Advertisement

ಮನೆ ಮನೆಗೆ ತೆರಳಿ ಕುಟುಂಬ ಸಮೀಕ್ಷೆಗೆ ಒತ್ತಡ?

10:17 AM May 11, 2021 | Team Udayavani |

ಬೆಂಗಳೂರು: ಕೋವಿಡ್ ಸೋಂಕು ಉಲ್ಬಣದ ನಡುವೆ ಮನೆ ಮನೆಗೆ ತೆರಳಿ ಕುಟುಂಬ ಸಮೀಕ್ಷೆ ನಡೆಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂಬ ದೂರು ಕೇಳಿ ಬಂದಿದೆ.

Advertisement

ನಗರ ಪ್ರದೇಶಗಳು, ಹಳ್ಳಿಗಳು ಎಲ್ಲಾ ಕಡೆ ಕೋವಿಡ್ ಸೋಂಕು ವ್ಯಾಪಕವಾಗಿ ಹರಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಪ್ರತಿ ಮನೆಗೆ ತೆರಳಿ ಕುಟುಂಬಗಳ ಸಮೀಕ್ಷೆ ನಡೆಸುವಂತೆ ಕೆಲ ಜಿಲ್ಲೆಗಳಲ್ಲಿ ಅಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು ಒತ್ತಡ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ “ಸಂತಾನೋತ್ಪತ್ತಿ ಮತ್ತು ಮಗುವಿನ ಕಾರ್ಯಕ್ರಮ”ದಡಿ ಮೊಬೈಲ್‌ ಆ್ಯಪ್‌ ಮೂಲಕ ಕುಟುಂಬಗಳ ಸಮೀಕ್ಷೆ ನಡೆಸಲಾಗುತ್ತಿದೆ. ಇದರ ಹೊಣೆಗಾರಿಕೆಯನ್ನು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ನೀಡಲಾಗಿದೆ.

ಆದರೆ, ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಇಂತಹ ಸಂದರ್ಭದಲ್ಲಿ ಮನೆಗಳಿಗೆ ತೆರಳಿ ಪ್ರತಿ ಕುಟುಂಬದ ಮಾಹಿತಿ ಸಂಗ್ರಹಿಸುವುದು ಅಪಾಯವನ್ನು ಮೈ ಮೇಲೆ ಎಳೆದುಕೊಂಡಂತಾಗುತ್ತದೆ. ಅಲ್ಲದೇ ಕೋವಿಡ್ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಬರುತ್ತಿದ್ದವರಿಗೆ ಅವರ ಮನೆಗೆ ಹೋಗಿ ಆಹಾರ ಸಾಮಗ್ರಿಗಳನ್ನು ವಿತರಿಸುವ ಜವಾಬ್ದಾರಿ ಸೇರಿ ಕೋವಿಡ್ ಸಂಬಂಧಿತ ಇನ್ನೂ ಅನೇಕ ಜವಾಬ್ದಾರಿಗಳನ್ನು ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರಿಗೆ ವಹಿಸಲಾಗಿದೆ. ಅದರ ಒತ್ತಡವೇ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಕುಟುಂಬ ಸಮೀಕ್ಷೆ ಹೇಗೆ ಸಾಧ್ಯ ಎಂದು ಅಂಗನವಾಡಿ ಕಾರ್ಯಕರ್ತೆಯರ ಪ್ರಶ್ನೆ.

ಸ್ಪಷ್ಟತೆ ಇಲ್ಲ: ಕುಟುಂಬ ಸಮೀಕ್ಷೆಗೆ ಸಂಬಂಧಿಸಿದಂತೆ ಇಲಾಖೆಯ ನಿರ್ದೇಶಕರು ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದನಿರ್ದೇಶಕರು ಮಾ.29ರಂದು ಜಂಟಿ ಸುತ್ತೋಲೆ ಹೊರಡಿಸಿ, ಏ.28ರೊಳಗೆ ಕುಟುಂಬ ಸಮೀಕ್ಷೆ ಪೂರ್ಣಗೊಳಿಸಬೇಕು. ಯಾವುದೇ ಒಂದು ಕುಟುಂಬ ಸಮೀಕ್ಷೆಯಿಂದ ಬಿಟ್ಟು ಹೋಗಬಾರದು ಎಂದು ತಾಕೀತು ಮಾಡಲಾಗಿತ್ತು. ಆದರೆ, ಕೋವಿಡ್ ಪರಿಸ್ಥಿತಿ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಅವಧಿಯನ್ನು ವಿಸ್ತರಿಸಲಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಸಮರ್ಪಕ ರೀತಿಯಲ್ಲಿ ಸಮೀಕ್ಷೆ ನಡೆದಿರಲಿಲ್ಲ. ಕೆಲವು ಜಿಲ್ಲೆಗಳಲ್ಲಿ ಆರಂಭವಾಗಿದ್ದರೆ, ಇನ್ನೂ ಕೆಲವು ಕಡೆ ಈಗಲೂ ಒತ್ತಡ ಹಾಕಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಸಮೀಕ್ಷೆ ನಿಲ್ಲಿಸಬೇಕೇ, ಸ್ಥಗಿತಗೊಳಿಸಬೇಕೇ ಎಂಬ ಬಗ್ಗೆ ಇಲಾಖೆಯಿಂದ 300 ಆಕ್ಸಿಜನೇಟೆಡ್‌ ಬೆಡ್‌ ವ್ಯವಸ್ಥೆ ಸ್ಪಷ್ಟತೆ ಇಲ್ಲ.

Advertisement

ಕುಟುಂಬ ಸಮೀಕ್ಷೆ ನಿರಂತರ ಚಟುವಟಿಕೆ. ಸದ್ಯದ ಕೋವಿಡ್ ಉಲ್ಬಣ ಸ್ಥಿತಿಯಲ್ಲಿ ಸಮೀಕ್ಷೆ ಬೇಡ ಎಂಬ ಮನವಿಗಳು ಅಂಗನವಾಡಿ ಕಾರ್ಯಕರ್ತೆಯರಿಂದ ಬರುತ್ತಿವೆ. ಈ ವಿಚಾರವನ್ನು ಇಲಾಖೆಯ ಕಾರ್ಯದರ್ಶಿಯವರ ಗಮನಕ್ಕೆ ತರಲಾಗಿದೆ. – ಅನುರಾಧ, ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಕುಟುಂಬ ಸಮೀಕ್ಷೆ ನಡೆಸುವಂತೆ ಕೆಲ ಜಿಲ್ಲೆಗಳಲ್ಲಿ ಒತ್ತಡ ಹಾಕಲಾಗುತ್ತಿದೆ. ಸದ್ಯದ ಸ್ಥಿತಿಯಲ್ಲಿ ಸಮೀಕ್ಷೆ ಬೇಡ ಎಂಬ ವಿಚಾರವನ್ನುಇಲಾಖೆಯ ಗಮನಕ್ಕೆ ತರಲಾಗಿದೆ. ಆದರೆ, ಈವರೆಗೆ ಯಾವುದೇ ಸ್ಪಷ್ಟ ಸೂಚನೆ ಸಿಕ್ಕಿಲ್ಲ. – ಎಂ. ಜಯಮ್ಮ, ಪ್ರ.ಕಾರ್ಯದರ್ಶಿ, ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಫೆಡರೇಷನ್‌

 

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next