ಮದ್ದೂರು: ತಾಲೂಕಿನ ಭಾರತೀನಗರ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಸ್ಥಳೀಯ ರೈತರ ಸಮಾಲೋಚನಾ ಸಭೆ ಪಟ್ಟಣದ ಲೀಲಾವತಿ ಬಡಾವಣೆ ಚಾಂಷುಗರ್ ಕಬ್ಬು ವಿಭಾಗದ ಉಪ ಕಚೇರಿಯಲ್ಲಿ ಜರುಗಿತು.
ಸಭೆ ವೇಳೆ ಜೂನ್ ಮೊದಲ ವಾರದಲ್ಲಿ ಪ್ರಸಕ್ತಹಂಗಾಮಿನ ಕಬ್ಬು ಅರೆಯುವ ಸಂಬಂಧ ರೈತ ಸಂಘದಸದಸ್ಯರೊಡನೆ ಚರ್ಚಿಸಿದ ಕಾರ್ಖಾನೆ ಅಧಿಕಾರಿಗಳುಹಿಂದಿನಂತೆ ಪ್ರಸಕ್ತ ಸಾಲಿನಲ್ಲಿಯೂ ಸಹಕರಿಸುವಂತೆ ಮನವಿ ಮಾಡಿದರು.
ವಿವಿಧ ಸಲಹೆ: ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಲಿಂಗಪ್ಪಾಜಿ ಮಾತನಾಡಿ, ರೈತರು ಸರಬರಾಜು ಮಾಡುವ ಟನ್ ಕಬ್ಬಿಗೆ ಕಾರ್ಖಾನೆವತಿಯಿಂದ 300 ರೂ. ಪ್ರೋತ್ಸಾಹಧನ, ಕಟಾವು ದರ ನಿಗದಿ, ಕಾರ್ಖಾನೆಯೇ ಕಟಾವು ಹಣ ಪಾವತಿಸಂಬಂಧ ಜವಾಬ್ದಾರಿ ಹೊರುವ ಕಬ್ಬು ಸರಬರಾಜುಮುಗಿದ ತಿಂಗಳೊಳಗೆ ರೈತರಿಗೆ ಹಣ ಪಾವತಿಸುವುದೂ ಸೇರಿ ವಿವಿಧ ಸಲಹೆ ಮುಂದಿಟ್ಟರು.
ಭರವಸೆ: ರೈತರ ಸಲಹೆ ಆಲಿಸಿದ ಕಾರ್ಖಾನೆ ಉಪಾಧ್ಯಕ್ಷ ಮಣಿ, ಕೆಲ ಬೇಡಿಕೆಗಳನ್ನು ಆಡಳಿತ ಮಂಡಳಿಗಮನಕ್ಕೆ ತರುವ ಜತೆಗೆ ಕಬ್ಬು ಕಟಾವು ಮೇಸ್ತ್ರಿಗಳ ಹಣಬಟವಾಡೆಗೆ ರೈತರ ಕಬ್ಬಿನ ಹಣದಲ್ಲಿ ನಿಗದಿತ ಹಣನೀಡುವ ಕುರಿತಾಗಿ ಸಮ್ಮತಿಸಿದರಲ್ಲದೇ ಒಂದುತಿಂಗಳೊಳಗೆ ಅಂತಿಮ ಬಟವಾಡೆ ನೀಡುವುದಾಗಿಭರವಸೆ ನೀಡಿದರು.
ರೈತರ ಕಬ್ಬು ಸಾಗಿಸುವ ಲಾರಿ ಮತ್ತು ಟ್ರ್ಯಾಕ್ಟರ್ ದರ ನಿಗದಿ ಕುರಿತಾಗಿ ಉತ್ತರಿಸಿದ ಉಪಾಧ್ಯಕ್ಷ ಮಣಿ,ಮುಂದಿನ ತಿಂಗಳು ಲಾರಿ ಮಾಲಿಕರು ಮತ್ತು ರೈತಮುಖಂಡರ ಸಭೆ ಕರೆದು ಚರ್ಚಿಸಿ ಕ್ರಮ ವಹಿಸುವ ಕುರಿತಾಗಿ ಹೇಳಿದರು.
ಸಹಕರಿಸಿ: ರೈತರು ಗುಣಮಟ್ಟದ ಕಬ್ಬು ಸರಬರಾಜು ಮಾಡುವ ಜತೆಗೆ ಕಾರ್ಖಾನೆ ಆಡಳಿತ ಮಂಡಳಿಯೊಡನೆ ಸಹಕರಿಸುವಂತೆ ಸಭೆ ವೇಳೆ ಮನವಿ ಮಾಡಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಜಿ.ಎ.ಶಂಕರ್, ಗೌರವಾಧ್ಯಕ್ಷ ಪುಟ್ಟಸ್ವಾಮಿ, ತಾಲೂಕು ಅಧ್ಯಕ್ಷ ಜಿ.ಕೆ.ರಾಮಕೃಷ್ಣ, ಪದಾಧಿಕಾರಿಗಳಾದ ಸಿದ್ದೇಗೌಡ,ವಿನೋದ್‌ಬಾಬು, ವೆಂಕಟೇಶ, ಗೊಲ್ಲರದೊಡ್ಡಿ ಅಶೋಕ್, ಕಾರ್ಖಾನೆಯ ಹಿರಿಯ ವ್ಯವಸ್ಥಾಪಕ ಮಹದೇವ ಪ್ರಸಾದ್, ಅಧಿಕಾರಿಗಳಾದ ಕೆ.ನಾಗರಾಜು, ನಿತಿಶ್, ಮಂಜು ಮತ್ತಿತರರು ಉಪಸ್ಥಿತರಿದ್ದರು.