Advertisement

ಭಾರತ ಕ್ರಿಕೆಟಿಗರ ಔತಣಕೂಟದಲ್ಲಿ ಅನುಷ್ಕಾ: ವಿವಾದ

06:45 AM Aug 09, 2018 | Team Udayavani |

ಲಂಡನ್‌: ಪತ್ನಿ ಅನುಷ್ಕಾ ಶರ್ಮರನ್ನು ಹೋದಲ್ಲೆಲ್ಲ ಜೊತೆಗೊಯ್ಯುವ ಚಾಳಿಯಿಂದ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಆಗಾಗ ಟೀಕೆಗೊಳಗಾಗುತ್ತಾರೆ.  ಇದೀಗ ಅನುಷ್ಕಾ ಮತ್ತೂಂದು ವಿವಾದಕ್ಕೆ ಸಿಲುಕಿದ್ದಾರೆ. 

Advertisement

ಲಂಡನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯ ಕ್ರಿಕೆಟ್‌ ತಂಡಕ್ಕೆ ಮಂಗಳವಾರ ಔತಣಕೂಟ ನೀಡಿದೆ. ಇದು ಭಾರತೀಯ ತಂಡಕ್ಕೆ ಮಾತ್ರ ನೀಡುವ ಔತಣ. ಆದರೆ ಇದರಲ್ಲಿ ಅನುಷ್ಕಾ ಕೂಡ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬಿಸಿಸಿಐ ಪ್ರಕಟಿಸಿದ ಸಾಮೂಹಿಕ ಚಿತ್ರದಲ್ಲೂ ಅವರಿದ್ದರು. ಇದು ಅಭಿಮಾನಿಗಳನ್ನು ಕೆರಳಿಸಿದೆ. ಅನುಷ್ಕಾ ಭಾರತ ಕ್ರಿಕೆಟ್‌ ತಂಡದ ಪರ ಆಡ್ತಾರಾ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. 

ತಂಡದ ಉಳಿದ ಯಾವುದೇ ಆಟಗಾರನ ಪತ್ನಿಯೂ ಇಲ್ಲದಿರುವಾಗ ಅನುಷ್ಕಾಗೊಂದು ಮಾತ್ರ ಅವಕಾಶ ಸಿಕ್ಕಿದ್ದು ಹೇಗೆ ಎನ್ನುವುದು ಇಲ್ಲಿನ ಪ್ರಶ್ನೆ. ಈ ರೀತಿಯ ಕೂಟದಲ್ಲಿ ಕ್ರಿಕೆಟೇತರರಿಗೆ ಅವಕಾಶವೂ ಇರುವುದಿಲ್ಲ. ಆ ಶಿಷ್ಟಾಚಾರ ಮೀರಿದ ಬಗ್ಗೆಯೂ ಪ್ರಶ್ನೆಗಳೆದ್ದಿವೆ.

Advertisement

Udayavani is now on Telegram. Click here to join our channel and stay updated with the latest news.

Next