Advertisement

ನ್ಯಾಯಕ್ಕಾಗಿ ಪಿಎಸ್‌ಐ ಕಾಲಿಗೆ ಬಿದ್ದ ನೊಂದ ಮಹಿಳೆಯರು

06:00 AM Dec 02, 2018 | Team Udayavani |

ಕೊಪ್ಪಳ: ತಾಲೂಕಿನ ಹಟ್ಟಿ ಗ್ರಾಮದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಂದ ಮಹಿಳೆಯರು ಶನಿವಾರ ಎಸ್‌ಪಿ ಕಚೇರಿಗೆ ಆಗಮಿಸಿದ್ದು, ಅಳವಂಡಿ ಪಿಎಸ್‌ಐ ರಾಮಪ್ಪ ಅವರ ಕಾಲಿಗೆ ಬಿದ್ದು ನ್ಯಾಯಕ್ಕಾಗಿ ಅಲವತ್ತುಕೊಂಡ ಘಟನೆ ನಡೆದಿದೆ.

Advertisement

ಎರಡು ದಿನಗಳ ಹಿಂದೆ ತಾಲೂಕಿನ ಹಟ್ಟಿ ಗ್ರಾಮದಲ್ಲಿ ಕುರುಬ ಸಮಾಜದಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಅದೇ ಕೋಮಿನಲ್ಲಿ ಮಾತಿಗೆ ಮಾತು ಶುರುವಾಗಿತ್ತು. ಅಳವಂಡಿ ಜಿ.ಪಂ.ಕ್ಷೇತ್ರದ ರಾಜಕಾರಣದ ಹಿಡಿತ ಹೊಂದಿರುವ ಭರಮಪ್ಪ ನಗರ ಹಾಗೂ ಪಾಂಡು ಬೋರಿನ್‌ ಎಂಬುವರ ಬೆಂಬಲಿಗರ ನಡುವೆ ಜಗಳ ಶುರುವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೈ-ಕೈ ಮಿಲಾಯಿಸುವ ಹಂತಕ್ಕೂ ತಲುಪಿ ಮಾರಾಮಾರಿಯೇ ನಡೆದಿತ್ತು. ಬಳಿಕ, ಹನುಮಪ್ಪ ತಳಕಲ್‌ ಎಂಬುವರ ಬೆಂಬಲಿಗರು ಹಾಗೂ ತೋಟಪ್ಪ ಸಿಂಟ್‌Å ಎಂಬುವರು ಅಳವಂಡಿ ಪೊಲೀಸ್‌ ಠಾಣೆಯಲ್ಲಿ ದೂರು-ಪ್ರತಿ ದೂರು ನೀಡಿದ್ದರು. ಒಟ್ಟು 29 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಈ ಮಧ್ಯೆ, ಪೊಲೀಸರ ನಡೆ ಪ್ರಶ್ನಿಸಿದ ಮಹಿಳೆಯರು ಭರಮಪ್ಪ ನಗರ ಅವರ ಪರವಾಗಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ತಮ್ಮ ಮನೆಯ ಮುಖ್ಯಸ್ಥರನ್ನು ಏಕಾಏಕಿ ಜೈಲಿಗೆ ಕಳಿಸಿದ್ದು, ತಮ್ಮ ಮೇಲೆ ದಬ್ಟಾಳಿಕೆ ಮಾಡಲಾಗುತ್ತಿದೆ. ಪೊಲೀಸರಿಗೆ ದೂರು ನೀಡಲು ತೆರಳಿದರೂ ಸ್ಪಂದಿಸುತ್ತಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮವರನ್ನು ಜೈಲಿಗೆ ಕಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಶನಿವಾರ ಎಸ್‌ಪಿ ಕಚೇರಿಗೆ ಆಗಮಿಸಿದ ಮಹಿಳೆಯರು ಸ್ಥಳದಲ್ಲಿದ್ದ ಪಿಎಸ್‌ಐ ರಾಮಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ, ನ್ಯಾಯಕ್ಕಾಗಿ ಮಹಿಳೆಯೋರ್ವಳು ಎಸ್ಪಿ ಅವರ ಕಾಲಿಗೆ ಬಿದ್ದ ಪ್ರಸಂಗವೂ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next