Advertisement

ದೇಶ ಶಾಂತಿಗಾಗಿ ಸಂದೇಶ ಸಾರಿ ಸೈಕಲ್ ನಲ್ಲಿ ದೇಶ ಸುತ್ತಿದ ರೈತ

03:18 PM Feb 09, 2023 | Team Udayavani |

ಬೆಳ್ತಂಗಡಿ: ದೇಶ ಶಾಂತಿಯಿಂದ ನೆಲೆಸಬೇಕು, ಮಕ್ಕಳು ಗುರು ಹಿರಿಯರಿಗೆ ಗೌರವ ನೀಡಬೇಕು ಹಾಗೂ ಭವಿಷ್ಯದ ಪೀಳಿಗೆಗೆ ನದಿಗಳ ಸಂರಕ್ಷಣೆಯೊಂದಿಗೆ ಶುದ್ಧ ನೀರು, ಶುದ್ಧ ಗಾಳಿ ನಮ್ಮದಾಗಬೇಕು ಎಂಬ ಸಂದೇಶ ಸಾರುತ್ತಾ ರಾಯಚೂರಿನಿಂದ ಸೈಕಲ್ ನಲ್ಲೇ 13 ರಾಜ್ಯ ಸುತ್ತಿ ಧರ್ಮಸ್ಥಳ ತೀರ್ಥ ಕ್ಷೇತ್ರವನ್ನು ಸಂದರ್ಶಿಸಿದ್ದಾರೆ.

Advertisement

ರಾಯಚೂರು ಜಿಲ್ಲೆಯ ಸಿಂಧನೂರಿನ ಐವತ್ತೈದು ವರ್ಷದ ವಿಜಯ್ ಗೋಪಾಲ್ ಕೃಷ್ಣ ಎಂಬುವರು ಕಳೆದ 2022 ಮಾರ್ಚ್ 11 ರಂದು ತಮ್ಮ ಸೈಕಲ್ ಏರಿ ದೇಶ ಸುತ್ತಲು ಹೊರಟವರು ಕಾಶಿಯಿಂದ ರಾಮೇಶ್ವರ ವರೆಗೆ ಕರ್ನಾಟಕ, ತೆಲಂಗಾಣ, ಗುಜರಾತ್, ಅಯೋಧ್ಯೆ, ಉತ್ತರಪ್ರದೇಶ, ಕಾಶಿ, ಮಧುರ, ಆಗ್ರ, ಹರಿಯಾಣ, ದೆಹಲಿ, ಪಂಜಾಬ್, ರಾಜಸ್ಥಾನ, ತಮಿಳುನಾಡು, ಕೇರಳ ಸುತ್ತಿ ಧರ್ಮಸ್ಥಳಕ್ಕೆ ಬಂದು ಉಡುಪಿ, ಕಾರಾವಾರ ತೆರಳಲು ಅಣಿಯಾಗಿದ್ದಾರೆ.

ಅವಿವಾಹಿತರಾಗಿರುವ ಇವರು ವ್ಯವಸಾಯಯೇ ಜೀವನಾಧಾರ. ಭಾರತವು ಸುಭದ್ರ ರಾಷ್ಟ್ರವಾಗಬೇಕು. ದೇಶದಲ್ಲಿ ಅನಾಚಾರ, ದೃಷ್ಕೃತ್ಯಗಳು ನಿಲ್ಲಬೇಕು, ಹಾಗೂ ಎಲ್ಲರೂ ದೈವ ಭಕ್ತರಾಗಿದ್ದು ಶಾಂತಿಗಾಗಿ ದೇಶಕ್ಕೆ ಏನನ್ನಾದರು ಕೊಡುಗೆ ನೀಡಿ ಎಂಬುದು ಇವರ ಸೈಕಲ್ ಯಾತ್ರೆಯ ಉದ್ದೇಶವಾಗಿದೆ.

ಸುಮಾರು 22,000 ಕಿ.ಮೀ. ಕೇವಲ ಸೈಕಲ್ ನಲ್ಲಿಯೇ ಸುತ್ತಾಡಿದ ಇವರು, ದೇಶದಲ್ಲಿ ಗಂಗಾ, ಯಮುನಾ, ಸರಸ್ವತಿ ಸಹಿತ 12 ಪ್ರಮುಖದ ನದಿಗಳನ್ನು ಸಂದರ್ಶಿಸಿದ್ದಾರೆ.

ದೇವಸ್ಥಾನದಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲೇ ನಿದ್ರೆ. ಆಹಾರ ಸೇವಿಸುತ್ತಾ ದಿನ ಒಂದಕ್ಕೆ 70 ರಿಂದ 80 ಕಿ.ಮೀ. ಪ್ರಯಾಣಿಸುತ್ತಾರೆ. ಭಾರತದಲ್ಲಿ ನನಗಿಂತ ಹೆಚ್ಚಾಗಿ ಧ್ವಜಕ್ಕೆ ಬೆಲೆಯಿದ್ದು ಭಾರತೀಯ ಸಂಸ್ಕೃತಿಯ ಒಪ್ಪುವವರೆಲ್ಲಾ ನನಗೆ ಎಲ್ಲ ರಾಜ್ಯಗಳಲ್ಲೂ ಸಹಾಯ, ಸಹಕಾರ ಒದಗಿಸಿದ್ದಾರೆ ಎಂದು ಉದಯವಾಣಿಗೆ ತಿಳಿಸಿದರು.

Advertisement

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಬಳಿಕ ಬೆಳ್ತಂಗಡಿ ಮಾರ್ಗವಾಗಿ ಉಡುಪಿಗೆ ಸಾಗಿದರು. ಕೇವಲ ಐದನೇ ತರಗತಿ ಶಿಕ್ಷಣ ಪಡೆದ ವಿಜಯ್ ಅವರು ಕನ್ನಡ, ಹಿಂದಿ, ಆಂಗ್ಲ ಭಾಷೆಯಲ್ಲೂ ವ್ಯವಹರಿಸುವ ಮೂಲಕ ದೇಶದ ಬಗೆಗಿನ ಅವರ ಅಮರ ಪ್ರೇಮ ಮಾದರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next