Advertisement
ಈ ಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ಸ್ಥಳೀಯ ರೈತರೇ ಸೇರಿಕೊಂಡು ಪ್ರತಿವರ್ಷವೂ ತಾತ್ಕಾಲಿಕ ಕಟ್ಟ ನಿರ್ಮಿಸಿ ತಮ್ಮ ತೋಟಕ್ಕೆ ನೀರನ್ನು ಬಳಸಿಕೊಳ್ಳುತ್ತಿದ್ದಾರೆ. ಇಂತಹ ಕಟ್ಟಗಳು ಒಂದೇ ವರ್ಷಕ್ಕೆ ಸೀಮಿತವಾಗಿದ್ದು, ಒಮ್ಮೆ ಮಳೆ ಬಂದು ತೋಡಿನಲ್ಲಿ ನೀರು ಹರಿದರೆ ಕಟ್ಟ ಸಂಪೂರ್ಣ ಕೊಚ್ಚಿ ಹೋಗುವ ಸ್ಥಿತಿ. ಹೀಗಾಗಿ ಕಿಂಡಿ ಅಣೆಕಟ್ಟು ನಿರ್ಮಾಣ ಗೊಂಡಲ್ಲಿ ಸ್ಥಳೀಯ ರೈತರ ನೀರಿನ ಬೇಡಿಕೆಗೆ ಪರಿಹಾರ ಸಿಕ್ಕಂತಾಗುತ್ತದೆ.
Related Articles
Advertisement
ರೈತರು ಸೇರಿ ನಿರ್ಮಾಣ
ಬಿ.ಸಿ.ರೋಡ್-ಧರ್ಮಸ್ಥಳ ಹೆದ್ದಾರಿ ಯಲ್ಲಿ ಸಾಗುವ ವೇಳೆ ನಾವೂರು ಗ್ರಾಮದ ಹಳೆಗೇಟು, ಹಂಚಿಕಟ್ಟೆ ಪ್ರದೇಶದಲ್ಲಿ ಹೆದ್ದಾರಿ ಬದಿ ತೋಡೊಂದು ಹರಿಯುತ್ತಿದ್ದು ಇದೇ ತೋಡಿಗೆ ಪೊಲೋಡಿ ಪ್ರದೇಶದಲ್ಲಿ ಕಟ್ಟ ನಿರ್ಮಿಸಲಾಗುತ್ತಿದೆ. ಹಿಂದಿನ ವರ್ಷಗಳಲ್ಲಿ 10ಕ್ಕೂ ಅಧಿಕ ರೈತರು ಸೇರಿ ಇಲ್ಲಿ ಕಟ್ಟ ನಿರ್ಮಿಸುತ್ತಿದ್ದು, ಪ್ರಸ್ತುತ ಹೆಕ್ಕೊಟ್ಟು ನಿವಾಸಿ ಪ್ಲಾಸಿಡ್ ಡಿ’ಸೋಜಾ ಅವರು ತಮ್ಮ ಸ್ವಂತ ಖರ್ಚಿನಿಂದ ಕಟ್ಟ ನಿರ್ಮಿಸಿರುತ್ತಾರೆ. ಇದರಿಂದ ಇತರ ತೋಟಗಳಿಗೂ ಪ್ರಯೋಜನವಾಗುತ್ತಿದೆ. ಗೋಣಿ ಚೀಲಕ್ಕೆ ತೋಡಿನ ಚರಳು(ಮರಳು)ನ್ನು ಬಳಸಿ ಗೋಡೆಯ ರೀತಿ ಜೋಡಿಸಲಾಗುತ್ತದೆ. ಬಳಿಕ ಅದರ ಮಧ್ಯಕ್ಕೆ ಮಣ್ಣನ್ನು ಹಾಕಿ ನೀರು ಹೊರಗೆ ಹರಿಯದಂತೆ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಸುಮಾರು ಒಂದು ಕಿ.ಮೀ. ಅಂದರೆ ಬಡಗುಂಡಿವರೆಗೂ ನೀರು ನಿಲ್ಲುತ್ತದೆ. ಆದರೆ ಕಟ್ಟವನ್ನು ಹೆಚ್ಚು ಎತ್ತರಕ್ಕೆ ಮಾಡಲು ಸಾಧ್ಯವಾಗದೇ ಇರುವುದರಿಂದ ಹೆಚ್ಚಿನ ಪ್ರಮಾಣದ ನೀರು ನಿಲ್ಲಿಸಲು ಅಸಾಧ್ಯವಾಗಿದೆ.
ಶಾಸಕರ ಮೂಲಕ ಅನುದಾನ
ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಶಾಸಕರ ಪ್ರಸ್ತಾವನೆಯಂತೆ ಅನುದಾನ ಬಿಡುಗಡೆ ಗೊಳ್ಳುತ್ತಿರು ವುದರಿಂದ ಸ್ಥಳೀಯ ರೈತರು ಶಾಸಕರಿಗೆ ಮನವಿ ನೀಡಬೇಕಾಗುತ್ತದೆ. ಅದರ ಸೂಚನೆಯಂತೆ ಸಂಬಂಧಪಟ್ಟ ಎಂಜಿನಿಯರ್ ಪರಿಶೀಲನೆ ನಡೆಸಿ ಯೋಜನ ವರದಿ ಸಿದ್ಧಪಡಿಸುತ್ತಾರೆ. ಇಲಾಖೆಯಿಂದ ಕ್ರಿಯಾಯೋಜನೆ ಸಿದ್ಧ ಮಾಡಿಕೊಂಡು ಸಣ್ಣ ನೀರಾವರಿ ಇಲಾಖೆಗೆ ಕಳುಹಿಸಲಾಗುತ್ತದೆ. –ಶಿವಪ್ರಸನ್ನ, ಸಹಾಯಕ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ ಬಂಟ್ವಾಳ
ಕಿಂಡಿ ಅಣೆಕಟ್ಟಿಗೆ ಮನವಿ
ಪ್ರತಿವರ್ಷವೂ ಪೊçಲೋಡಿ ಭಾಗದಲ್ಲಿ ಕಟ್ಟ ನಿರ್ಮಿಸಿ ನೀರನ್ನು ಸಂಗ್ರಹಿಸಲಾಗುತ್ತಿದ್ದು, ಹೀಗಾಗಿ ಸ್ಥಳೀಯ ರೈತರೆಲ್ಲರೂ ಸೇರಿ ಶಾಶ್ವತ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಆಗ್ರಹಿಸುತ್ತಿದ್ದೇವೆ. ಹಿಂದೆ ಗ್ರಾ.ಪಂ.ಗೆ ಮನವಿಯನ್ನೂ ನೀಡಿದ್ದೆವು. ಮುಂದೆಯೂ ಮನವಿ ಮಾಡಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಆಗ್ರಹಿಸುತ್ತೇವೆ. –ಮ್ಯಾಕ್ಸಿಂ ಸಿಕ್ವೇರ, ಸ್ಥಳೀಯ ಕೃಷಿ