Advertisement

ರೈತರಿಗೆ ವರದಾನ: ತೋಟದ ತೇವಾಂಶ ಕಾಪಾಡುವ ಗೆಣಸಿನ ಬಳ್ಳಿ

08:02 PM Mar 05, 2022 | Team Udayavani |

ಕೊರಟಗೆರೆ: ಬೇಸಿಗೆಯಲ್ಲಿ ಅಡಿಕೆ ಮರಗಳ ತೇವಾಂಶವನ್ನು ಕಾಪಾಡಲು ವಿವಿಧ ರೀತಿಯ ಹಸಿರು ಗೊಬ್ಬರದ ಗಿಡಗಳನ್ನು ಬೆಳೆಸುವ ಪದ್ದತಿ, ಈಗಲೂ ತಾಲ್ಲೂಕಿನ ಹಲವು ಗ್ರಾಮಗಳ ರೈತರ ಅಡಿಕೆ ತೋಟಗಳಲ್ಲಿ ಜೀವಂತವಾಗಿದೆ.

Advertisement

ಆರೇಳು ವರ್ಷಗಳಿಂದ ಜಿಲ್ಲೆಯಲ್ಲಿ ಇತರೆ ಯಾವುದೇ ಬೆಳೆಗಳಿಗಿಂತ ಹೆಚ್ಚು ಪ್ರದೇಶದಲ್ಲಿ ಅಡಿಕೆ ಸಸಿಗಳ ನಾಟಿ‌ ನಡೆಯುತ್ತದೆ. ಅಡಿಕೆ ಬೆಳೆಗೆ ಇತರೆ ಬೆಳೆಗಳಿಗಿಂತ ಸಮೃದ್ಧವಾದ ನೀರು ಬೇಕು.ಬೇಸಿಗೆ ಕಾಲದಲ್ಲಿ ಅಡಿಕೆ ಬೆಳೆಗೆ ನೀರು ನೀಡುವುದು ಸುಲಭದ ಕೆಲಸವಲ್ಲ. ಬಹಳ ಹಿಂದಿನಿಂದಲೂ ಸ್ಥಳೀಯರು ಸರಳವಾದ ಉಪಯೋಗಕರ ಪರಿಹಾರ ಕ್ರಮಗಳನ್ನು ಹುಡುಕಿಕೊಂಡಿದ್ದಾರೆ.

ರೈತರು ಅಡಿಕೆ ತೋಟದಲ್ಲಿ ಸಿರಿ ಧಾನ್ಯಗಳಾದ ಕೊರಲೆ ಮತ್ತು ಹಾರಕ ಬೆಳೆದು ತೇವಾಂಶವನ್ನು ತೋಟದ ಮಣ್ಣಿನಲ್ಲಿ ಉಳಿಸುವುದು. ಅಳಿಲು ಮತ್ತು ಇಲಿಗಳು ಅಡಿಕೆ ಮರಗಳನ್ನು ಹತ್ತಿ ಅಡಿಕೆ ಪೀಚುಗಳನ್ನು ಕಡಿದು ನೆಲಕ್ಕೆ ಬೀಳಿಸುತ್ತಿದ್ದವು.ಇದನ್ನು ರೈತರು ಗಮನಿಸಿ ಈ ಪ್ರಾಣಿಗಳಿಗೆ ಆಹಾರ ಸಿಗುವಂತೆ ತೋಟದ ನೆಲದಲ್ಲಿ ಸಿರಿ ಧಾನ್ಯ ಬೆಳೆಗಳನ್ನು ಬೆಳೆಯುತ್ತಾರೆ.

ರೈತರು ತಮ್ಮ ತೋಟಗಳಲ್ಲಿ ಅಲಸಂದೆ, ಹೆಸರು , ಸೆಣಬು, ಉದ್ದು ಮತ್ತು ಹುರುಳಿಯನ್ನು ಬೆಳೆಯುತ್ತಾರೆ.ಈ ಬೆಳೆಗಳು ನಾಲ್ಕು ತಿಂಗಳು ಮಾತ್ರ ಇರುತ್ತವೆ. ರೈತರು ಪ್ರತಿವರ್ಷ ಸಿರಿ ಧಾನ್ಯ ಬೀಜಗಳನ್ನು ನಾಟಿ ಮಾಡುವುದನ್ನು ತಪ್ಪಿಸಿಕೊಳ್ಳಲು ಗೆಣಸಿನ ಬಳ್ಳಿಗಳನ್ನು ನಾಟಿ ಮಾಡುವ ಪದ್ದತಿ ಪ್ರಾರಂಭಿಸಿದ್ದಾರೆ.

ಜಯಪದ್ಮಮ್ಮ ಅಡಿಕೆ ತೋಟದ ಮಾಲೀಕರು ತೋವಿನಕೆರೆ.

Advertisement

ಕಳೆದ15 ವರ್ಷದಿಂದ ಅಡಿಕೆ ತೋಟದಲ್ಲಿ ಗೆಣಸಿನ ಬಳ್ಳಿ ಬೆಳೆಸಿದ್ದಾರೆ. ಬೇಸಿಗೆಯಲ್ಲಿ ತೋಟಕ್ಕೆ ಸಾಕಷ್ಟು ತೃಪ್ತಿಕರವಾಗಿ ನೀರು ಕೊಡಲು ಸಾಧ್ಯವಾಗದೇ ಇಳುವರಿ ಮೇಲೆ ಪರಿಣಾಮ ಬೀರಿತ್ತು. ಗೆಣಸಿನ ಬಳ್ಳಿ ಯನ್ನು ನಾಟಿ‌ ಮಾಡಿದ್ದು,ಬಳ್ಳಿಯೂತೋಟದ ಮಧ್ಯೆ 2-3ಅಡಿ ಎತ್ತರಕ್ಕೆ ಬೆಳೆದಿದೆ. ಕಡಿಮೆ ಪ್ರಮಾಣದಲ್ಲಿ ನೀರು ನೀಡಿದರೂ 10 ದಿನಗಳವರೆಗೆ ತೇವಾಂಶವಿರುತ್ತದೆ. ತಿಂಗಳಿಗೆ ಎರಡು ಮೂರು ಸಲ ನೀರು ಹಾಯಿಸುತ್ತೇವೆ.ಬೇಸಿಗೆ ಮುಗಿದ ಕೂಡಲೇ ಯಂತ್ರದ ಮೂಲಕ ಕಟಾವು ಮಾಡಿ ಅಲ್ಲಿಯೇ ಬಿಡುತ್ತೇವೆ ಎನ್ನುತ್ತಾರೆ ತೋಟದ ಮಾಲೀಕರು.

ಅರಣಾ.ಆರ್. ರೈತ ಮಹಿಳೆ ಯರಬಳ್ಳಿ

ಅಡಿಕೆ ತೋಟದಲ್ಲಿ ಓಡಾಡಿದರೆ ಮಣ್ಣು ಮೃದುವಾಗಿರುವ ಅನುಭವವಾಗುತ್ತದೆ. ಗೆಣಸುಗಳನ್ನು ನೆಲದಲ್ಲಿ ಬಿಡುವುದರಿಂದ ಇಲಿ, ಹೆಗ್ಗಣ ತಿನ್ನಲು ಹುಡುಕುವ ಸಮಯದಲ್ಲಿ ಇಡೀ ತೋಟದ ಮಣ್ಣನ್ನು ತಿರುವಿ ಹಾಕುತ್ತವೆ.ಶೂನ್ಯ ಖರ್ಚಿನಲ್ಲಿ ಉಳುಮೆ ಮಾಡಿದಂತೆ ಆಯಿತು ಎನ್ನುತ್ತಾರೆ.

 

ಸಿದ್ದರಾಜು.ಕೆ.

Advertisement

Udayavani is now on Telegram. Click here to join our channel and stay updated with the latest news.

Next