Advertisement

ಹೊಸ ವಿದ್ಯುತ್‌ ಕಾಯ್ದೆಗೆ ರೈತ ಸಂಘ ವಿರೋಧ

05:29 AM Jun 03, 2020 | Lakshmi GovindaRaj |

ಮೈಸೂರು: ವಿದ್ಯುತ್‌ ಪ್ರಾಧಿಕಾರ ಖಾಸಗೀಕರಣಕ್ಕೆ ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಮಾತನಾಡಿದ ನಾಗೇಂದ್ರ, ಕೇಂದ್ರ ಸರ್ಕಾರ ವಿದ್ಯುತ್‌ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿ ಕರಡನ್ನು ರಾಜ್ಯ ಸರ್ಕಾರಗಳ ಅಭಿಪ್ರಾಯಕ್ಕೆ ಕಳುಹಿಸಿಕೊಟ್ಟಿದೆ. ಈಗಾಗಲೇ ತಮಿಳುನಾಡು  ಸೇರಿದಂತೆ ಹಲವು ರಾಜ್ಯಗಳು ಈ ಉದ್ದೇಶಿತ ತಿದ್ದುಪಡಿಗೆ ಅಸಮ್ಮತಿ ಸೂಚಿಸಿವೆ. ಅದೇ ರೀತಿ ನಮ್ಮ ರಾಜ್ಯವೂ ಅಸಮ್ಮಿತಿ ಸೂಚಿಸಬೇಕು ಎಂದು ಆಗ್ರಹಿಸಿದರು.

ಪ್ರೊ.ನಂಜುಂಡಸ್ವಾಮಿ ಮತ್ತು ಪುಟ್ಟಣ್ಣಯ್ಯ ನೇತೃತ್ವದಲ್ಲಿ ರೈತ ಚಳವಳಿ ಹಿಂದಿನಿಂದಲೂ ವಿದ್ಯುತ್‌  ಖಾಸಗೀಕರಣದ ವಿರುದ ಹೋರಾಟ ನಡೆಸಿರುವುದು ಸಿಎಂ ಗಮನಕ್ಕೆ ಈಗಾಗಲೇ ಬಂದಿದೆ. ಅವರೂ ರೈತ ಹೋರಾಟಕ್ಕೆ ಪೂರಕವಾಗಿ ಈ ಹಿಂದೆ ಬೆಂಬಲ ವ್ಯಕ್ತಪಡಿಸಿದ್ದರು. ಆ ನಿಲುವಿಗೆ ಈಗಲೂ ತಾವು  ಬದಟಛಿರಿರಬೇಕೆಂದರು. ಖಾಸಗಿಕರಣದಿಂದ ರೈತರು ಮತ್ತು ಸಣ್ಣಪುಟ್ಟ ಉದ್ದಿಮೆದಾರರು ಹಾಗೂ ಗ್ರಾಹಕರಿಗೆ ತೊಂದರೆಯಾಗಲಿದೆ.

ಕೇಂದ್ರದ ಉದ್ದೇಶಿತ ವಿದ್ಯುತ್‌ ಕಾಯ್ದೆ ತಿದ್ದುಪಡಿಗೆ ತಕರಾರು ಎತ್ತಬೇಕು ಎಂದು ಒತ್ತಾಯಿಸಿದರು.ಜಿಲ್ಲಾಧ್ಯಕ್ಷ ಕುಮಾರ್‌,  ಪ್ರಧಾನ ಕಾರ್ಯದರ್ಶಿ ಬಸವರಾಜು, ಮಹಿಳಾ ಅಧ್ಯಕ್ಷೆ ನೇತ್ರಾವತಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next