ಭಾರತದಲ್ಲಿ ಒಂದು ಕಾಲ ಇತ್ತು ಅದು ಒಂದಷ್ಟು ಓದಿಕೊಂಡ ಯುವಕರು ಎಂಪ್ಲಾಯ್ ಮೆಂಟ್ ಕಚೇರಿ ಮಂದೆ ನಿಂತು ಕೆಲಸ ಬೇಡುವ ಕಾಲ, ತುಂಬಾ ವರ್ಷ ಕೆಲಸ ಸಿಗದೆ, ಸಿಕ್ಕರು ಲಂಚ ಕೊಡಲು ಆಗದೆ ಎಷ್ಟೋ ಜನ ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳಿವೆ. ಆದರೆ ಇಂದು ಇದು ಕಡಿಮೆ ಆಗಿದೆ. ಅದು ಪ್ರೈವೇಟ್ ಸೆಕ್ಟರ್ ಬಂದ ಕಾರಣ. ಇವತ್ತು ಸರ್ಕಾರಿ ಕೆಲಸಕ್ಕೆ ಯಾರು ಕಾದು ಕುಳಿತುಕೊಳ್ಳೋದಿಲ್ಲ. ಕಾರಣ ಸರ್ಕಾರಿ ಕೆಲಸಕ್ಕಿಂತ ಹೆಚ್ಚಾಗಿ ಸಂಬಳ ಪಡೆಯುವ ಅವಕಾಶ ಪ್ರೈವೇಟ್ ನಲ್ಲಿ ಇದೆ. ಆದರೆ ಒಬ್ಬ ರೈತ ತಾನು ಬೆಳೆದ ಬೆಳೆಯನ್ನು ಮಾರಲು ಏ.ಪಿ.ಎಮ್.ಸಿ ಎನ್ನುವ ಸರ್ಕಾರಿ ಸ್ವಾಮ್ಯದ ಮುಂದೆಯೇ ಯಾಕೆ ನಿಂತಿದ್ದಾನೆ. ಈಗಲೂ ಕೂಡ ಸಾವಿರಾರು ಅಂಚೆ ಕಚೇರಿ ಕೆಲಸಗಳು ತುಂಬದೆ ಉಳಿದಿದೆ, ಕಾರಣ ಕಡಿಮೆ ಸಂಬಳ? ಕಡಿಮೆ ಸಂಬಳದ ಸರ್ಕಾರಿ ಕೆಲಸಕ್ಕಿಂತ ಹೆಚ್ಚು ಸಂಬಳ ಬರುವ ಪ್ರೈವೇಟ್ ಕೆಲಸವೇ ಒಳ್ಳೆಯದು ಎನ್ನುವುದಾದರೆ, ರೈತನಿಗೂ ಪ್ರೈವೇಟ್ ಸೆಕ್ಟರ್ ಎನ್ನುವ ಅವಕಾಶ ಯಾಕೆ ಕೊಡಲು ಬಿಡುತ್ತಿಲ್ಲ?
ಕೇಂದ್ರ ಸರ್ಕಾರ ಮೂರು ಹೊಸ ಕೃಷಿ ಕಾಯ್ದೆ ತಂದಿದೆ, ಮೊದಲನೇಯದು ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ(ಪ್ರಚಾರ ಮತ್ತು ಸೌಲಭ್ಯ) ಸುಗ್ರೀವಾಜ್ಞೆ, ಎರಡನೇಯದು ಅಗತ್ಯ ಸರಕುಗಳ ಸುಗ್ರೀವಾಜ್ಞೆ (ಆಹಾರ ಸಂಗರಹಣೆ) ಮತ್ತು ಮೂರನೆಯದು ರೈತರ ಬೆಲೆಗಳ ಖಾತರಿ ಒಪ್ಪಂದದ ಭರವಸೆ ಮತ್ತು ಕೃಷಿ ಸೇವೆಗಳ ಸುಗ್ರೀವಾಜ್ಞೆ. ಆದರೆ ಇದರ ಬೆನ್ನಲ್ಲೇ ಪಂಜಾಬ್ ಮ್ತತ್ತು ಹರಿಯಾಣ ಭಾಗದ ರೈತರು ಈ ಹೊಸ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ರಸ್ತೆಗಿಳಿದಿದ್ದಾರೆ.
ನಿಜವಾಗಿಯೂ ಈ ಎಮ್.ಎಸ್.ಪಿ ಮತ್ತು ಎ.ಪಿ.ಎಮ್.ಸಿ ಗಳು ರೈತರಿಗೆ ಉಪಯೋಗ ಆಗುತ್ತಿದೆಯೇ?
2015 ರಲ್ಲಿ ಶಾಂತ ಕುಮಾರ್ ಕಮಿಟಿ ಪ್ರಕಾರ ಕೇವಲ ಶೇ.15 ಕ್ಕಿಂತ ಕಡಿಮ ವ್ಯವಸಾಯ ಉತ್ಪನ್ನಗಳು ಏ.ಪಿ.ಎಮ್.ಸಿ ಒಳಗೇ ಮಾರಾಟವಾಗುತ್ತಿವೆ. ಉಳಿದ ಶೇ.80ಕ್ಕಿಂತ ಹೆಚ್ಚು ವ್ಯವಸಾಯ ಉತ್ಪನ್ನಗಳು ಇಂದಿಗೂ ಎ.ಪಿ.ಎಂ.ಸಿ ಹೊರಗೆ ಮಾರಾಟ ಆಗುತ್ತಿವೆ. ಇಲ್ಲಿ ಎ.ಪಿ.ಎಮ್.ಸಿ ಮಾರುಕಟ್ಟೆಗಳು ಕೇವಲ ಶ್ರೀಮಂತ ರೈತರು ಮತ್ತು ದಲ್ಲಾಳಿಗಳ ಕೈ ಕೆಳಗೆ ನಡೆಯುತ್ತಿದೆ. ನಮ್ಮ ದೇಶದಲ್ಲಿ ಶ್ರೀಮಂತ ರೈತರಿರುವುದು ಕೇವಲ ಶೇ.10 ಕ್ಕಿಂತ ಕಡಿಮೆ, ಹಾಗಾದರೆ ಅತಿ ಹೆಚ್ಚು ಬಡ ರೈತರು ಇರುವ ನಮ್ಮ ದೇಶದಲ್ಲಿ ಎ.ಪಿ.ಎಮ್.ಸಿ ಮತ್ತು ಎಮ್.ಎಸ್.ಪಿ ಗಳು ರೈತರ ಕೈಹಿಡಿಯುತ್ತಾ?. ಇದಿಷ್ಟೇ ಅಲ್ಲ ಇಂದಿಗೂ ನಮ್ಮ ದೇಶದ ಶೇ.70ಕ್ಕಿಂತ ಹೆಚ್ಚು ರೈತರಿಗೆ ಎಮ್.ಎಸ್.ಪಿ ಅಂದರೆ ಏನು ಅಂತ ಗೊತ್ತಿಲ್ಲ. ಆದರಲ್ಲೂ ಭತ್ತ ಮತ್ತು ಗೋಧಿ ಬೆಳೆಯುವ 68% ರೈತರಿಗೆ ಎಮ್.ಎಸ್.ಪಿ ಅಂದರೆ ಏನೆಂದು ತಿಳಿದಿಲ್ಲ. ಹೀಗಾಗಿ ಎಮ್.ಎಸ್.ಪಿ.ಯ ಕೇವಲ ಶೇ.27-35 ರಷ್ಟು ಭಾಗ ಮಾತ್ರ ರೈತರ ಕೈ ಸೇರುತ್ತಿದೆ. ಇದು ನಾನು ಹೇಳುತ್ತಿಲ್ಲ 2015ರ ಶಾಂತಕುಮಾರ್ ಸಮಿತಿ ಹೇಳಿದ್ದು.
ಮಾರುಕಟ್ಟೆಯನ್ನು ಖಾಸಗಿ ಕಂಪನಿಗಳಿಗೆ ಯಾಕೆ ತೆರೆಯಬೇಕು?
ಭಾರತದ ಒಟ್ಟು ಭೂಮಿಯಲ್ಲಿ ಶೇ.12 ರಷ್ಟು ವ್ಯವಸಾಯ ಭೂಮಿ ನಮ್ಮ ಭಾರತದಲ್ಲಿದೆ, ಸರಿ ಸುಮಾರು 16 ಕೋಟಿ ಹೆಕ್ಟರ್ ನಷ್ಟು ಭೂಮಿಯಲ್ಲಿ ನಾವು ವ್ಯವಸಾಯ ಮಾಡುತ್ತಿದ್ದೇವೆ. ಇಡೀ ಪ್ರಪಂಚದಲ್ಲಿ ವ್ಯವಸಾಯ ಉತ್ಪಾದನೆ ಮಾಡುವುದರಲ್ಲಿ ಭಾರತ ಎರಡನೇ ಸ್ವಾನದಲ್ಲಿದೆ. ಇದು ಸಂತೋಷ ಪಡುವ ವಿಷಯ ಏನಲ್ಲ ಏಕೆಂದರೆ ನಾವು ಉತ್ಪಾದನೆ ಮಾಡುವ ಶೇ.2.3 ರಷ್ಟು ಮಾತ್ರ ಪ್ರಪಂಚದ ಮಾರುಕಟ್ಟುಗೆ ಹೋಗುತ್ತಿದೆ. ಹಣ್ಣು ಮತ್ತು ತರಕಾರಿ ಉತ್ಪಾದನೆಗಳಲ್ಲಿ ಇಡೀ ಪ್ರಪಂಚದಲ್ಲಿ ಒಂದು ಅಥವಾ ಎರಡನೆ ಸ್ಥಾನದಲ್ಲಿರುವ ನಾವು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೇವಲ ಶೇ.1.7 ಮಾತ್ರ. ಇದಕ್ಕೆಲ್ಲಾ ಕಾರಣ ಒಬ್ಬ ಸಾಮಾನ್ಯ ರೈತ ತಾನು ಏನು ಬೆಳೆಯಬೇಕು, ಎಲ್ಲಿ ಮಾರಾಟ ಮಾಡಬೇಕು ಎನ್ನುವ ಗೊಂದಲದಿಂದಾಗಿ ಬೆಳೆದ ಬೆಳೆಗೆ ಬೆಲೆ ಸಿಗುತ್ತಿಲ್ಲ.
ನೆನಪಿರಲಿ ಇಡೀ ಪ್ರಪಂಚದಲ್ಲಿ ನಮ್ಮಷ್ಟು ಅತಿ ಹೆಚ್ಚು ವ್ಯವಸಾಯ ಭೂಮಿಯನ್ನು ಯಾವ ದೇಶವು ಹೊಂದಿಲ್ಲ. ಅಮೇರಿಕಾ ನಮಗಿಂತ ಸ್ವಲ್ಪ ಹೆಚ್ಚು ಕಂಡರು ನಮ್ಮ ಭಾರತದಷ್ಟು ಅನೂಕಲಕರ ಪ್ರಾಕೃತಿಕ ವಾತಾವರಣ ಅಲ್ಲಿ ಇಲ್ಲ. ಬೆಳೆ ಬೆಳೆಯಲು ಬೇಕಾಗುವ ಸೂರ್ಯನ ಶಕ್ತಿ ಪ್ರಪಂಚದ ಯಾವ ಭಾಗದಲ್ಲೂ ಸಿಗುವುದಿಲ್ಲ. ಇದಷ್ಟೇ ಅಲ್ಲ ನಮ್ಮ ದೇಶದ ಶೇ.60 ಕ್ಕಿಂತ ಹೆಚ್ಚು ಜನ ವ್ಯವಸಾಯ ನಂಬಿ ಜೀವನ ಸಾಗಿಸುತ್ತಾರೆ. ಅಂದರೆ ಭಾರತದ ವ್ಯವಸಾಯವನ್ನೇ ಕಾಯಕ ಮಾಡಿಕೊಂಡಿರುವ ಜನ ಪ್ರಪಂಚದ ಯಾವ ಭಾಗದಲ್ಲೂ ಇಲ್ಲ.
ಆದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಮ್ಮ ವ್ಯವಸಾಯ ಉತ್ಪನ್ನಗಳ ಮಾರಾಟದಲ್ಲಿ ಭಾರತದ ಪಾಲು ಕೇವಲ ಶೇ.2.3 ರಷ್ಟು. ನಮ್ಮ ಭಾರತದ 50 ಕೋಟಿಗೂ ಹೆಚ್ಚು ಜನ ದುಡಿಯುತ್ತಿದ್ದರು ನಮ್ಮ ಸ್ಥಾನ ಕೇವಲ ಶೆ.2.3ರಷ್ಟಿದ್ದರೆ ಇನ್ನು ನಮ್ಮ ರೈತರಿಗೆ ಎಲ್ಲಿಂದ ಹಣ ಬರುತ್ತೆ. ವ್ಯವಸಾಯದಲ್ಲೂ ಹಣದ ಹರಿವು ಇದ್ದರೆ ಅಲ್ಲವೇ ರೈತರು ಬೆಳೆದ ಬೆಳೆಗಳಿಗೆ ಒಳ್ಳೆಯಯ ಬೆಲೆ ಸಿಗೋದು. ಸುಮಾರು 65 ಕೋಟಿಗು ಅಧಿಕ ಜನಸಂಖ್ಯೆ ವ್ಯವಸಾಯ ನಂಬಿ ಬದುಕುತ್ತಿರುವ ನಮ್ಮ ಭಾರತದ ಕೃಷಿ ಕ್ಷೇತ್ರಕ್ಕೆ ಅತಿ ಹೆಚ್ಚು ಹಣದ ಹೂಡಿಕೆ ಅಗತ್ಯ ಇದೆ.
ಆದರೆ ಪಂಜಾಬ್ ಮತ್ತು ಹರಿಯಾಣ ಭಾಗದ ರೈತರ ಪ್ರತಿಭಟನೆ ಯಾಕೆ?
ಪಂಜಾಬ್ ಮತ್ತು ಹರಿಯಾಣದ ರೈತರು ಅತೀ ಹೆಚ್ಚು ಬೆಳೆಯುತ್ತಿರುವ ಬೆಳೆ ಅಕ್ಕಿ ಮತ್ತು ಗೋಧಿ. ಇಲ್ಲಿನ ರೈತರು ಬೇರೆ ಬೆಳೆಯನ್ನು ಬೆಳೆಯುವುದನ್ನೇ ಬಿಟ್ಟಿದ್ದಾರೆ. ಕಾರಣ ಎ.ಪಿಎಮ್.ಸಿ ಮತ್ತು ಬೆಂಬಲ ಬೆಲೆ. ಈ ಭಾಗದ ರೈತರಿಂದ ಸಂಗ್ರಹಿಸಿರುವ ಸಾವಿರಾರು ಟನ್ ಗಳಷ್ಟು ಅಕ್ಕಿ ಮ್ತತ್ತು ಗೋಧಿ ಇಲಿ, ಹೆಗ್ಗಣಗಳು ತಿನ್ನುತ್ತಿವೆ. ಇಲ್ಲಿ ರಾಜಕೀಯವು ಒಂದಷ್ಟು ನಡೆಯುತ್ತಿದೆ ಎನ್ನುವ ವಾದವಿದೆ. ಹರಿಯಾಣದ ಸರ್ಕಾರ ಭತ್ತ ಮತ್ತು ಗೋಧಿ ಬಿಟ್ಟು ಬೇರೆ ಬೆಳೆದರೆ ಪ್ರತಿ ಎಕರೆಗೆ 8 ಸಾವಿರದವರೆಗೆ ಬೆಂಬಲ ಹಣ ಘೋಷಿಸಿದ್ದರು. ಅಲ್ಲಿನ ರೈತರು ಮ್ತತ್ತೆ ಅದೇ ಅಕ್ಕಿ ಮತ್ತು ಗೋಧಿಯನ್ನೇ ಬೆಳೆಯುತ್ತಿದ್ದಾರೆ. ಇಷ್ಟೆ ಅಲ್ಲ ಪಂಜಾ್ ನಲ್ಲಿ ಭತ್ತದ ಬೆಳೆ ಮಗಿದ ನಂತರ ಜಮೀನಿನಲ್ಲಿ ಉಳಿಯುವ ತ್ಯಾಜ್ಯವನ್ನು ಸುಡುವುದರಿಂದ ದೆಹಲ್ಲ ಸೇರಿದಂತೆ ಸುತ್ತಮುತ್ತಲಿನ ಭಾಗದಲ್ಲಿ ಅತಿ ಹೆಚ್ಚು ವಾಯುಮಾಲಿನ್ಯ ಉಂಟಾಗುತ್ತಿದೆ.
ಸಾಲಮನ್ನಾ ಎನ್ನುವುದು ಕೇವಲ ಮತ ಪಡೆಯಲು ಕೊಡುವ ಹಣವೇ?
ಹಿಂದಿನ ವರ್ಷ ಅತಿ ಹೆಚ್ಚು ರೈತರ ಆತ್ಮಹತ್ಯೆಗಳು ಆಗಿರುವುದು ಮಹಾರಾಷ್ಟ್ರದಲ್ಲಿ. ನೆನಪಿರಲಿ 2018ರ ಚುನಾವಣೆ ಸಮಯದಲ್ಲಿ ಅಲ್ಲಿ ರೈತರ ಸಾಲ ಮನ್ನಾ ಸೇರಿದಂತೆ ರೈತರ ಸುಧಾರಣೆಗೆ ಆರ್ಥಿಕ ನೆರವು ನೀಡಿತ್ತು. ಆದರು 2019 ರಲ್ಲಿ 3,927 ರೈತರ ಆತ್ಮಹತ್ಯೆ ಆಗಿದೆ ಅಂದರೆ ಪ್ರತಿ ಘಂಟೆಗೆ ಒಂದಕ್ಕಿಂತ ಹೆಚ್ಚು ರೈತರ ಆತ್ಮಹತ್ಯೆ ಆಗುತ್ತಿದೆ.
ಪರಿಹಾರ ಕೇವಲ ಸಾಲಮನ್ನ ಅಥವಾ ಎಮ್.ಎಸ್.ಪಿ ಅಲ್ಲವೇ ಅಲ್ಲ ನಮ್ಮ ರೈತರನ್ನು ನಾವು ಸದೃಢರನ್ನಾಗಿಸಬೇಕು, ಆತ್ಮವಿಶ್ವಾಸಿಗಳನ್ನಾಗಿಸಬೇಕು, ದಲ್ಲಾಳಿಗಳಿಂದಾಗುವ ಭ್ರಷ್ಟಾಚಾರವನ್ನು ತಡೆಯಬೇಕು. ಅವರಿಗೆ ಹೊಸ ಟೆಕ್ನಾಲಜಿ ಬಗ್ಗೆ ಅರಿವು ಮೂಡಿಸಬೇಕು. ಸರ್ಕಾರದ ಈ ರೈತ ಕಾನೂನುಗಳು ಸರಿಯಾದ ರೀತಿಯಲ್ಲಿ ಜಾರಿಗೊಳಿಸುವಲ್ಲಿ ಗಮನ ಹರಿಸಬೇಕು.
ಪ್ರಕಾಶ್. ಎಂ
ಉಪನ್ಯಾಸಕರು