Advertisement

Australia ಮೋಸದಾಟದ ಡೇವಿಡ್‌ ವಾರ್ನರ್‌ಗೆ ವಿದಾಯ ಪಂದ್ಯ!: ಮಿಚೆಲ್‌ ಜಾನ್ಸನ್‌ ಕಿಡಿ

11:29 PM Dec 04, 2023 | Team Udayavani |

ಸಿಡ್ನಿ: ಮೋಸದಾಟದಲ್ಲಿ ಭಾಗಿಯಾಗಿದ್ದ ಡೇವಿಡ್‌ ವಾರ್ನರ್‌ ಅವರಿಗೆ ವಿದಾಯ ಪಂದ್ಯವೊಂದನ್ನು ಆಯೋಜಿಸಲಾಗುತ್ತಿದೆ ಎಂಬ ಸುದ್ದಿ ತಿಳಿದು ಅದೇ ನಾಡಿನ ಮಾಜಿ ವೇಗಿ ಮಿಚೆಲ್‌ ಜಾನ್ಸನ್‌ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

“ಆಸ್ಟ್ರೇಲಿಯದ ಕ್ರಿಕೆಟ್‌ ಇತಿಹಾಸ ದಲ್ಲೇ ಅತೀ ದೊಡ್ಡ ಹಗರಣದಲ್ಲಿ ಭಾಗಿ ಯಾದ ಕುಖ್ಯಾತಿ ಡೇವಿಡ್‌ ವಾರ್ನರ್‌ ಅವರದು. ಅಲ್ಲದೇ ಟೆಸ್ಟ್‌ ಮಾದರಿಯಲ್ಲಿ ಅವರು ರನ್‌ ಬರಗಾಲದಲ್ಲಿದ್ದಾರೆ. ಇಂಥವರಿಗೆ ವಿದಾಯ ಪಂದ್ಯದ ಅಗತ್ಯವಿತ್ತೇ?’ ಎಂಬುದಾಗಿ ಜಾನ್ಸನ್‌ ನೇರ ಪ್ರಶ್ನೆ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯ ವೇಳೆ “ಸ್ಯಾಂಡ್‌ಪೇಪರ್‌ ಗೇಟ್‌’ ಪ್ರಕರಣದಲ್ಲಿ ಸಿಕ್ಕಿಬಿದ್ದು ನಿಷೇಧ ಕ್ಕೊಳಗಾದವರಲ್ಲಿ ಡೇವಿಡ್‌ ವಾರ್ನರ್‌ ಕೂಡ ಒಬ್ಬರು. ಉಳಿದಿಬ್ಬರೆಂದರೆ ಕ್ಯಾಮರೂನ್‌ ಬಾನ್‌ಕ್ರಾಫ್ಟ್ ಮತ್ತು ಸ್ಟೀವನ್‌ ಸ್ಮಿತ್‌.

“ಈ ಪ್ರಕರಣದಲ್ಲಿ ವಾರ್ನರ್‌ ಒಬ್ಬರೇ ಇರಲಿಲ್ಲ. ಆದರೆ ಅವರು ಹಿರಿಯ ಆಟಗಾರನಾಗಿದ್ದರು. ತಂಡದ ನಾಯಕನೂ ಆಗಿದ್ದರು. ಇಂಥವರಿಗೂ ವಿದಾಯ ಪಂದ್ಯ ಏರ್ಪಡಿಸಲಾಗುತ್ತಿದೆ ಎಂಬುದೇ ವಿಪರ್ಯಾಸ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next