ಪಣಜಿ : ಗೋವಾ ವಿಧಾನಸಭೆಯ ಮಾಜಿ ಸಭಾಪತಿ ಹಾಗೂ ಗೋವಾದ ಮಾಜಿ ಮಂತ್ರಿ ರಾಜೇಂದ್ರ ಅರ್ಲೇಕರ್ ರವರು ಹಿಮಾಚಲಪ್ರದೇಶದ ರಾಜ್ಯಪಾಲರಾಗಿ ನಿಯುಕ್ತಿಯಾಗಿದ್ದು, ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದಿಸಿರುವುದಾಗಿ ಅರ್ಲೇಕರ್ ತಿಳಿಸಿದ್ದಾರೆ.
ಇದನ್ನೂ ಓದಿ : ಪಶ್ಚಿಮ ಬಂಗಾಳ: ವಿಷಯ ಪ್ರಸ್ತಾಪಕ್ಕೆ ಅವಕಾಶವಿಲ್ಲದ ಮೇಲೆ ನಾವ್ಯಾಕೆ ಅಲ್ಲಿರಬೇಕು.?: ಅಧಿಕಾರಿ
ರಾಜೇಂದ್ರ ಅರ್ಲೇಕರ್ ರವರು ಮೂಲತಃ ಸಂಘ ಪರಿವಾರದವರಾಗಿದ್ದಾರೆ. ಅರ್ಕೇಕರ್ ರವರು ವಾಸ್ಕೊ ಮತ್ತು ಪೆಡ್ನೆ ಮತಕ್ಷೇತ್ರದಿಂದ ಚುನಾಯಿತರಾಗಿ ಗೋವಾ ವಿಧಾನಸಭೆ ಪ್ರವೇಶಿಸಿದ್ದರು. ಗೋವಾ ವಿಧಾನಸಭೆಯ ಸಭಾಪತಿಗಳಾಗಿ ಮತ್ತು ಪಂಚಾಯತ ಮಂತ್ರಿಯಾಗಿಯೂ ಕೆಲಸ ನಿರ್ವಹಿಸಿದ್ದಾರೆ.
ಗೋವಾದ ಮಾಜಿ ಸಭಾಪತಿ ರಾಜೇಂದ್ರ ಅರ್ಲೇಕರ್ ರವರು ಹಿಮಾಚಲಪ್ರದೇಶದ ಸಭಾಪತಿಗಳಾಗಿ ನಿಯುಕ್ತಿಗೊಂಡಿರುವುದಕ್ಕೆ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಅಭಿನಂದನೆ ಸಲ್ಲಿಸಿದ್ದು, ಇಂತಹ ದೊಡ್ಡ ಹುದ್ದೆಗೆ ಆಯ್ಕೆಯಾಗಿರುವ ಗೋವಾದ ಮೊದಲ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ : ಬಸವ ಅಂತರರಾಷ್ಟ್ರೀಯ ಮ್ಯೂಸಿಯಂ ನಿರ್ಮಾಣ ಚುರುಕುಗೊಳಿಸಲು ಮುಖ್ಯಮಂತ್ರಿ ಸೂಚನೆ