Advertisement

ಚೌಕಟ್ಟಿನಲ್ಲಿ ನಿರ್ಮಿಸದ ಕೃಷಿ ಹೊಂಡಗಳು

06:02 PM Apr 13, 2018 | Team Udayavani |

ವಡಗೇರಾ: ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ರಾಜ್ಯ ಸರಕಾರ ರೈತರ ಜಮೀನುಗಳಲ್ಲಿ ಕೃಷಿ ಹೊಂಡ ನಿರ್ಮಿಸುವ ಯೋಜನೆ ಜಾರಿಗೆ ತಂದಿದೆ. ಆದರೆ ರೈತರ ನಿರಾಸಕ್ತಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೃಷಿ ಹೊಂಡ ನಿರ್ಮಾಣ ಯೋಜನೆ ಹಳ್ಳ ಹಿಡದಿದೆ. ವಡಗೇರಾ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕೃಷಿ ಇಲಾಖೆ ವತಿಯಿಂದ ನಿರ್ಮಿಸಿರುವ ಬಹುತೇಕ ಕೃಷಿ ಹೊಂಡಗಳಲ್ಲಿ ನೋಡಲು ಕೂಡ ಒಂದು ಹನಿ ನೀರು ಸಂಗ್ರಹವಾಗಿಲ್ಲ. ಇನ್ನೂ ಬೆಳೆಗಳಿಗೆ ನೀರು ಬಳಕೆ ಮಾಡುವುದು ಕನಸಾಗಿಯೇ ಉಳಿದಿದೆ. ರಾಜ್ಯ ಸರಕಾರ ಈ ಯೋಜನೆಗೆ ಸಾಕಷ್ಟು ಹಣ ಮಿಸಲಿಟ್ಟರು ರೈತರಿಗೆ ಮಾತ್ರ ಯಾವುದೇ ಪ್ರಯೋಜನವಾಗಿಲ್ಲ. 

Advertisement

2016-17ನೇ ಸಾಲಿನಲ್ಲಿ 130 ಹಾಗೂ 2017-18ರಲ್ಲಿ 170 ಕೃಷಿ ಹೊಂಡಗಳು ಸೇರಿದಂತೆ ಒಟ್ಟು 300 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಆದರೆ ರೈತರ ಜಮೀನಿಗಳಲ್ಲಿ ನಿರ್ಮಿಸಿರುವ ಕೃಷಿ ಹೊಂಡಗಳು ಕೃಷಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸದ್ಬಳಕೆಗೆ ಬಾರದ ಸ್ಥಿತಿಯಲ್ಲಿವೆ.

ಹೊಂಡ ನಿರ್ಮಾಣದಲ್ಲಿ ಅಕ್ರಮ:
ಕೃಷಿ ಹೊಂಡ ನಿರ್ಮಾಣದಲ್ಲಿ ಸಂಪೂರ್ಣ ಅಕ್ರಮವಾಗಿದ್ದು, ಅಳತೆ ಪ್ರಮಾಣ ಪಾಲಿಸಿಲ್ಲ. ಪ್ಲಾಸ್ಟಿಕ್‌ ಹೊದಿಕೆ ಕಾಣುತ್ತಿಲ್ಲ. ಕಳಪೆ ಮಟ್ಟದ ಪೈಪ್‌ ಬಳಕೆ ಮಾಡಿ ಸರಕಾರದ ಲಕ್ಷಾಂತರ ರೂಪಾಯಿ ಲೂಟಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿವೆ. ಒಟ್ಟಾರೆ ಕೃಷಿ ಇಲಾಖೆ ವತಿಯಿಂದ ತಾಲೂಕಿನಲ್ಲಿ
ನಿರ್ಮಿಸಿರುವ ಕೃಷಿ ಹೊಂಡದಲ್ಲಿ ಸಾಕಷ್ಟು ಅಕ್ರಮ ನಡೆದಿದ್ದು, ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.

ಶೇಕಡಾ 50 ರಷ್ಟು ಕೃಷಿ ಹೊಂಡಗಳಲ್ಲಿ ನೀರು ಸಂಗ್ರಹವಾಗಿದೆ. ಇನ್ನೂ ಕೆಲವು ಕಡೆ ನೀರು ಸಂಗ್ರವಾಗಿಲ್ಲ. ಅನೇಕ ರೈತರು ನೀರನ್ನು ಬೆಳೆಗಳಿಗೆ ಬಳಕೆ ಮಾಡಿದ್ದಾರೆ.
 ಜೈರಾಮ ಚವ್ಹಾಣ, ಕೃಷಿ ಅಧಿಕಾರಿ 

ತಾಲೂಕಿನಲ್ಲಿ ನಿರ್ಮಿಸಿರುವ ಕೃಷಿ ಹೊಂಡದಲ್ಲಿ ಅಕ್ರಮ ನಡೆದಿದ್ದು, ಇಲಾಖೆ ಉನ್ನತ ಅಧಿಕಾರಿಗಳು ಇದರ ಸಮಗ್ರ ತನಿಖೆಯನ್ನು ಮಾಡಿ ತಪ್ಪಿತಸ್ಥ ಅಧಿ ಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು.
 ಶಂಕರಣ್ಣ ಸಾಹು ಕರಣಗಿ, ಪ್ರಗತಿಪರ ರೈತ

Advertisement

ಕಾಟಾಚಾರಕ್ಕೆ ಎಂಬಂತೆ ತಾಲೂಕಿನಲ್ಲಿ ಕೃಷಿ ಹೊಂಡಗಳನ್ನು ಕೃಷಿ ಇಲಾಖೆ ಅಧಿಕಾರಿಗಳು ನಿರ್ಮಿಸಿದ್ದಾರೆ. ಕೃಷಿ ಹೊಂಡಗಳಿಂದ ರೈತರ ಬೆಳೆಗಳಿಗೆ ಯಾವುದೇ ಲಾಭವಾಗಿಲ್ಲ.
 ನಿಂಗಣ್ಣ ಜಡಿ, ಜಿಲ್ಲಾ ಕಾರ್ಯದರ್ಶಿ ಹಸಿರು ಸೇನೆ

ನಾಮದೇವ ವಾಟ್ಕರ

Advertisement

Udayavani is now on Telegram. Click here to join our channel and stay updated with the latest news.

Next