Advertisement
ಸರ್ಕಾರಿ ಕಲಾ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ನಾಡೋಜ ಡಾ.ಬರಗೂರು ಪ್ರತಿಷ್ಠಾನ ಕೊಡ ಮಾಡುವ 2023ನೇ ಸಾಲಿನ ನಾಡೋಜ ಬರಗೂರು ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು. ಇಲ್ಲಿನ ಸಂಸ್ಕೃತಿ, ಇಲ್ಲಿನ ಮಣ್ಣಿನ ಸೊಗಡಿನ ಎಂತೆಂತಹ ಕಥೆಗಳು ನಮ್ಮಲ್ಲಿವೆ. ಆದರೆ, ಆ ಕಥೆಗಳನ್ನು ನಾವು ನಮ್ಮ ಜನರಿಗೆ ತಲುಪಿಸುತ್ತಿಲ್ಲ. ನಾವು ಯಾವು ದೋ ಬೇರೆ ಭಾಷೆಯ ಮೊರೆ ಹೋಗಿ ನಮ್ಮ ಜನರ ದಾರಿ ತಪ್ಪಿಸುತ್ತಿವೆಯೇನೋ ಅನಿಸುತ್ತಿದೆ ಎಂದು ಹೇಳಿದರು. ಕೊನೆಗೆ ಯಾವ ನಟನೂ ಗೆಲ್ಲಲ್ಲ, ಗೆಲ್ಲೊದು ಕತೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕನ್ನಡದ ಕತೆಯನ್ನು ಕದ್ದು ಸಿನಿಮಾ ಮಾಡಲಾಗುತ್ತಿದೆ. ಬಾಹುಬಲಿ ಸಿನಿಮಾದ ಕತೆಯನ್ನು ರಾಜ್ ಕುಮಾರ್ ಅವರ ಸಿನಿಮಾದ ಕತೆಗಳಿಂದ ಕದ್ದು ಮಾಡಲಾಗಿದೆ. ಕನ್ನಡದ ಕತೆಗೆ, ಸಿನಿಮಾಗಳಿಗೆ ಬ್ರಷ್ ಹಿಡಿದು ಹೊಸ ಬಣ್ಣ ಬಳಿದು ಹೊಸ ಫ್ರೇಮಿನಲ್ಲಿ ಕೂರಿಸಿ ಸಿನಿಮಾ ಮಾಡುತ್ತಿದ್ದಾರೆ. ಜನ ಅದನ್ನೇ ಅದ್ಭುತ ಕತೆ ಎಂದು ಕೊಂಡಾಡುತ್ತಿದ್ದಾರೆ ಎಂದು ತಿಳಿಸಿದರು.
Related Articles
Advertisement
ನಟಿ ಸುಧಾರಾಣಿ ಮಾತನಾಡಿ, ಬರಗೂರು ಪ್ರಶಸ್ತಿ ದೊರೆತಿರುವುದು ಸಂತೋಷ ಉಂಟು ಮಾಡಿದೆ. ಬರಗೂರು ರಾಮಚಂದ್ರಪ್ಪ ಅವರು ಕನ್ನಡ ಸಿನಿಮಾದಲ್ಲಿ ಹೊಂಗೆ ಮರ ಇದ್ದಂತೆ, ಅವರ ನೆರಳಿನಲ್ಲಿ ನಾವೆಲ್ಲಾ ತಂಪಾಗಿ ಇದ್ದೇವೆ ಎಂದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ವಿದ್ವಾಂಸ ಹಂ.ಪ.ನಾಗರಾಜಯ್ಯ, ಬರಗೂರು ರಾಮಚಂದ್ರರು ಸಾಹಿತ್ಯ ಹಾಗೂ ಸಿನಿಮಾ ಕ್ಷೇತ್ರಕ್ಕೆ ಅಭೂತಪೂರ್ವ ಕೊಡುಗೆಗಳನ್ನು ನೀಡಿದ್ದಾರೆ. ಸಾಹಿತ್ಯ ತನ್ನ ನಿಲುವನ್ನು ಕಳೆದುಕೊಳ್ಳುತ್ತಿರುವಂತಹ ಸಂಧ ರ್ಭದಲ್ಲಿ ಸಿನಿಮಾ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಗೈದವರನ್ನು ಗುರುತಿಸಿ ಬರಗೂರು ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದರು