Advertisement

ಗುಡ್ಡ ಕುಸಿತ : ಒಂದೇ ಕುಟುಂಬದ ನಾಲ್ವರು ಜೀವಂತ ಸಮಾಧಿ ?

05:35 PM Jul 20, 2018 | Team Udayavani |

ಗೋಪೇಶ್ವರ್‌ : ಚಮೋಲಿ ಜಿಲ್ಲೆಯ ಜೋಷಿಮಠ ಪ್ರದೇಶದಲ್ಲಿ  ಟಿನ್‌ ಶೆಡ್‌ ಮೇಲೆ ಗುಡ್ಡ ಜರಿದು ಸಂಭವಿಸಿದ ದುರಂತದಲ್ಲಿ ಓರ್ವ ನೇಪಾಲಿ ಮಹಿಳಾ ಕೂಲಿ ಮತ್ತು ಆಕೆಯ ಮಗು ಜೀವಂತ ಸಮಾಧಿಯಾಗಿರುವ ಘಟನೆ ವರದಿಯಾಗಿದೆ. 

Advertisement

ಮಹಿಳೆಯ ಪತಿ ಮತ್ತು ಇನ್ನೊಂದು ಮಗು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.

ಇಂದು ಬೆಳಗ್ಗೆ ಈ ಪ್ರದೇಶದಲ್ಲಿ ಮೇಘ ಸ್ಫೋಟವಾಗಿತ್ತು. ಪರಿಣಾಮವಾಗಿ ಗುಡ್ಡ ಜರಿದು ಕಾರ್ಮಿಕ ಕುಟುಂಬ ವಾಸವಾಗಿದ್ದ ಟಿನ್‌ ಶೆಡ್‌ ಮೇಲೆ ಕಲ್ಲು, ಮಣ್ಣಿನ ರಾಶಿ ಬಿದ್ದಿತ್ತು. ಟಿನ್‌ ಶೆಡ್‌ ಒಳಗಿದ್ದ ಮಹಿಳೆ ಮತ್ತು ಆಕೆಯ ಮಗು ಜೀವಂತ ಸಮಾಧಿಯಾದರು.

ಮಹಿಳೆಯ ಪತಿ ಮತ್ತು ಇನ್ನೊಂದು ಮಗು ನಾಪತ್ತೆಯಾಗಿದ್ದು ಇವರು ಕೂಡ ಜೀವಂತ ಸಮಾಧಿಯಾಗಿರುವ ಭೀತಿ ಇದೆ ಎಂದು ಜೋಷಿಮಠದ ಎಸ್‌ಡಿಎಂ ಯೋಗೇಂದ್ರ ಕುಮಾರ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next