Advertisement
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲದ ಕೊಡಿ ಹಣ ತುಂಬುತ್ತೇವೆ ಎಂದು ಹೇಳಿದರೂ ಮಾಹಿತಿ ಕೊಡುತ್ತಿಲ್ಲ. ನಾನು ಏನು ಮಾಡಬೇಕು ಎಂದು ಪ್ರಶ್ನಿಸಿದರು.
Related Articles
Advertisement
ನಾವು ಸಾಲ ಮನ್ನಾ ಮಾಡಲು ಸಿದ್ಧರಿದ್ದೇವೆ. ರಿಸರ್ವ್ ಬ್ಯಾಂಕ್ ಕಡೆಯಿಂದ ನಿರ್ದೇಶನ ಕೊಡಿಸಿ ಮಾಹಿತಿ ಕೊಡಬೇಕು. 6500 ಕೋಟಿ ರೂ. ಸಾಲ ಮನ್ನಾಗೆ ಇಡಲಾಗಿದ್ದು ನವೆಮಬರ್ 1 ರಿಂದ ಹಂತ ಹಂತವಾಗಿ ಬ್ಯಾಂಕ್‌ಗಳಿಗೆ ಬಿಡುಗಡೆ ಮಾಡಲಾಗುವುದು.
ನಾವು ಬ್ಯಾಂಕ್‌ಗಳಿಗೆ ಹಣ ತುಂಬಬೇಕಾದರೆ ಮಾಹಿತಿ ಬೇಕಾಗುತ್ತದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಪ್ರಧಾನಿ ಮೋದಿ ಹಾಗೂ ಹಣಕಾಸು ಸಚಿವ ಅರುಣ್ ಜೇಟಿÉ ವ್ಯಾಪ್ತಿಗೆ ಬರುತ್ತವೆ. ಡೇಟಾ ಬೇಸ್ ಕೊಡಿಸುವ ಕೆಲಸವನ್ನು ಬಿಜೆಪಿಯವರು ಮಾಡಲಿ. ಸರ್ಕಾರದಲ್ಲಿ ಹಣಕಾಸಿನ ಸಮಸ್ಯೆಯಿಲ್ಲ. ಬ್ಯಾಂಕುಗಳು ತಿಳುವಳಿಕೆ ಪತ್ರ ಕೊಟ್ಟಿದ್ದಾರೆ. ಬ್ಯಾಂಕುಗಳ ಬಳಿ ಮಾಹಿತಿ ಪಡೆಯಲು ಅಧಿಕಾರಿಗಳ ತಂಡ ನಿಯೋಜಿಸಲಾಗಿದೆ ಎಂದು ಹೇಳಿದರು.