Advertisement

ಪುನೀತ್‌ ಗೆಟಪ್‌ ಬಗ್ಗೆ ಅಭಿಮಾನಿಗಳ ಚರ್ಚೆ

10:24 AM Apr 27, 2020 | Suhan S |

ಲಾಕ್‌ ಡೌನ್‌ನಲ್ಲಿ ನಟ ಪುನೀತ್‌ ರಾಜ್ ಕುಮಾರ್‌ ಎಲ್ಲಾ ನಟ-ನಟಿಯರು ಮನೆಯಲ್ಲಿದ್ದಾರೆ. ಕೆಲವರು ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ. ಇದರಲ್ಲಿ ನಟ ಪುನೀತ್‌ ರಾಜ್ ಕುಮಾರ್‌ ಕೂಡಾ ಒಬ್ಬರು. ಮನೆಯಲ್ಲೇ ಇರುವ ಪುನೀತ್‌ ರಾಜ್‌ಕುಮಾರ್‌ ಸದ್ಯ ಗಡ್ಡ ಬಿಟ್ಟಿದ್ದಾರೆ. ಸಾಮಾನ್ಯವಾಗಿ ಕ್ಲೀನ್‌ ಶೇವ್‌ ಮಾಡಿರುವ ಪುನೀತ್‌ ಅವರ ಈ ಗಡ್ಡ ಬಿಟ್ಟಿರುವ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದರಲ್ಲೂ ಪುನೀತ್‌ ಅವರ ಅಭಿಮಾನಿಗಳು ಈ ಫೋಟೋ ಬಗ್ಗೆ ತುಂಬಾ ಚರ್ಚೆ ಮಾಡಿ, ಕಾಮೆಂಟ್‌ ಹಾಕುತ್ತಿದ್ದಾರೆ. ಮುಖ್ಯವಾಗಿ ಕೆಲವು ಅಭಿಮಾನಿಗಳು, ನಿಮಗೆ ಗಡ್ಡ ಸೂಟ್‌ ಆಗೋದಿಲ್ಲ. ನೀವು ಶೇವ್‌ ಮಾಡಿದರೇನೇ ಚೆಂದ ಎನ್ನುತ್ತಿದ್ದಾರೆ.

Advertisement

ಆದರೆ, ಇನ್ನೊಂದಿಷ್ಟ ಅಭಿಮಾನಿಗಳು ನೀವು ಹೇಗಿದ್ದರೂ ನಮಗೆ ಇಷ್ಟ. ಏಕೆಂದರೆ ನೀವು ನಮ್ಮ ಪ್ರೀತಿಯ ಪವರ್‌ ಸ್ಟಾರ್‌ ಎಂದಿದ್ದಾರೆ. ಸಾಮಾನ್ಯವಾಗಿ ಹೀರೋಗಳು ತಮ್ಮ ಸಿನಿಮಾದಲ್ಲಾದರೂ ಗಡ್ಡ ಬಿಡುತ್ತಾರೆ. ಆದರೆ ಪುನೀತ್‌ ಬಹುತೇಕ ಸಿನಿಮಾಗಳಲ್ಲಿ ಕ್ಲೀನ್‌ ಶೇವ್‌ ಮಾಡಿಯೇ ಅಭಿಮಾನಿಗಳಿಗೆ ದರ್ಶನ ನೀಡುತ್ತಾರೆ. ಈ ಕಾರಣದಿಂದಾಗಿಯೇ ಅವರಿಗೆ ಫ್ಯಾಮಿಲಿ ಆಡಿಯನ್ಸ್‌ ಸ್ವಲ್ಪ ಹೆಚ್ಚು. ಆದರೆ, ಈಗ ಲಾಕೌ ಡೌನಲ್ಲಿ ಪುನೀತ್‌ ಗಡ್ಡ ಬಿಟ್ಟಿರೋ ಬಗ್ಗೆ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ.

ಇನ್ನು, ಇತ್ತೀಚೆಗೆ ಪುನೀತ್‌ ರಾಜಕುಮಾರ್‌ ದೈಹಿಕ ಕಸರತ್ತಿನ ವಿಡಿಯೋವನ್ನು ಶೇರ್‌ ಮಾಡಿಕೊಂಡಿರುವ ನಿರ್ದೇಶಕ ಸಂತೋಷ್‌ ಅನಂದ ರಾಮ್‌, ಪವರ್‌ ಸ್ಟಾರ್‌ ಎಂಬ ಬಿರುದು ಶಿವಣ್ಣ ಕೊಟ್ಟಿದ್ದಕ್ಕೂ, ಅಭಿಮಾನಿಗಳು ಎದೆಯಲ್ಲಿ ಇಟ್ಟುಕೊಂಡು ಹಚ್ಚೆ ಹಾಕಿಸಿಕೊಂಡಿದ್ದಕ್ಕೂ, ಕರ್ನಾಟಕ ಜನತೆಯು ಪ್ರೀತಿಯಿಂದ ಕರೆಯುವುದಕ್ಕೂ ಸಾರ್ಥಕವಾಗಿದೆ. ಪವರ್‌ ಸ್ಟಾರ್‌ 45ರ ವಯಸ್ಸಿನಲ್ಲೂ ಕಾಲೇಜು ಯುವಕನ ಪಾತ್ರ ಮಾಡುವಷ್ಟು ಫಿಟ್‌ ಆಗಿ ಇದ್ದಾರೆ ಎಂದು ಬರೆದುಕೊಂಡಿದ್ದಾರೆ.

ಕೇವಲ 17 ಸೆಕೆಂಡ್‌ ಇರುವ ಈ ವಿಡಿಯೋದಲ್ಲಿ ಪುನೀತ್‌ ರಾಜಕುಮಾರ್‌ ಜಿಗಿದು ಬಂದು ಲೆಗ್‌ ಪಂಚ್‌ ಜೊತೆಗೆ ಬ್ಯಾಕ್‌ ಫ್ಲಿಪ್‌ ಹೊಡೆದಿದ್ದಾರೆ. ಈಗ ವಿಡಿಯೋ ಟ್ವಿಟ್ಟರ್‌ ನಲ್ಲಿ ಟ್ರೆಂಡ್‌ ಆಗುತ್ತಿದೆ. ಈ ವಿಡಿಯೋವನ್ನು ಪುನೀತ್‌ ರಾಜಕುಮಾರ್‌ ಕೂಡ ತಮ್ಮ ಇನ್‌ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಸ್ಟೇ ಹೋಂ, ಸ್ಟೇ ಸೇಫ್, ಸ್ಟೇ ಫಿಟ್‌ ಎಂದು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಪವರ್‌ ಸ್ಟಾರ್‌ ಫಿಟ್ನೆಸ್‌ ನೋಡಿದ ಅವರ ಅಭಿಮಾನಿಗಳು ಪವರ್‌ ಸ್ಟಾರ್‌ ಎಂಬ ಬಿರುದು ಇವರಿಗೆ ಮಾತ್ರ ಸೂಟ್‌ ಆಗುತ್ತದೆ ಎಂದು ಕಾಮೆಂಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next