Advertisement

ಸಾಲ ಮನ್ನಾಗೆ ಆಗ್ರಹಿಸಿ ರೈತರ ಧರಣಿ

04:19 PM Nov 17, 2018 | |

ಶಹಾಪುರ: ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿರುವ ರೈತರ ಸಾಲವನ್ನು ಯಾವುದೇ ಷರತ್ತು ಇಲ್ಲದೆ ಮನ್ನಾ ಮಾಡಬೇಕೆಂದು ಆಗ್ರಹಿಸಿ ಇಲ್ಲಿನ ಕೃಷಿ ಪ್ರಾಂತ ರೈತ ಸಂಘ ಎಸ್‌ಬಿಐ ಬ್ಯಾಂಕ್‌ ಎದುರು ಪ್ರತಿಭಟನೆ ನಡೆಸಿ ಸ್ಥಳಕ್ಕೆ ಆಗಮಿಸಿದ ಉಪ ತಹಶೀಲ್ದಾರ್‌ ಶ್ರೀಧರಾಚಾರ್ಯರಿಗೆ ಮನವಿ ಸಲ್ಲಿಸಿತು.

Advertisement

ರೈತ ಮುಖಂಡ ಚನ್ನಪ್ಪ ಆನೇಗುಂದಿ ಮಾತನಾಡಿ, ರೈತರು ಪಡೆದ 2 ಲಕ್ಷ.ರೂ. ಸಾಲವನ್ನು ಯಾವುದೇ ಷರತ್ತುಗಳಿಲ್ಲದೆ ಮನ್ನಾ ಮಾಡಬೇಕು. ರೈತರು ಕಳೆದ ನಾಲ್ಕು ವರ್ಷದಿಂದ ಸತತ ಬರದಿಂದ ಒಂದಿಲ್ಲೊಂದು ಸಮಸ್ಯೆಗಳಿಂದ ನರಳುತ್ತಿದ್ದಾರೆ. ಕಾರಣ ಕೇವಲ ಡಿಸಿಸಿ ಬ್ಯಾಂಕ್‌ನಲ್ಲಿನ ಸಾಲ ಮನ್ನಾ ಮಾಡಿದರೆ ಸಾಲದು, ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿರುವ ಕನಿಷ್ಟ 2 ಲಕ್ಷ ರೂ. ವರೆಗಿನ ಸಾಲವು ಮನ್ನಾ ಮಾಡಬೇಕು. ರೈತರಿಗೆ ವಿತರಿಸಬೇಕಾದ ಸಾಲವನ್ನು ನೀಡಬೇಕು ಎಂದು ಆಗ್ರಹಿಸಿದರು. 

ಯಾದಗಿರಿ ಜಿಲ್ಲಾ ಡಿಸಿಸಿ ಬ್ಯಾಂಕ್‌ನಲ್ಲಿ ಸುಳ್ಳು ಕಾಗದ ಪತ್ರ ಸೃಷ್ಟಿ ಮಾಡಿ ಸರ್ಕಾರದ ಹಣ ಲೂಟಿ ಮಾಡುವ ಹುನ್ನಾರ ನಡೆಸಿದ್ದು, ಕೂಡಲೇ ಅದನ್ನು ತಡೆಗಟ್ಟಬೇಕು ಮತ್ತು ಸಮಗ್ರ ತನಿಖೆ ಕೈಗೊಂಡು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಚನ್ನಪ್ಪ ಆನೇಗುಂದಿ, ಎಸ್‌. ಎಂ. ಸಾಗರ, ಬಸವರಾಜ ಭಜಂತ್ರಿ, ಭೀಮರಾಯ ಪೂಜಾರಿ, ಶರಬಣ್ಣ ಪೂಜಾರಿ, ಮಲ್ಲಣಗೌಡ ಪಾಟೀಲ, ಮಾಳಪ್ಪ ಪೂಜಾರಿ ಇದ್ದರು.  ಡಿಸಿಸಿ ಬ್ಯಾಂಕ್‌ಗೆ ರೈತ ಸಂಘ ಹಸಿರು ಸೇನೆ ಬೀಗ

‌ಹಾಪುರ: ರೈತರಿಗೆ ಸಾಲ ನೀಡುವಲ್ಲಿ ವಿಳಂಬತೆ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಘಟಕ ಇಲ್ಲಿನ ಡಿಸಿಸಿ ಬ್ಯಾಂಕ್‌ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿತು.
 
ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ, ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ರೈತರು ಬಿತ್ತನೆ ಮಾಡಿದ ಬೆಳೆಗೆ ಸಮರ್ಪಕ ನೀರು ದೊರೆಯದ ಕಾರಣ ಬೆಳೆ ಬಾಡಿ ಹೋಗಿರುವ ಸಂಕಷ್ಟ ಒಂದಡೆಯಾದರೆ, ರೈತರಿಗೆ ಸಾಲ ನೀಡುವ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ ಅಧಿಕಾರಿಗಳು ಸಾಲ ನೀಡುವಲ್ಲಿ ವಿಳಂಬ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಅಲ್ಲದೇ ತಾಲೂಕಿನ ಕೊಳ್ಳೂರ (ಎಂ) ಗ್ರಾಮದ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ನಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ಮೇಲಧಿಕಾರಿಗಳು ಈ ಕುರಿತು ತನಿಖೆ ನಡೆಸಬೇಕು ಮತ್ತು ಸಾಲ ಮನ್ನಾ ಮಾಡಲಾದ ರೈತರಿಗೂ ಮರು ಸಾಲ ಕೂಡಲೇ ನೀಡುವ ವ್ಯವಸ್ಥೆಯಾಗಬೇಕು. ಸಮರ್ಪಕವಾಗಿ ಬರ ಪರಹಾರ ಒದಗಿಸಬೇಕು. ರೈತರು ಬೆಳೆದ ಎಲ್ಲಾ ಆಹಾರ ಧಾನ್ಯಗಳನ್ನು ಸರ್ಕಾರವೇ ಖರೀದಿ ಮಾಡಬೇಕು ಎಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸ್ಥಳಕ್ಕೆ ಆಗಮಿಸಿದ್ದ ಉಪ ತಹಶೀಲ್ದಾರ್‌ ಶ್ರೀಧರಾಚಾರ್ಯ ಅವರಿಗೆ ರೈತರು ಮನವಿ ಸಲ್ಲಿಸಿದರು. ಮುಂಚಿತವಾಗಿ ನಗರದ ಚರಬಸವೇಶ್ವರ ಕಮಾನದಿಂದ ಡಿಸಿಸಿ ಬ್ಯಾಂಕ್‌ ವರೆಗೂ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಈ ಸಂದರ್ಭದಲ್ಲಿ ಸಂಘದ ನಾಗರತ್ನಾ ಪಾಟೀಲ ಯಕ್ಷಿಂತಿ, ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ, ಮಹಿಳಾ ಘಟಕ ತಾಲೂಕು ಅಧ್ಯಕ್ಷ ಚಂದ್ರಕಲಾ ವಡಿಗೇರಾ ಸೇರಿದಂತೆ ಪ್ರಮುಖರಾದ ದೇವಿಂದ್ರಪ್ಪ ಮಾಲಗತ್ತಿ, ಮಲ್ಲಣ್ಣ ಚಿಂತಿ, ಹಣಮಂತ ಕೊಂಗಂಡಿ, ಶರಣರಡ್ಡಿ ಹತ್ತಿಗೂಡೂರ, ಹಣಮಂತ್ರಾಯ ಮಡಿವಾಳ, ಶರಣು ಮಂದ್ರವಾಡ, ಮಲ್ಲಣ್ಣ ನೀಲಹಳ್ಳಿ, ರಾಘು ಟಿ. ವಡಿಗೇರಾ, ಭೀಮರಾಯ ಯಡ್ಡಹಳ್ಳಿ, ವೆಂಕಟೇಶ ಬಳಿಚಕ್ರ, ರಮೇಶ ಕೊಂಗಂಡಿ, ಪರಮಣ್ಣ ಮೇಟಿ, ಸಾಬಣ್ಣ ಪೂಜಾರಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next