Advertisement

7 ರಾಜ್ಯಗಳಲ್ಲಿ ರೈತರ 10 ದಿನಗಳ ಪ್ರತಿಭಟನೆ; ಹಾಲು, ತರಕಾರಿಗೆ ತತ್ವಾರ

01:16 PM Jun 01, 2018 | Sharanya Alva |

ನವದೆಹಲಿ:ಮಧ್ಯಪ್ರದೇಶದ ಮಂದ್ ಸೌರ್ ನಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಗೋಲಿಬಾರ್ ನಡೆಸಿದ ಘಟನೆಗೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಶುಕ್ರವಾರದಿಂದ 8 ರಾಜ್ಯಗಳಲ್ಲಿ 10 ದಿನಗಳ ಮೆಗಾ ಪ್ರತಿಭಟನೆಗೆ ಚಾಲನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಹಾಲು, ತರಕಾರಿ ಸರಬರಾಜು ಸ್ಥಗಿತಗೊಂಡಿದೆ.

Advertisement

ಕಳೆದ ವರ್ಷ ಬೆಂಬಲ ಬೆಲೆಗೆ ಒತ್ತಾಯಿಸಿ ಮಧ್ಯಪ್ರದೇಶದ ಮಂದ್ ಸೌರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ನಡೆಸಿದ ಗೋಲಿಬಾರ್ ಗೆ ಆರು ಮಂದಿ ಸಾವನ್ನಪ್ಪಿದ್ದರು.

ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ್, ಉತ್ತರಪ್ರದೇಶ, ಕರ್ನಾಟಕ, ಹರ್ಯಾಣ ಹಾಗೂ ಚತ್ತೀಸ್ ಗಢ್ ಸೇರಿದಂತೆ ಎಂಟು ರಾಜ್ಯಗಳಲ್ಲಿ ರೈತ ಸಂಘಟನೆಗಳು ಹತ್ತು ದಿನಗಳ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಈ ಬಾರಿ ರೈತರು ಬೀದಿಗಿಳಿಯುವುದಿಲ್ಲ, ಅದರ ಬದಲಾಗಿ ನಾವು ರಾಜ್ಯದ ಮಾರುಕಟ್ಟೆಗೆ ಹಾಲು ಮತ್ತು ತರಕಾರಿಗಳನ್ನು ಸರಬರಾಜು ಮಾಡದೆ ಪ್ರತಿಭಟನೆ ನಡೆಸುತ್ತಿದ್ದೇವೆ. ಒಂದು ವೇಳೆ ನಗರವಾಸಿಗಳಿಗೆ ತರಕಾರಿ ಬೇಕಾದಲ್ಲಿ ನೇರವಾಗಿ ಹಳ್ಳಿಗೆ ಬಂದು ಖರೀದಿಸಲಿ ಎಂದು ರೈತ ಸಂಘಟನೆಯ ಮುಖಂಡರು ನ್ಯೂಸ್ 18 ಜೊತೆ ಮಾತನಾಡುತ್ತ ತಿಳಿಸಿದ್ದಾರೆ.

ಈ ರಾಜ್ಯಗಳು ದೆಹಲಿ, ಮುಂಬೈ, ಬೆಂಗಳೂರು ಹಾಗೂ ಜೈಪುರ್ ನಂತಹ ಮಹಾನಗರಿಗಳಿಗೆ ಹಾಲು ಮತ್ತು ತರಕಾರಿ ಸರಬರಾಜು ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದವು. ಆದರೆ ಇದೀಗ ರೈತರ ಪ್ರತಿಭಟನೆಯಿಂದ ಗ್ರಾಹಕರು, ಮಹಾನಗರಗಳು ಇಕ್ಕಟ್ಟಿಗೆ ಸಿಲುಕುವಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next