Advertisement

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

11:50 AM Dec 27, 2024 | Team Udayavani |

ಡಾ.ಮನಮೇೂಹನ ಸಿಂಗ್‌ ಇದುವರೆಗೆ ಈ ದೇಶ ಕಂಡ ಪ್ರಧಾನಿಗಳ ಸಾಧನೆ ವ್ಯಕ್ತಿತ್ವ ಗುರುತಿಸುವಾಗ ಅರ್ಥ ಶಾಸ್ತ್ರಜ್ಞ ಪ್ರಧಾನಿ ಅನ್ನುವ ಖ್ಯಾತಿ ಪಡೆದ ಏಕೈಕ ಪ್ರಧಾನಿ ಅಂದರೆ ಅದು ನಮ್ಮನ್ನು ಅಗಲಿದ ಡಾ.ಮನಮೇೂಹನ ಸಿಂಗ್‌. ಮಾತ್ರವಲ್ಲ ರಾಜಕೀಯದಿಂದ ಬಲುದೂರವಿದ್ದು ಬರೇ ತಮ್ಮ ಶೈಕ್ಷಣಿಕ ಆರ್ಹ ತೆಯ ಮೂಲಕ ಪ್ರಧಾನಿ ಹುದ್ದೆ ಪಡೆದ ಕೀರ್ತಿ ಡಾ.ಮನಮೇೂಹನ ಸಿಂಗ್‌ರಿಗೆ ಸಲ್ಲುತ್ತದೆ.

Advertisement

ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಿಎಚ್‌ಡಿ ಪಡೆದು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಇವರು ಅನಂತರದಲ್ಲಿ ಆಥಿ೯ಕ ತಜ್ಞರಾಗಿ ಹತ್ತು ಹಲವು ಹುದ್ದೆಗಳನ್ನು ಅಲಂಕರಿಸಿದ ಅನುಭವ ಇವರಿಗಿದೆ. ಸರ್ಕಾರಕ್ಕೆ ಆರ್ಥಿಕ ಸಲಹೆಗಾರರಾಗಿ ಯುಜಿಸಿ ಅಧ್ಯಕ್ಷರಾಗಿ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಸೇವೆ ಸಲ್ಲಿಸಿದ ಕೀರ್ತಿಗೆ ಭಾಜನರಾಗಿದ್ದಾರೆ.

ಇವರು ರಾಜಕೀಯವಾಗಿ ಬೆಳೆದು ಬಂದಿದ್ದೇ ಒಂದು ಆಶ್ಚರ್ಯ ಪ್ರಸಂಗ. ಲೇೂಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದಾಗ ಮತದಾರರು ಇವರ ಶೈಕ್ಷಣಿಕ ಆಹ೯ತೆಯನ್ನು ಗುರುತಿಸುವಲ್ಲಿ ಸೇೂತು ಬಿಟ್ಟರು.ಆದರೆ ಇವರ ಅನುಪಮವಾದ ಅನುಭವ ಜ್ಞಾನ ಈ ದೇಶದ ಆರ್ಥಿಕ ಸುಧಾರಣೆಗೆ ಅನಿವಾರ್ಯತೆ ಇದೆ ಎಂದಾಗ ಇವರನ್ನು ರಾಜ್ಯ ಸಭೆಯ ಮೂಲಕ ಆರಿಸಿ ವಿತ್ತ ಸಚಿವರಾಗಿ ನೇಮಿಸಿದ ಹೆಗ್ಗಳಿಕೆ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರಿಗೆ ಸಲ್ಲುತ್ತದೆ.

ಇವರ ಅಂದಿನ ಆರ್ಥಿಕ ಸುಧಾರಣೆಯ ಹೆಜ್ಜೆಗಳು ಭಾರತವನ್ನು ವಿಶ್ವದಲ್ಲಿ ತಲೆ ಎತ್ತಿ ನಡೆಯುವಂತೆ ಮಾಡಿದಂತೂ ಸತ್ಯ .ಅದು ಕೂಡಾ ಜಾಗತೀಕರಣದ ಹಿನ್ನೆಲೆಯಲ್ಲಿ ಬಾರಿ ಮಹತ್ವದ ನಿರ್ಧಾರವೆಂದೇ ವ್ಯಾಖ್ಯಾನಿಸಲಾಗಿದೆ.

Advertisement

2004 ರಿಂದ 2014ರ ತನಕ ಪ್ರಧಾನಿಗಳಾಗಿ ಅತ್ಯಂತ ಪ್ರಾಮಾಣಿಕತೆಯಿಂದ ಅರ್ಥ ಸುಧಾರಣೆ ಮತ್ತು ಅಭಿವೃದ್ಧಿಯ ಪಥದಲ್ಲಿ ರಾಷ್ಟ್ರವನ್ನು ಮುನ್ನಡಿಸಿದ ಕೀರ್ತಿ ಡಾ.ಮನಮೇೂಹನ್ ಸಿಂಗ್‌ ರಿಗೆ ಸಲ್ಲುತ್ತದೆ. ಸಮಿಶ್ರ ಸರ್ಕಾರವನ್ನು ಅತ್ಯಂತ ಸುಗಮ ರೀತಿಯಲ್ಲಿ ಮುನ್ನಡಿಸಲು ಇವರಿಗೆ ಸಾಧ್ಯವಾಗಿದೆ ಅದು ಮನಮೇೂಹನ ಸಿಂಗ್‌ ಕಡಿಮೆ ಮಾತು ಹಾಗೂ ಪ್ರಚಾರದಿಂದ ದೂರವಿದ್ದು ಪ್ರಾಮಾಣಿಕ ರಾಜಕೀಯ ನಡೆಯಿಂದ ಸಾಧ್ಯವಾಯಿತು ಅನ್ನಿಸುತ್ತದೆ.

ಈ ಎಲ್ಲಾ ಶ್ರೀಮಂತ ಗುಣ ಮತ್ತು ಧೀಮಂತ ವ್ಯಕ್ತಿತ್ವದಿಂದ ಡಾ.ಮನಮೇೂಹನ್ ಸಿಂಗ್‌ರ ಪ್ರಾಮಾಣಿಕತೆ ಮತ್ತು ಆರ್ಥಿಕ ಚಿಂತನೆಗಳು ಸದಾ ಭಾರತದ ರಾಜಕೀಯ ಮತ್ತು ಆರ್ಥಿಕ ಇತಿಹಾಸದಲ್ಲಿ ಚಿರಾಯುವಾಗಿ ನೆನಪಿನಲ್ಲಿ ಉಳಿಯುತ್ತದೆ ಅನ್ನುವುದು ನಾವೆಲ್ಲರೂ ಆಗಲಿದ ಮಹಾನ್ ಚೇತನಕ್ಕೆ ಸಲ್ಲಿಸುವ ನುಡಿ ನಮನಗಳು.

ಪ್ರೊ.ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next