Advertisement

ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ: ಬಾಲಿವುಡ್ ಕಿರುತೆರೆ ಜನಪ್ರಿಯ ನಟನ ಬಂಧನ

01:10 PM Jun 05, 2021 | Team Udayavani |

ಮುಂಬಯಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಾಲಿವುಡ್ ಕಿರುತೆರೆಯ ಜನಪ್ರಿಯ ನಟ ಪರ್ಲ್ ವಿ ಪುರಿಯನ್ನು ಮುಂಬಯಿ ಪೊಲೀಸರು ಬಂಧಿಸಿರುವುದಾಗಿ ವರದಿ ತಿಳಿಸಿದೆ. ಈ ಸುದ್ದಿ ಪುರಿ ಅಭಿಮಾನಿಗಳು ಮತ್ತು ಟಿವಿ ಸಹೋದ್ಯೋಗಿಗಳಲ್ಲಿ ಅಪನಂಬಿಕೆ, ದಿಗಿಲು ಮೂಡಿಸಿರುವುದಾಗಿ ವರದಿ ವಿವರಿಸಿದೆ.

Advertisement

ಇದನ್ನೂ ಓದಿ:ಅಹಮದಾಬಾದ್ ನಲ್ಲಿ ಕೊಡಗಿನ ಯುವಕ ಆತ್ಮಹತ್ಯೆ : ಪೈಲೆಟ್ ಆಗಬೇಕೆನ್ನುವ ಕನಸು ನನಸಾಗಲೇ ಇಲ್ಲ

ವರದಿಯ ಪ್ರಕಾರ, ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ನಟ ಪರ್ಲ್ ವಿ ಪುರಿ ವಿರುದ್ಧ ಐಪಿಸಿ ಸೆಕ್ಷನ್ 376 (ರೇಪ್) ಹಾಗೂ 2012ರ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ವಶಕ್ಕೆ ಪಡೆಯಲಾಗಿದೆ ಎಂದು ಮೀರಾ ಭಾಯಂದರ್ ವಾಸೈ ವಿರಾರ್ ವಲಯದ ಡಿಜಿಪಿ ಸಂಜಯ್ ಪಾಟೀಲ್ ತಿಳಿಸಿದ್ದಾರೆ.

ಟಿವಿ ಸೀರಿಯಲ್ ನಲ್ಲಿ ಕೆಲಸ ಕೊಡಿಸಲು ತನ್ನೊಂದಿಗೆ ಲೈಂಗಿಕ ಸಂಪರ್ಕ ನಡೆಸಬೇಕು ಎಂದು ಒತ್ತಾಯಿಸಿ ಅತ್ಯಾಚಾರ ಎಸಗಿರುವುದಾಗಿ ಅಪ್ರಾಪ್ತ ಬಾಲಕಿ ನಟ ಪರ್ಲ್ ಪುರಿ ವಿರುದ್ಧ ದೂರು ನೀಡಿರುವುದಾಗಿ ವಿವರಿಸಿದ್ದಾರೆ.

ಏಕ್ತಾ ಕಪೂರ್ ನಿರ್ಮಾಣದ ಹಿಂದಿಯ ನಾಗಿನ್ 3 ಮತ್ತು ಬೆಪನಾ ಪ್ಯಾರ್ ಧಾರವಾಹಿ ಪರ್ಲ್ ಪುರಿಗೆ ಸ್ಟಾರ್ ಗಿರಿ ತಂದು ಕೊಟ್ಟಿತ್ತು. 2013ರಲ್ಲಿ ತೆರೆಕಂಡಿದ್ದ ಟಿವಿ ಶೋ ದಿಲ್ ಕಿ ನಜರ್ ಸೇ ಖೂಬ್ ಸೂರತ್ ಧಾರವಾಹಿಯಲ್ಲಿ ಪರ್ಲ್ ಪುರಿ ನಟಿಸುವ ಮೂಲಕ ಕಿರುತೆರೆ ಪ್ರವೇಶಿಸಿದ್ದರು. ನಂತರ ಹಲವಾರು ಸೀರಿಯಲ್ ಗಳಲ್ಲಿ ನಟಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next