Advertisement

ಕೌಟುಂಬಿಕ ಕಲಹ: ವರ್ಷದಲ್ಲಿ ದುಪ್ಪಟ್ಟು

10:38 AM Apr 18, 2022 | Team Udayavani |

ಉಡುಪಿ: ಪ್ರಜ್ಞಾವಂತ ಜಿಲ್ಲೆಯಾಗಿರುವ ಉಡುಪಿಯಲ್ಲಿ ದಂಪತಿ ಕಲಹ ಪ್ರಕರಣ ಒಂದೇ ವರ್ಷದಲ್ಲಿ ದುಪ್ಪಟ್ಟು ದಾಖಲಾಗಿರುವುದು ಕಳವಳಕಾರಿ ಅಂಶವಾಗಿದೆ.

Advertisement

2020-21ರಲ್ಲಿ 75 ಹಾಗೂ 2021-22ರಲ್ಲಿ 156 ಕೌಟುಂಬಿಕ ದೌರ್ಜನ್ಯ ಪ್ರಕರಣ ಸಖೀ ಒನ್‌ ಸ್ಟಾಪ್‌ ಕೇಂದ್ರದಲ್ಲಿ ವರದಿಯಾಗಿದೆ.

ಕೌಟುಂಬಿಕ ದೌರ್ಜನ್ಯ ಸಹಿತವಾಗಿ ಮಹಿಳೆಯರ ಮೇಲೆ ಆಗುತ್ತಿರುವ ಎಲ್ಲ ರೀತಿಯ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಇರುವ ಕಾನೂನುಗಳನ್ನು ಬಿಗಿಗೊಳಿಸಲಾಗುತ್ತಿದೆ. ಕಾನೂನಿನ ಅರಿವು ಪಡೆಯುತ್ತಿರುವ ಮಹಿಳೆಯರು ತಮ್ಮ ಮೇಲಿನ ದೌರ್ಜನ್ಯಗಳ ವಿರುದ್ಧ ಪತಿ ಮತ್ತವರ ಕುಟುಂಬದ ವಿರುದ್ಧವೇ ಕಾನೂನು ಹೋರಾಟಕ್ಕೆ ನಿಂತಿರುವ ಪ್ರಕರಣವೂ ಹೆಚ್ಚುತ್ತಿದೆ.

ಕಠಿನ ಕಾನೂನು ಇದ್ದರೂ ಮನೆಯಲ್ಲಿ ಪತಿಯಿಂದ ಹಿಂಸೆ, ದೌರ್ಜನ್ಯಕ್ಕೊಳಗಾದ ಮಹಿಳೆಯರ ನೋವಿನ ನೂರಾರು ಕಥೆಗಳು ಪ್ರಕರಣದಿಂದ ಬೆಳಕಿಗೆ ಬಂದಿದೆ. ಇದೇ ವೇಳೆ ಗಂಡನ ಮನೆಯವರನ್ನು ಸಿಲುಕಿಸುವ ಪ್ರಯತ್ನವೂ ನಡೆಯುತ್ತಿದೆ ಎಂಬ ಆರೋಪಗಳೂ ಇಲ್ಲದಿಲ್ಲ.

ರಾಷ್ಟ್ರೀಯ ಮಹಿಳಾ ಆಯೋಗಕ್ಕೆ 60 ಕೇಸು

Advertisement

2020-21ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಉಡುಪಿ ಜಿಲ್ಲೆಯಿಂದ 60 ದೂರುಗಳು ಹೋಗಿವೆ. ಅದರಲ್ಲಿ ಶೇ.70ರಷ್ಟು ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದ್ದಾಗಿವೆ. ಜಿಲ್ಲೆಯ ಸಖೀ ಕೇಂದ್ರದ ಮೂಲಕ ಕೌನ್ಸೆಲಿಂಗ್‌ ಮತ್ತು ವಿಚಾರಣೆ ನಡೆಸಿ ನೊಂದ ಮಹಿಳೆಗೆ ಸಾಂತ್ವನದ ಜತೆಗೆ ನೆರವು ನೀಡುವ ಕಾರ್ಯ ನಿರಂತರವಾಗಿ ಆಗುತ್ತಿದೆ. ಮಹಿಳೆರು ಈಗ ಹೆಚ್ಚು ಜಾಗೃತರಾಗಿದ್ದರಿಂದ ಪ್ರಕರಣಗಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಈ ನಡುವೆ ಕೆಲವರು ಸುಳ್ಳು ಆರೋಪಗಳನ್ನು ಮಾಡಿ ದೂರು ದಾಖಲಿಸುವ ಸಂಗತಿಗಳು ನಡೆಯುತ್ತದೆ. ಸಖೀ ಮತ್ತು ಆಯೋಗವು ಎಲ್ಲ ರೀತಿಯಿಂದ ಪ್ರಕರಣವನ್ನು ಕೂಲಂಕಷ ವಾಗಿ ಪರಿಶೀಲನೆ ನಡೆಸಿ ವಿಚಾರಣೆ ಕೈಗೆತ್ತಿಕೊಳ್ಳುತ್ತದೆ ಎಂದು ರಾಷ್ಟ್ರೀಯ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ. ಕುಂದರ್‌ ಮಾಹಿತಿ ನೀಡಿದ್ದಾರೆ.

ಅಗತ್ಯ ಸೇವೆ, ನೆರವು

ನೊಂದ ಮಹಿಳೆಯರಿಗೆ ಸಖೀ ಕೇಂದ್ರ ಎಲ್ಲ ಅಗತ್ಯ ಸೇವೆ, ನೆರವು ನೀಡುತ್ತಿದೆ. ಸ್ಥಗಿತಗೊಂಡಿದ್ದ ಉಡುಪಿ ತಾಲೂಕಿನ ಸಾಂತ್ವನ ಕೇಂದ್ರ ಶೀಘ್ರ ಪುನರಾರಂಭಗೊಳ್ಳಲಿದೆ. -ವೀಣಾ ವಿವೇಕಾನಂದ, ಉಪ ನಿರ್ದೇಶಕರು (ಪ್ರಭಾರ), ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next