿ ನೂತನ ಕೃಷಿ ಕಾಯ್ದೆಯಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದಾರೆ. ಸಮಾವೇಶದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ರೈತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.

ಇದನ್ನೂ ಓದಿ :ಮೂತ್ರಕೋಶದ ಕಲ್ಲಿನ ನಿವಾರಣೆಗೆ ಬಾಳೆ ದಿಂಡಿನ ಪಲ್ಯ

ರೈತರಿಗೆ ನೂತನ ಕೃಷಿ ಕಾಯ್ದೆಯಿಂದ ಆಗುವ ಲಾಭದ ಕುರಿತು ಜಾಗೃತಿ ಕಾರ್ಯಕ್ರಮ ಅವಶ್ಯವಾಗಿವೆ. ರಾಜ್ಯದಲ್ಲಿಪ್ರಥಮವಾಗಿ ಜಮಖಂಡಿಯಿಂದ ಜಾಗೃತಿಗೆ ಚಾಲನೆ ನೀಡಲಾಗುತ್ತಿದೆ. ದೇಶದಲ್ಲಿ ರೈತರ ಹೋರಾಟದಲ್ಲಿ ರಕ್ತಕ್ರಾಂತಿಯಾಗಿರುವ ಉದಾಹರಣೆಗಳಿಲ್ಲ. ಆದರೆ, ಇಂದು ಕಾಂಗ್ರೆಸ್‌ ಅಧಿಕಾರ ಹಿಡಿಯುವ ದುರಾಸೆಯಿಂದ ರೈತರನ್ನು ಎತ್ತಿಕಟ್ಟುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.

Advertisement

ರೈತ ಜಾಗರಣಾ ವೇದಿಕೆ ತಾಲೂಕಾಧ್ಯಕ್ಷ ಶೈಲೇಶ ಆಪ್ಟೆ, ಸಿದ್ದರಾಯ ಸಾಯಗೊಂಡ, ಬಸವರಾಜ  ಮರನೂರ, ಪ್ರವೀಣ ಕಲ್ಯಾಣಿ, ಸದಾಶಿವ ಕವಟಗಿ, ಪ್ರದೀಪ ಮೆಟಗುಡ್ಡ, ರವಿ ಐಗಳಿ, ಧರೆಪ್ಪ ಮಂಟೂರ, ಮಹೇಶ ಖೆಬ್ಟಾಣಿ, ಮುತ್ತು ಲಕ್ಕನಗೌಡರ, ಶ್ರೀಶೈಲ ಪಾಟೀಲ, ಪ್ರಭು ಬಾಳಿಕಾಯಿ, ಸೇರಿದಂತೆ ಹಲವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next