Advertisement

ಬೇಡಿಕೆಗಳ ಈಡೇರಿಕೆಗೆ ಕೃಷಿಪರಿಕರ ವ್ಯಾಪಾರಸ್ಥರ ಆಗ್ರಹ

02:23 PM Dec 22, 2018 | |

ವಿಜಯಪುರ: ರೈತರಿಗೆ ರಿಯಾಯ್ತಿ ದರದಲ್ಲಿ ಕೃಷಿ ಕೆಲಸಕ್ಕಾಗಿ ಬೀಜ, ಕ್ರಿಮಿನಾಶಕ ಸೇರಿ ಅಧಿಕೃತ ಲೈಸನ್ಸ್‌ ಹೊಂದಿದ ಕೃಷಿ ವರ್ತಕರ ಮೂಲಕವೇ ಮಾರಾಟವಾಗುವ ವ್ಯವಸ್ಥೆ ರೂಪಿಸುವಂತೆ ಆಗ್ರಹಿಸಿ ವಿಜಯಪುರ ಜಿಲ್ಲಾ ಕೃಷಿ ಪರಿಕರ ಮಾರಾಟಗಾರರ ಸಂಘದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

Advertisement

ನೇತೃತ್ವ ವಹಿಸಿದ್ದ ಸಂಘಟನೆ ಮುಖಂಡ ಪುಟ್ಟು ಕುಲಕರ್ಣಿ ಮಾತನಾಡಿ, ಕೃಷಿ ಪರಿಕರ ಮಾರಾಟರರು ಪ್ರಸಕ್ತ ಸಂದರ್ಭದಲ್ಲಿ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೃಷಿ ಪರಿಕರ ಮಾರಾಟಗಾರರ ಪರವಾನಿಗೆ ವಿತರಣೆ, ನವೀಕರಣ ಪ್ರಕ್ರಿಯೆಯಲ್ಲಿ ಸಾಕಷ್ಟು ವ್ಯತ್ಯಯವಾಗುತ್ತಿದೆ. ಇದರಿಂದ ಕೃಷಿ ಪರಿಕರ ಮಾರಾಟಗಾರರು ಸಮಸ್ಯೆ ಎದುರಿಸುತ್ತಿದ್ದು, ಕೂಡಲೇ ಲೈಸನ್ಸ್‌ ವ್ಯವಸ್ಥೆ ಸರಳೀಕರಣ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ 50 ಸಾವಿರಕ್ಕೂ ಹೆಚ್ಚು ಅಧಿಕೃತ ಲೈಸನ್ಸ್‌ ಹೊಂದಿದ ಕೃಷಿ ಪರಿಕರ ಮಾರಾಟಗಾರರಿದ್ದಾರೆ. ಈ ವೃತ್ತಿ ನಂಬಿ 6 ಲಕ್ಷ ಜನರು ತಮ್ಮ ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ಮಾರಾಟಗಾರರಿಗೆ ಬಲ ನೀಡುವ ನಿಟ್ಟಿನಲ್ಲಿ ಸರ್ಕಾರದಿಂದ ಕೃಷಿ ಉದ್ದೇಶಗಳಿಗೆ ರಿಯಾಯ್ತಿ ರೂಪದಲ್ಲಿ ನೀಡುವ ಕೃಷಿ ಪರಿಕರಗಳನ್ನು ಅಧಿಕೃತ ಲೈಸನ್ಸ್‌ ಮಾರಾಟಗಾರರಿಂದಲೇ ಮಾರುವ ವ್ಯವಸ್ಥೆ ರೂಪಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಕೃಷಿ ಪರಿಕರ ಮಾರಾಟಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next