Advertisement

Earthquake;ತೈವಾನ್ ಪೂರ್ವದಲ್ಲಿ 7.5 ತೀವ್ರತೆಯ ಭೂಕಂಪ: ಸುನಾಮಿ ಎಚ್ಚರಿಕೆ

07:56 AM Apr 03, 2024 | Team Udayavani |

ತೈಪೆ: ತೈವಾನ್‌ನ ಪೂರ್ವದಲ್ಲಿ ಬುಧವಾರ ಬೆಳಗ್ಗೆ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಇದು ದ್ವೀಪ ರಾಷ್ಟ್ರ, ದಕ್ಷಿಣ ಜಪಾನ್ ಮತ್ತು ಫಿಲಿಪೈನ್ಸ್‌ನ ಕೆಲವು ಭಾಗಗಳಿಗೆ ಸುನಾಮಿ ಎಚ್ಚರಿಕೆಗಳನ್ನು ನೀಡಲು ಪ್ರೇರೇಪಿಸಿತು.

Advertisement

ಭೂಕಂಪವು ಅಲ್ಲಿನ ಸ್ಥಳೀಯ ಸಮಯ 8 ಕ್ಕೆ ಸ್ವಲ್ಪ ಮೊದಲು ಸಂಭವಿಸಿದೆ, ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ತೈವಾನ್‌ನ ಹುವಾಲಿಯನ್ ಸಿಟಿಯಿಂದ ದಕ್ಷಿಣಕ್ಕೆ 18 ಕಿಲೋಮೀಟರ್, 34.8 ಕಿಮೀ ಆಳದಲ್ಲಿ ಕೇಂದ್ರಬಿಂದು ಇದೆ ಎಂದು ತಿಳಿಸಿದೆ.

ಜಪಾನ್‌ನ ಹವಾಮಾನ ಸಂಸ್ಥೆಯು ಮಿಯಾಕೊಜಿಮಾ ದ್ವೀಪ ಸೇರಿದಂತೆ ಈ ಪ್ರದೇಶದಲ್ಲಿನ ದೂರದ ಜಪಾನಿನ ದ್ವೀಪಗಳಿಗೆ ಮೂರು ಮೀಟರ್‌ಗಳಷ್ಟು (10 ಅಡಿ) ಎತ್ತರದ ಸುನಾಮಿ ಅಲೆಗಳ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.

ಕಟ್ಟಡಗಳು ಕುಸಿದಿರುವ ವಿಡಿಯೋ ಗಳು ಸಾಮಾಜಿಕ ತಾಣದಲ್ಲಿ ಕಂಡು ಬಂದಿದ್ದು ಸಾವು ನೋವಿನ ಬಗ್ಗೆ ಇನ್ನಷ್ಟೇ ವಿವರಗಳು ಲಭ್ಯವಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next