Advertisement

ಜುಲೈ 27, 28 ರಂದು ಭಟ್ಕಳದಲ್ಲಿ ಪ್ರಸಿದ್ಧ ಮಾರಿ ಜಾತ್ರೆ ; ಪೂರ್ವಭಾವಿ ಸಭೆ

09:17 PM Jul 22, 2022 | Team Udayavani |

ಭಟ್ಕಳ: ನಗರದಲ್ಲಿ ನಡೆಯುವ ಎರಡು ದಿನಗಳ ಪ್ರಸಿದ್ಧ ಮಾರಿ ಜಾತ್ರೆಯ ಪ್ರಯುಕ್ತ ಪೂರ್ವಭಾವಿಯಾಗಿ ಉಪವಿಭಾಗಾಧಿಕಾರಿ ಮಮತಾದೇವಿ ಜಿ.ಎಸ್. ಅವರ ಅಧ್ಯಕ್ಷತೆಯಲ್ಲಿ ತಾಲೂಕಾ ಆಡಳಿತ ಸೌಧದಲ್ಲಿ ಸಭೆ ನಡೆಯಿತು.

Advertisement

ಜುಲೈ 27 ಹಾಗೂ 28 ರಂದು ಜಾತ್ರೆ ನಡೆಯಲಿದ್ದು ಜಾತ್ರೆಯು ಶಾಂತಿಯುತವಾಗಿ ನಡೆಯಲು ಎಲ್ಲರ ಸಹಕಾರ ಆಗತ್ಯ. ಪ್ರತಿ ವರ್ಷದಂತೆ ಎಲ್ಲಾ ಧಾರ್ಮಿಕ ವಿಧಿವಿಧಾನಗಳ ಮೂಲಕ ಹಬ್ಬವನ್ನು ಆಚರಿಸಬೇಕಾಗಿದ್ದು, ಯಾವುದೇ ರೀತಿಯಿಂದ ತೊಂದರೆಯಾಗದಂತೆ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.

ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ಪರಮೇಶ್ವರ ನಾಯ್ಕ ಮಾತನಾಡಿ ಮಾರಿ ಜಾತ್ರೆಯ ಸಂದರ್ಭದಲ್ಲಿ ಹಲವರು ಕಡೆಗಳಲ್ಲಿ ಕಸ ಸಂಗ್ರಹವಾಗುತ್ತದೆ. ಪೌರ ಕಾರ್ಮಿಕರನ್ನು ನಿಯೋಜಿಸಿ ಸ್ವಚ್ಚತೆಯನ್ನು ಕಾಪಾಡಬೇಕು ಎಂದು ಕೋರಿದರು.

ಮಾಜಿ ಸೈನಿಕ ಶ್ರೀಕಾಂತ ನಾಯ್ಕ ಮಾತನಾಡಿ ಮಾರಿ ಜಾತ್ರೆಯ ಎರಡನೆಯ ದಿನ ವಿಸರ್ಜನೆಯ ಸಂದರ್ಭದಲ್ಲಿ ಜನರು ಕಡಲಿಗಿಳಿಯುವುದರಿಂದ ಈ ಹಿಂದೆ ಅನಾಹುತ ಸಂಭವಿಸಿದ ಉದಾಹರಣೆಯಿದೆ. ವಿಸರ್ಜನೆಯ ಸಂದರ್ಭದಲ್ಲಿ ಕರಾವಳಿ ಕಾವಲು ಪಡೆಯವರು ಸೂಕ್ತ ಬಂದೋಬಸ್ತ ಮಾಡುವುದರೊಂದಿಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

ನಾಮಧಾರಿ ಸಮಾಜ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ಮಾತನಾಡಿ ಮಾರಿ ವಿರ್ಸಜನೆ ತೆರಳುವ ಕರಿಕಲ್ ಮಾರ್ಗದಲ್ಲಿ ಗೀಡ ಬೆಳೆದು ಟೊಂಗೆಗಳು ರಸ್ತೆಗೆ ಚಾಚಿಕೊಂಡಿದ್ದು ಕಟಾವು ಮಾಡಬೇಕು ಎಂದರು.

Advertisement

ರಿಕ್ಷಾ ಚಾಲಕರ ಸಂಘದ ಮಾಜಿ ಅಧ್ಯಕ್ಷ ವೆಂಕಟೇಶ ನಾಯ್ಕ ಆಸರಕೇರಿ, ದೇವಸ್ಥಾನ ಸಮಿತಿ ಸದಸ್ಯ ಸುರೇಂದ್ರ ಭಟ್ಕಳ ಮಾತನಾಡಿದರು.
ತಹಶೀಲ್ದಾರ ಸುಮಂತ ಬಿ., ಪುರಸಭೆ ಮುಖ್ಯಾಧಿಕಾರಿ ಎಂ.ಕೆ.ಸುರೇಶ, ಜಾಲಿ ಪ.ಪಂ. ಮುಖ್ಯಾಧಿಕಾರಿ ರಾಮಚಂದ್ರ ವರ್ಣೆಕರ್, ಕೆ.ಇ.ಬಿ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಮಂಜುನಾಥ, ಶ್ರೀಪಾದ ಕಂಚುಗಾರ, ದಿನೇಶ ನಾಯ್ಕ, ಶಂಕರ ಶೆಟ್ಟಿ, ಗೋವಿಂದ ನಾಯ್ಕ, ಶ್ರೀಧರ ನಾಯ್ಕ ಆಸರಕೇರಿ, ದಿನೇಶ ನಾಯ್ಕ ಮುಂಡಳ್ಳಿ, ಶಾಂತಾರಾಮ ಭಟ್ಕಳ, ಸುಬ್ರಾಯ ದೇವಾಡಿಗ, ನಾರಾಯಣ ಖಾರ್ವಿ, ತಂಝೀA ಮುಖಂಡ ಅಷ್ಫಾಕ್ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next