Advertisement

ಏಕದಿನ ಕ್ರಿಕೆಟ್ ಗೆ 50: ಬೆರಗುಗೊಳಿಸಿದ ವಿವಾದಗಳ ನಂಟು!

03:43 PM Jan 05, 2021 | Team Udayavani |

ಏಕದಿನ ಕ್ರಿಕೆಟ್ ಗೆ 50 ವರ್ಷ ತುಂಬಿದೆ. ಈ ಸಮಯದಲ್ಲಿ ಹಲವಾರು ಶ್ರೇಷ್ಠ ಪಂದ್ಯಗಳು ನಡೆದಿವೆ. ಅವುಗಳ ನಡುವೆ ಹಲವು ವಿವಾದಗಳೂ ನಡೆದಿದೆ. ಅವುಗಳು ಕುರಿತು ಒಂದು ನೋಟ.

Advertisement

* ಪಂದ್ಯವನ್ನೇ ಪಾಕಿಸ್ಥಾನಕ್ಕೆ ಬಿಟ್ಟುಕೊಟ್ಟ ಬೇಡಿ!

1978-79ರ ಪಾಕ್‌ ಪ್ರವಾಸದ ಸರಣಿ ನಿರ್ಣಾಯಕ ಸಾಹಿವಾಲ್‌ ಪಂದ್ಯ. ಭಾರತಕ್ಕೆ 40 ಓವರ್‌ಗಳಲ್ಲಿ 206 ರನ್‌ ಟಾರ್ಗೆಟ್‌. 37 ಓವರ್‌ಗಳಲ್ಲಿ ಎರಡಕ್ಕೆ 183 ರನ್‌ ಮಾಡಿದ್ದ ಭಾರತ ಗೆಲುವಿನ ಹಾದಿಯಲ್ಲಿತ್ತು. ಅದು ಸರ್ಫರಾಜ್‌ ನವಾಜ್‌ ಓವರ್‌. ಎಸೆತವೊಂದು ಬ್ಯಾಟ್ಸ್‌ಮನ್‌ ತಲೆಯಿಂದ ಹಾದು ಹೋಯಿತು. ಅಂಪಾಯರ್‌ ಮಿಸುಕಾಡಲಿಲ್ಲ. ನವಾಜ್‌ ಅವರಿಂದ ಮತ್ತೆ ಇಂಥದೇ ಎಸೆತಗಳು ಚಿಮ್ಮಿದವು. ಅಂಪಾಯರ್‌ ಮತ್ತೆ ತಟಸ್ಥ. ನಾಯಕ ಬೇಡಿ ಕೋಪ ತಾರಕಕ್ಕೇರಿತು. ನಾವು ಆಡುವುದಿಲ್ಲ, ಇದು ನಿಮಗೇ ಎಂದು ಪಂದ್ಯವನ್ನು ಪಾಕಿಸ್ಥಾನಕ್ಕೆ ಬಿಟ್ಟುಕೊಟ್ಟರು!

* ಲಂಕೆಯ ಗೆಲುವು ಸಾರಿದ ರೆಫ್ರಿ ಕ್ಲೈವ್ ಲಾಯ್ಡ್

Advertisement

1996ರ ಭಾರತ-ಶ್ರೀಲಂಕಾ ನಡುವಿನ ವಿಶ್ವಕಪ್‌ ಸೆಮಿಫೈನಲ್‌. ಟಾರ್ಗೆಟ್‌ 252 ರನ್‌. ಒಂದೇ ವಿಕೆಟಿಗೆ 98ರಲ್ಲಿದ್ದ ಭಾರತ 22 ರನ್‌ ಅಂತರದಲ್ಲಿ 7 ವಿಕೆಟ್‌ ಉರುಳಿಸಿಕೊಂಡು ಸಂಕಟಕ್ಕೆ ಸಿಲುಕಿತು. ಈಡನ್‌ ಗಾರ್ಡನ್ಸ್‌ನಲ್ಲಿ ವೀಕ್ಷಕರ ದಾಂಧಲೆ ಮೊದಲ್ಗೊಂಡಿತು. ಒಂದು ಸ್ಟಾಂಡ್‌ಗೆ ಬೆಂಕಿ ಬಿತ್ತು. ಕೂಡಲೇ ವೀಕ್ಷಕರನ್ನು ಹೊರಗೆ ಕಳುಹಿಸಲಾಯಿತು. ಆದರೆ ರೆಫ್ರಿ ಕ್ಲೈವ್‌ ಲಾಯ್ಡ 1983ರ ಫೈನಲ್‌ ಸೋಲಿಗೆ ಸೇಡು ತೀರಿಸಿಕೊಳ್ಳುವುದನ್ನೇ ಕಾಯುತ್ತಿದ್ದರು. ಪಂದ್ಯವನ್ನು ರದ್ದುಗೊಳಿಸಿ, ಲಂಕೆಯನ್ನು ವಿಜಯಿ ಎಂದು ಘೋಷಿಸಿದರು. ವಿನೋದ್‌ ಕಾಂಬ್ಳಿ ಕ್ರೀಸಿನಲ್ಲಿ ಅಳುತ್ತ ನಿಂತುಬಿಟ್ಟರು!

ಇದನ್ನೂ ಓದಿ:ಏಕದಿನ ಕ್ರಿಕೆಟ್ ಗೆ 50: ವಿಶ್ವಕ್ರಿಕೆಟ್ ಗೆ ರಂಗು ಹಚ್ಚಿದ ಐದು ರೋಚಕ ಪಂದ್ಯಗಳು!

* ಒಂದೇ ಎಸೆತಕ್ಕೆ 22 ರನ್‌ ಹೊಡೆಯಿರಿ…!

1992ರ ವಿಶ್ವಕಪ್‌ ಸೆಮಿಫೈನಲ್‌. ಮೊದಲ ಸಲ ವರ್ಲ್ಡ್ ಕಪ್ ಆಡಲಿಳಿದ ದಕ್ಷಿಣ ಆಫ್ರಿಕಾ ಅಮೋಘ ಪ್ರದರ್ಶನ ನೀಡಿ ಸೆಮಿಫೈನಲ್‌ಗೆ ಲಗ್ಗೆ ಇರಿಸಿತ್ತು. ಸಿಡ್ನಿಯಲ್ಲಿ ಕೆಪ್ಲರ್‌ ವೆಸಲ್ಸ್‌ ಬಳಗಕ್ಕೆ ಇಂಗ್ಲೆಂಡ್‌ ಎದುರಾಳಿ. 13 ಎಸೆತಗಳಲ್ಲಿ 22 ರನ್‌ ಹೊಡೆದರೆ ದಕ್ಷಿಣ ಆಫ್ರಿಕಾ ವಿನ್‌. ಕೈಯಲ್ಲಿನ್ನೂ 4 ವಿಕೆಟ್‌ ಇತ್ತು. ಆಗ ಮಳೆ ಸುರಿಯಿತು. ಮತ್ತೆ ಆಟ ಆರಂಭವಾದಾಗ ಹರಿಣಗಳಿಗೆ ಮರ್ಮಾಘಾತ. ಒಂದೇ ಎಸೆತದಲ್ಲಿ 22 ರನ್‌ ಮಾಡಬೇಕಾದ ಪರಿಷ್ಕೃತ ಟಾರ್ಗೆಟ್‌. ಡಕ್‌ವರ್ತ್‌-ಲೂಯಿಸ್‌ ಎಂಬ ನೂತನ ಮಳೆ ನಿಯಮದ ಲೆಕ್ಕಾಚಾರ. ಕ್ರಿಕೆಟ್‌ ಜಗತ್ತಿಗೇ ಶಾಕ್‌. ದಕ್ಷಿಣ ಆಫ್ರಿಕಾ ಔಟ್‌!

* ಬೌಂಡರಿ ಲೆಕ್ಕಾಚಾರದಲ್ಲಿ ಇಂಗ್ಲೆಂಡಿಗೆ ವಿಶ್ವಕಪ್‌!

2019ರ ವಿಶ್ವಕಪ್‌ ಫೈನಲ್‌. ಇಂಗ್ಲೆಂಡ್‌-ನ್ಯೂಜಿಲ್ಯಾಂಡ್‌ ಜಿದ್ದಾಜಿದ್ದಿ ಫೈಟ್‌. ಎರಡೂ ತಂಡಗಳಿಂದ 241 ರನ್‌. ಪಂದ್ಯ ಟೈ. ಸೂಪರ್‌ ಓವರ್‌ ಕೂಡ ಟೈ. ಅತ್ಯಧಿಕ ಬೌಂಡರಿ ಹೊಡೆದ ಇಂಗ್ಲೆಂಡ್‌ ಚಾಂಪಿಯನ್‌! ಐಸಿಸಿಯ ಇಂಥದೊಂದು ಎಡವಟ್ಟು ಹಾಗೂ ಅರ್ಥವಿಲ್ಲದ ನಿಯಮಕ್ಕೆ ಎಲ್ಲರಿಂದಲೂ ಶಾಪ ಬಿತ್ತು.

Advertisement

Udayavani is now on Telegram. Click here to join our channel and stay updated with the latest news.

Next