Advertisement
ಕೃಷಿ ಇಲಾಖೆ ಅಂಕಿ-ಅಂಶದಂತೆ ಜನವರಿಯಿಂದ ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಒಟ್ಟಾರೆ ವಾಡಿಕೆ ಮಳೆ549 ಮಿ.ಮೀ. ಆಗಬೇಕಿದ್ದು, ಈಗ 692 ಮಿ.ಮೀ. ಮಳೆ ಬಿದ್ದಿದೆ. ಆದರೆ, ಸೆಪ್ಟೆಂಬರ್ ತಿಂಗಳಲ್ಲಿ 156
ಮಿ.ಮೀ ಆಗಬೇಕಿದ್ದು, ಈಗ 28ಮಿ.ಮೀ. ಮಾತ್ರ ಮಳೆ ಬಿದ್ದಿದೆ. ತಾಲೂಕಿನ ಐದು ಹೋಬಳಿಗಳ ಪೈಕಿ
ಹೆಚ್ಚಿನ ಮಳೆ ತೂಬಗೆರೆ ಹೋಬಳಿಯಲ್ಲಿ 761 ಮಿ.ಮೀ. ಬಿ ದ್ದಿದೆ. ಉಳಿದಂತೆ, ಸಾಸಲು ಹೋಬಳಿ
716 ಮಿ.ಮೀ., ಮಧುರೆ ಹೋಬಳಿ 682ಮಿ.ಮೀ.,ದೊಡ್ಡಬೆಳವಂಗಲ 650 ಮಿ.ಮೀ., ಕಸಬಾ
ಹೋಬಳಿಯಲ್ಲಿ 636ಮಿ.ಮೀ. ಮಳೆ ಬಿದ್ದಿದೆ. ತಾಲೂಕಿನಲ್ಲಿ ಮುಂಗಾರು ಪೂರ್ವ ಮಳೆ ಉಳುಮೆಗೆ ತೊಂದರೆಯಾಗದಂತೆ ಹದವಾಗಿ ಬೀಳುತ್ತಿದೆಯಾದರೂ ಕೆರೆಗಳಿಗೆ ನೀರು ಬಂದಿಲ್ಲ. ಸಾಸಲು ಹೋಬಳಿಯ ಒಂದೆರಡು ಸಣ್ಣ ಪುಟ್ಟ ಕೆರೆಗಳಿಗೆ ಅಲ್ಪಸ್ವಲ್ಪ ನೀರು ಬಂದಿವೆ. ಉಳಿದಂತೆ ಯಾವುದೇ ಕೆರೆಗಳಲ್ಲೂ ನೀರು ಇಲ್ಲದೆ ಬರಿದಾಗಿವೆ. ನೀರಾವರಿ ಹೊಂದಿರುವ ರೈತರು ಮುಸುಕಿನಜೋಳ ಬಿತ್ತನೆ ಮಾಡುತ್ತಿದ್ದಾರೆ.
ತಾಲೂಕಿನ ಹೋಬಳಿಗಳಲ್ಲಿ 2021-22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯ ಬೆಳೆ ಪ್ರಗತಿಯನ್ವಯ ಏಕದಳ ಧಾನ್ಯಗಳ ಬಿತ್ತನೆಯಲ್ಲಿ ಶೇ.101ರಷ್ಟು ತನ್ನ ಗುರಿಯನ್ನು ಮುಟ್ಟಿದೆ. ರಾಗಿ, ಮುಸುಕಿನ ಜೋಳ, ಭತ್ತ, ತೃಣಧಾನ್ಯ, ಮೇವಿನ ಜೋಳ, ಪಾಪ್‌ಕಾರ್ನ್(ಏಕದಳ) ತೊಗರಿ, ಅಲಸಂದೆ, ಅವರೆ, ಉದ್ದು,
ಹೆಸರು, ಹುರುಳಿ(ದ್ವಿದಳ), ನೆಲೆಗಡಲೆ, ಹರಳು, ಸಾಸುವೆ, ಹುಚ್ಚೆಳ್ಳು (ಎಣ್ಣೆಕಾಳು) ಸೇರಿದಂತೆ ಎಲ್ಲ
ಬೆಳೆಗಳ 22,210 ಹೆಕ್ಟೇರ್‌ಗಳ ಗುರಿಗೆ 23,883 ಹೆಕ್ಟೇರ್‌ಗಳ ಗುರಿ ತಲುಪಿದೆ. 13,793 ಹೆಕ್ಟೇರ್‌ಗಳ
ಗುರಿಯನ್ನು ಹೊಂದಿದ್ದ ರಾಗಿ ಬೆಳೆ 16,710 ಹೆಕ್ಟೇರ್ ಗಳಲ್ಲಿ ಬಿತ್ತನೆಯಾಗಿದೆ. 7,270 ಹೆಕ್ಟೇರ್‌ಗಳ
ಗುರಿಯನ್ನು ಹೊಂದಿದ್ದ ಮುಸುಕಿನ ಜೋಳದ ಬೆಳೆ 5,415 ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿದೆ. ಒಣಗಿದ ಬೆಳೆ
Related Articles
ಹಿಂದಕ್ಕೆ ಹಿಡಿದುಕೊಳ್ಳಬೇಕಿತ್ತು. ಆದರೆ, ತಾಲೂಕಿನ ಕೆಲವೇ ಗ್ರಾಮಗಳಲ್ಲಿ ಮುಂಚಿತವಾಗಿ ಬಿತ್ತನೆಯಾಗಿದ್ದ
ರಾಗಿ ಹೊಲಗಳಲ್ಲಿ ಮಾತ್ರ ಗರಿ ಮೇಯಿಸಲಾಗಿದೆ. ಉಳಿದಂತೆ ರಾಗಿ ಹೊಲಗಳು ಒಣಗುತ್ತಿವೆ. ಕಳೆದ
ಮೂರು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ರಾಗಿ ಬೆಳೆಯ ಪ್ರದೇಶ ಹೆಚ್ಚಾಗಿದೆ. ಮುಸುಕಿನಜೋಳಕ್ಕೆ
ರೋಗ, ಹುಳುಗಳ ಬಾಧೆ ಹೆಚ್ಚಾಗಿದ್ದರಿಂದ ಹಾಗೂ ರಾಗಿಯನ್ನು ಸರ್ಕಾರ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಸಲು ಆರಂಭಿಸಿದ್ದರಿಂದ ರೈತರು ಈ ಬಾರಿ ರಾಗಿ ಬೆಳೆಯ ಕಡೆಗೆ ಹೆಚ್ಚಿನ ಆಸಕ್ತಿ ತೋರಿ¨ªಾರೆ. ಸಾಸಲು ಹಾಗೂ ಕಸಬಾ ಹೋಬಳಿಯಲ್ಲಿ ಮುಸುಕಿನ ಜೋಳ ಬೆಳೆಯುವ ಪ್ರದೇಶ ಹೆಚ್ಚಾಗಿದೆ.ಅಗತ್ಯ ದಾಸ್ತಾನಿದೆ: ತಾಲೂಕಿನಲ್ಲಿ ರೈತರಿಗೆ ಅಗತ್ಯವಾಗಿ ರುವ ರಸಗೊಬ್ಬರಗಳು ಅಗತ್ಯ ದಾಸ್ತಾನಿದೆ. ಕಾಂಫ್ಲೆಕ್ಸ್ 706 ಟನ್, ಅಮೋನಿಯಂ ಸಲ್ಪೇಟ್ 5.55 ಟನ್ ಅಮೋನಿಯಂ ಸಲ್ಪೇಟ್ , ಡಿಎಪಿ68 ಟನ್, ಆಮದು ಕಾಂಫ್ಲೆಕ್ಸ್ 76 ಟನ್, ಎಂಒಪಿ77.2ಟನ್, ಯೂರಿಯ ಬೇವು ಲೇಪಿತ 230ಟನ್, ಎಸ್‌ಎಸ್‌ಪಿ 51.65 ಟನ್ ಸೇರಿ ಒಟ್ಟು 1239.6 ಟನ್ ರಸಗೊಬ್ಬರಗಳ ದಾಸ್ತಾನಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಮಳೆ ಅಗತ್ಯವಿದೆ
ತಾಲೂಕಿನ ತೂಬಗೆರೆ ಹೋಬಳಿಯಲ್ಲಿ ಜುಲೈ ತಿಂಗಳಲ್ಲಿ ಹೆಚ್ಚಿನ ಮಳೆ ದಾಖಲಾಗಿದೆ. ಆದರೆ, ಆಗಸ್ಟ್ ಹಾಗೂ ಸೆಪ್ಟೆಂಬರ್ ನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ರಾಗಿ,ತೊಗರಿ ಮೊದಲಾದ ಬೆಳೆಗಳು ಒಣಗುತ್ತಿವೆ. ರೈತರು ಮಳೆ ನಿರೀಕ್ಷೆಯಲ್ಲಿದ್ದು, ಇನ್ನೆರಡು ಹದ ಮಳೆಯಾದರೆ ಉತ್ತಮ ಇಳುವರಿಯಾಗಲಿದೆ ಎನ್ನುತ್ತಾರೆ ತೂಬಗೆರೆ ಹೋಬಳಿಯ ಲಕ್ಷ್ಮೀದೇವಪುರದ ರೈತ ಹರೀಶ್.
ಯೂರಿಯಾ ಗೊಬ್ಬರ ಖರೀದಿ ಹೆಚ್ಚಳಒಂದು ಕಡೆ ಮಳೆ ಇಲ್ಲದೆ ರಾಗಿ, ಮುಸುಕಿನಜೋಳ ಒಣಗುತ್ತಿದೆ. ಆದರೆ, ಇದೇ ವೇಳೆ ತೆನೆ ಬರುವುದಕ್ಕು
ಮುನ್ನ ರಾಗಿ, ಜೋಳದ ಬೆಳೆಗಳಿಗೆ ಮಳೆ ಬರುತ್ತಿದ್ದಂತೆ ಯೂರಿಯ ಹಾಕಲು ರೈತರು ರಸಗೊಬ್ಬರ
ಮಾರಾಟ ಮಳಿಗೆಗಳ ಮುಂದೆ ಯೂರಿಯ ಖರೀದಿಗೆ ಸಾಲುಗಟ್ಟಿ ನಿಂತಿರುವ ದೃಶ್ಯ
ಸಾಮಾನ್ಯವಾಗಿದೆ. ಖಾಸಗಿ ಅಂಗಡಿಗಳಿಗಿಂತಲು ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿ
ಯೂರಿಯ ಬೆಲೆ 20 ರೂ.ವರೆಗೂ ಬೆಲೆ ಕಡಿಮೆ ಇದೆ. ಹೀಗಾಗಿ ಹೆಚ್ಚಿನ ರೈತರು ಸಹಕಾರಿ ಸಂಘಗಳ
ಮೂಲಕವೇ ಯೂರಿಯ ಖರೀದಿಗೆ ಮುಗಿಬೀಳುತ್ತಿದ್ದಾರೆ. ●ಡಿ. ಶ್ರೀಕಾಂತ