ಬಸ್ರೂರು: ಭಾರತ ಕೃಷಿ ಪ್ರಧಾನವಾದ ದೇಶ. ಕೃಷಿಕರು ಈ ದೇಶದ ಬೆನ್ನೆಲುಬು. ಆದರೆ ಬದಲಾದ ಕಾಲಘಟ್ಟದಲ್ಲಿ ಸಾಂಪ್ರದಾಯಿ ಕೃಷಿ ಚಟುವಟಿಕೆ ಕಾಣೆಯಾಗಿದೆ.ಮತ್ತೂಂದೆಡೆ ಸುಧಾರಿತ ಬೇಸಾಯ ಕ್ರಮವೂ ಸಾಕಷ್ಟು ಪ್ರಗತಿ ಕಂಡಿಲ್ಲ. ಸುಧಾರಿತ ಕೃಷಿ ಚಟುವಟಿಕೆಯನ್ನು ಆರಂಭಿಸಿದರೆ ನಾಡಿನ ರೈತ ಸ್ವಾವಲಂಬಿಯಾಗಬಲ್ಲ. ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇ.ಧ. ಗ್ರಾ. ಯೋಜನೆಯ ವತಿಯಿಂದ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ನಡೆಯುತ್ತಿರುವಂತೆ ಬಳ್ಕೂರು ಶಾಲೆಯಲ್ಲಿ ನಡೆಯುವ ಸೊÌàದ್ಯೋಗ ಮತ್ತು ಕೃಷಿ ವಿಚಾರ ಸಂಕಿರಣ ಮಹತ್ವ ಪಡೆಯುತ್ತದೆ. ಅಲ್ಲದೆ ಪ್ರಗತಿ ಪರ ರೈತರು ಸೃಷ್ಟಿಯಾಗುತ್ತಾರೆ ಎಂದು ಡಾ| ಬಿ. ಉಡುಪ ಹೇಳಿದರು.
ಅವರು ಬಳ್ಕೂರು ಹಿ.ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾವೃದ್ಧಿ ಯೋಜನೆ ಕುಂದಾಪುರ ತಾಲೂಕು, ಬಳ್ಕೂರು ಗ್ರಾ.ಪಂ., ಕಾವ್ರಾಡಿ ವ್ಯವಸಾಯ ಸೇವಾ ಸಹಕಾರಿ ಸಂಘ ಕಂಡ್ಲೂರು ಹಾಗೂ ಬಸ್ರೂರು ವಲಯ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಇವರ ಜಂಟಿ ಆಶ್ರಯದಲ್ಲಿ ನಡೆದ ಸೊÌàದ್ಯೋಗ- ಕೃಷಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಜನ ಜಾಗೃತಿ ವೇದಿಕೆ ಅಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಅವರು ವಹಿಸಿ ಮಾತನಾಡಿ, ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಪ್ರಸ್ತುತ ಸುಧಾರಿತ ಬೇಸಾಯ ಕ್ರಮದ ಅಳವಡಿಕೆ ಅಗತ್ಯವಾಗಿದೆ. ರೈತ ಈ ನಾಡಿನ ಬೆನ್ನೆಲುಬಾಗಿದ್ದು, ಆತನ ಕೃಷಿ ಬದುಕು ಹಸನಾಗಲು ಈ ವಿಚಾರ ಸಂಕಿರಣ ಅಗತ್ಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪುರುಷೋತ್ತಮ ಪಿ.ಕೆ., ತಾಲೂಕು ಯೋಜನಾಧಿಕಾರಿ ಮುರಳೀಧರ ಶೆಟ್ಟಿ, ವೇ| ಮೂ| ಶ್ರೀಧರ ಉಡುಪ, ಬಳ್ಕೂರು ಗ್ರಾ.ಪಂ. ಅಧ್ಯಕ್ಷ ಅಕ್ಷತ್ ಶೇರೆಗಾರ್, ಪ್ರಗತಿ ಬಂಧು ಒಕ್ಕೂಟದ ವಲಯಾಧ್ಯಕ್ಷ ಶಶಿಕಾಂತ್ ಎಸ್.ಕೆ., ಕಾವ್ರಾಡಿ ವ್ಯವಸಾಯ ಸೇವಾ ಸಹಕಾರಿ ಸಂಘ ಕಂಡೂÉರಿನ ಅಧ್ಯಕ್ಷ ಜಿ. ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು.
ಬಸೂÅರು ವಲಯ ಮೇಲ್ವಿಚಾರಕ ಮಂಜುನಾಥ್ ಗೌಡ ಸ್ವಾಗತಿಸಿದರು. ಕೃಷಿ ಅಧಿಕಾರಿ ಚೇತನ್ ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಕಾರ್ಯದರ್ಶಿ ರಾಜೀವಿ ವಂದಿಸಿದರು.
ಬಳಿಕ ಸೊÌàದ್ಯೋಗ -ಕೃಷಿ ವಿಚಾರ ಸಂಕಿರಣ ಮತ್ತು ಭವಿಷ್ಯತ್ತಿಗಾಗಿ ಸೆಲ್ಕೊ ಸೋಲಾರ್ ಬಗ್ಗೆ ಮಾಹಿತಿ ಶಿಬಿರ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸರಸ್ವತಿ ಆರ್. ಅಧ್ಯಕ್ಷತೆಯಲ್ಲಿ ನಡೆಯಿತು.
ಚಂದ್ರ ಶೇಖರ್ ಉಡುಪ, ಸೆಲ್ಕೊ ಸೋಲಾರ್ ಪ್ರಬಂಧಕ ಮಂಜುನಾಥ್, ಪ್ರಕಾಶ್, ಕೃಷ್ಣಯ್ಯ ಶೆಟ್ಟಿಗಾರ್, ಸರಸ್ವತಿ, ಅಶೋಕ್ ಕೆರೆಕಟ್ಟೆ ಮೊದಲಾದವರು ಪಾಲ್ಗೊಂಡಿದ್ದªರು.