ಕೊರಟಗೆರೆ : ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಬುಕ್ಕಪಟ್ಟಣ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸುಮಾರು ಆರು ವರ್ಷಗಳ ಕಾಲ ಜನಪರ ಕೆಲಸ ಮಾಡಿ ಜನ ಮನ್ನಣೆ ಗಳಿಸಿದ್ದ ಪಿಡಿಒ ಸುನೀಲ್ ಕುಮಾರ್ ರವರಿಗೆ ಬಿಳ್ಕೊಡುಗೆ ಸಮಾರಂಭ ಏರ್ಪಡಿಸಲಾಯಿತು.
ಕುಣಿಗಲ್ ತಾಲ್ಲೂಕಿಗೆ ವರ್ಗಾವಣೆ ಆಗಿರುವ ಪಿಡಿಓ ಸುನೀಲ್ ಕುಮಾರ್ ರವರಿಗೆ ಬುಕ್ಕಪಟ್ಟಣ ಗ್ರಾಮ ಪಂಚಾಯಿತಿಯ ಅಧ್ಯಕ್ಷರು- ಉಪಾದ್ಯಕ್ಷರು,ಸರ್ವ ಸದಸ್ಯರು, ಸಿಬ್ಬಂದಿಗಳು ಹಾಗೂ ತಾಲ್ಲೂಕು ಪಂಚಾಯಿತಿ ಪರವಾಗಿ ಸುನೀಲ್ ಕುಮಾರ್ ಗೆ ಬೀಳ್ಕೊಡುಗೆ ನೀಡಲಾಯಿತು.
ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಬುಕ್ಕಪಟ್ಟಣ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಇವರ ಕೊಡುಗೆ ಅಪಾರ.ಡಿಜಿಟಲ್ ಗ್ರಂಥಾಲಯ,ಹೈಟೆಕ್ ಅಂಗನವಾಡಿ ಕೇಂದ್ರ,ಗೋ-ಕಟ್ಟೆ ಅಭಿವೃದ್ಧಿ,ಹಲವು ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ,ಮೂಲ ಸೌಕರ್ಯ,ಶುದ್ಧ ಕುಡಿಯುವ ನೀರಿನ ಘಟಕ, ನರೇಗಾ ಯೋಜನೆ ಅಡಿ ನೂರಾರು ಅಭಿವೃದ್ಧಿ ಕೆಲಸ ಗಳನ್ನೂ ಮಾಡಿದ ಹೆಗ್ಗಳಿಕೆ ಇವರದ್ದಾಗಿದೆ ಎಂದು ಕೊಂಡಾಡಿದರು.
ಕಳೆದ ಒಂದು ವರ್ಷದಿಂದ ಹೆಚ್ಚುವರಿ ಹೊಣೆಗಾರಿಕೆ ವಹಿಸಿಕೊಂಡಿದ್ದ ಕುರಂಕೋಟೆ ಗ್ರಾಮ ಪಂಚಾಯಿತಿಯಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿ ಅಲ್ಲಿಯೂ ಕೂಡ ಜನರ ಮೆಚ್ಚುಗೆ ಪಡೆದ ಅಭಿವೃದ್ಧಿ ಅಧಿಕಾರಿ ಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾಪಂ ಇ ಓ ಡಾ.ದೊಡ್ಡ ಸಿದ್ದಯ್ಯ,ಸಹಾಯಕ ನಿರ್ದಶಕರಾದ ಕುಮಾರಸ್ವಾಮಿ,ವೈದ್ಯರಾದ ಹರ್ಷವರ್ಧನ್,ಆತ್ಮರಾಮ್, ಬುಕ್ಕಪಟ್ಟಣ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶಿವರಾಮಯ್ಯ,ಉಪಾಧ್ಯಕ್ಷೆ ಮಮತರಾಜು, ಕುರಂಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಸಿದ್ದರಾಜು,ಸರ್ವ ಸದಸ್ಯರು, ಸಿಬ್ಬಂದಿಗಳು,ಹಾಜರಿದ್ದರು.