Advertisement
ಉಭಯ ತಾಲೂಕಿನಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದ್ದು, ನಿಯಂತ್ರಣಕ್ಕೆ ತರುವ ಸಲುವಾಗಿ ಮೂರು ಹೆಣ್ಣಾನೆಗಳಿಗೆ ರೆಡಿಯೋ ಕಾಲರ್ ಅಳವಡಿಕೆ ಹಾಗೂ ಒಂದು ಪುಂಡಾನೆ ಹಿಡಿದು ಸ್ಥಳಾಂತರ ಮಾಡುವುದಕ್ಕೆ ಸರ್ಕಾರ ಅನುಮತಿ ನೀಡಿತ್ತು. ಅದರಂತೆ ಅರಣ್ಯ ಇಲಾಖೆ ಕಾರ್ಯಾ ಚರಣೆಗಾಗಿ ಮತ್ತಿಗೊಡು ಆನೆ ಶಿಬಿರದಿಂದ ಅಭಿಮನ್ಯು,ಗಣೇಶ್, ಗೋಪಾಲಕೃಷ್ಣ, ದುಬಾರೆ ಆನೆ ಶಿಬಿರದಿಂದ ಸುಗ್ರೀವ, ಧನಂಜಯ, ಕೃಷ್ಣ, ಸಾಕಾನೆಗಳನ್ನು ಬಳಸಿಕೊಂಡಿತ್ತು.
Related Articles
Advertisement
ನಂತರ 26 ರಂದು ಬೆಳಗ್ಗೆ ಎಂದಿನಂತೆ 6.30ಕ್ಕೆ ಪುಂಡಾನೆ ಗಾಗಿ ಹುಡುಕಾಟ ನಡೆಸಿ ಸಕಲೇಶಪುರ ತಾಲೂಕಿನ ಮತ್ತೂರು ಅರಣ್ಯ ಪ್ರದೇಶದಲ್ಲಿ ಯಶಸ್ವಿ ಕಾರ್ಯಚರಣೆ ನಡೆಸಿ ಪುಂಡನೆ ಸೆರೆ ಹಿಡಿದು ಮಹಾದೇಶ್ವರ ಬೆಟ್ಟದ ಅರಣ್ಯ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಯಿತು. 27 ರಂದು ಸಕಲೇಶಪುರ, ಬೇಲೂರು ತಾಲೂಕಿನ ಅಂಚಿನ ಸುಂಡೆಕೆರೆ ಗ್ರಾಮದ ಕಫಿ ತೋಟದಲ್ಲಿ ಒಂದು ಹೆಣ್ಣಾನೆಗೆ ರೆಡಿಯೋ ಕಾಲರ್ ಅಳವಡಿಸಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ವಿಜಯೋತ್ಸವ ಆಚರಿಸಿದರು.