Advertisement
ಕೋವಿಡ್ 19ಕೃಷಿಯಿಂದ ದೇಶದ ಜಿಡಿಪಿಗೆ ಸಿಗುವ ಪಾಲು ಶೇ.16ರಷ್ಟು ಮಾತ್ರ. ಆದರೆ ದೇಶದ ಉದ್ಯೋಗಿಗಳಲ್ಲಿ ಶೇ.55ರಷ್ಟು ಕೃಷಿಯಲ್ಲೇ ಜೀವನ ಕಂಡುಕೊಂಡಿದ್ದಾರೆ. ಇದು ಕೃಷಿಕ್ಷೇತ್ರದ ಮಹತ್ವವನ್ನು ತೋರಿಸುವ ಸಂಗತಿ.
ಭಾರತೀಯ ಹವಾಮಾನ ಇಲಾಖೆ, ಈ ಬಾರಿ ಮುಂಗಾರು ಮಳೆ ಸ ಮ ಯಕ್ಕೆ ಸರಿಯಾಗಿ ಶುರುವಾಗಿ ಉತ್ತ ಮ ವಾಗಿ ಬೀಳುವ ಸೂಚನೆ ನೀ ಡಿದೆ. ಆದರೂ ಕೋವಿಡ್ 19 ಪರಿಣಾಮ ನೀರಿಗಾಗಿ ಬೇಡಿಕೆ ಹೆಚ್ಚಿದೆ. ದಾಖಲೆಯ ಧಾನ್ಯ ಉತ್ಪಾದನೆ ನಿರೀಕ್ಷೆ
ಈ ಬಾರಿ ಮುಂಗಾರು ಮತ್ತು ಹಿಂಗಾರು ಸೇರಿ ಭಾರತ ದಲ್ಲಿ 300 ಮಿಲಿಯನ್ ಟನ್ ಆಹಾರ ಧಾನ್ಯ ಉತ್ಪಾದನೆಯಾಗುವ ನಿರೀಕ್ಷೆಯಿದೆ. 149.92 ಮಿಲಿಯನ್ ಟನ್ (ಮುಂಗಾರು
ಬೆಳೆ), 148.4 ಮಿಲಿ ಯನ್ ಟನ್ (ಹಿಂಗಾರು ಬೆಳೆ) ಬರುವ ಲಕ್ಷಣ ಈಗಾಗಲೇ ಸಿಕ್ಕಿದೆ.
Related Articles
2020-21ರಲ್ಲಿ ಕೃಷಿ ಶೇ.3ರಷ್ಟು ಉತ್ಪಾದನೆ ಪ್ರಮಾಣ ಏರಿಕೆಯಾಗುವ ಸಾಧ್ಯತೆಯಿದೆ. ಇದರಿಂದ ದೇಶದ ಜಿಡಿಪಿ ಪ್ರಗತಿದರ ಶೇ.0.5ರಷ್ಟು ಏರಲಿದೆ. ಹಾಗಾಗಿ ಆರ್ಥಿಕ ಹಿಂಜರಿತಕ್ಕೆ ತಡೆಯಾಗಿ ನಿಲ್ಲಬಹುದು ಎಂಬ ಆಶಾಭಾವವಿದೆ. ರೈತರು ಆಹಾರ ಧಾನ್ಯಗಳೊಂದಿಗೆ ವಾಣಿಜ್ಯ ಬೆಳೆ ಬೆಳೆಯುವುದೂ ಇದಕ್ಕೆ ಕಾರಣ.
Advertisement
ಇತರೆ ಉದ್ಯಮಗಳ ಸ್ಥಿತಿ27.4 ಶೇ. ಖರೀದಿ ಮತ್ತು ತಯಾರಿಕಾ (ಪಿಎಂ) ಸೂಚ್ಯಂಕದ ಪ್ರಕಾರ, ಏಪ್ರಿಲ್‌ನಲ್ಲಿ ಇತರೆ ಉದ್ಯಮಗಳ ಉತ್ಪಾದನೆ ಪ್ರಮಾಣ ಕುಸಿತ. 51.8 ಶೇ
ಪಿಎಂ ಸೂಚ್ಯಂಕದ ಪ್ರಕಾರ ಮಾರ್ಚ್ ತಿಂಗಳಲ್ಲಿ ಇದ್ದ ಉತ್ಪಾದನೆ ಪ್ರಮಾಣ. 80 ಶೇ.
ಸಿಐಐ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಸಹಜಸ್ಥಿತಿ ಮರುಕಳಿಸಲು ಕನಿಷ್ಠ 6 ತಿಂಗಳು ಬೇಕು ಎಂದ ಸಿಇಒಗಳ ಪ್ರಮಾಣ.