ಶ್ರೀನಿವಾಸಪುರ: ಸಮಾಜದಲ್ಲಿ ಪ್ರತಿ ಕುಟುಂಬಗೌರವಯುತವಾಗಿ ಬದಕಲು ಸಾಕಷ್ಟು ಸೌಲಭ್ಯಗಳ ಜೊತೆಗೆ ಹೈನುಗಾರಿಕೆ ಸಹ ಒಂದು ಉದ್ದಿಮೆಯಾಗಿದ್ದು, ದೊಡ್ಡ ಶ್ರೀಮಂತರಾಗದಿದ್ದರೂ ಒಂದು ಹಸು ಇಡೀ ಕುಟುಂಬವನ್ನು ಸಾಕುತ್ತದೆ. ಆದ್ದರಿಂದ ಪ್ರತಿ ಕುಟುಂಬ ಆಧುನಿಕತೆಗೆ ಹೊಂದಾಣಿಕೆ ಮಾಡಿಕೊಂಡು ಜೀವನ ಶೈಲಿ ರೂಢಿಸಿಕೊಳ್ಳಬೇಕೆಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಮಾಸ್ಥೆàನಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ವಯಂಚಾಲಿತ ಸಮೂಹ ಹಾಲು ಕರೆಯುವ ಯಂತ್ರಗಳ ಘಟಕ ಉದ್ಘಾಟಿಸಿ ಮಾತನಾಡಿ,ಹಸುಗಳನ್ನು ಸಾಕುವಂತದ್ದು ಹಳೆಯ ಹಾಗೂಹೊಸ ಪದ್ಧತಿಗಳನ್ನು ತಾಳೆ ಮಾಡಿದಾಗ ಹಿರಿಯರುಸಾಕುತ್ತಿದ್ದ ನಾಟಿ ಹಸು 300 ರೂ.ಗೆ ಹಸುಕೊಂಡುಕೊಳ್ಳುವಂತಿತ್ತು ಎಂದರು.
ಆಧುನಿಕ ತಾಂತ್ರಿಕ ವ್ಯವಸ್ಥೆ: ಇಂದಿನ ಸೀಮೆ ಹಸುಕೊಳ್ಳಲು 50 ಸಾವಿರದಿಂದ ಒಂದು ಲಕ್ಷ ರೂ. ಆಗುತ್ತದೆ. ಅದೇ ರೀತಿ ಹಿರಿಯರು ನಾಟಿ ಜೊತೆ ಎಮ್ಮೆ, ಮೇಕೆ, ಕುರಿ ಸಾಕುತ್ತಿದ್ದರು. ನಾಟಿ ಹಸುಗಳಿಂದ ಹಾಲು, ಮೊಸರು ತುಪ್ಪ ತಯಾರು ಮಾಡಿಕೊಳ್ಳುತ್ತಿದ್ದರು. ಆದರೆ ಇಂದಿನ ಯುವ ಜನಾಂಗ ಸುಲಭವಾಗಿ ಹಸು ಮೇಯಿಸುವವಿಧಾನಕ್ಕೆ ಆಧುನಿಕ ತಾಂತ್ರಿಕ ವ್ಯವಸ್ಥೆಗಳನ್ನು ಅನುಸರಿಸುತ್ತಿದ್ದಾರೆ ಎಂದರು.
ಒಳ್ಳೆಯ ಬೆಳವಣಿಗೆ: ಕೋಚಿಮಲ್ ವತಿಯಿಂದ ಸಾಕಷ್ಟು ಪ್ರಯೋಜನಾಕಾರಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನೇರವಾಗಿ ಸ್ವಯಂಚಾಲಿತ ಸಮೂಹ ಹಾಲು ಕರೆಯುವ ಯಂತ್ರಗಳನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಅಳವಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಯಾಗಿದೆ ಎಂದರು. ಗೋಹತ್ಯೆ ಬೇಡ ಎಂದು ಕಾನೂನು ಮಾಡಿದ್ದಾರೆ. ಪ್ರತಿದಿನ 20 ಲೀ.ಹಾಲು ಕರೆಯುವ ಹಸುವನ್ನು ಯಾರು ಹತ್ಯೆ ಮಾಡುತ್ತಾ ರೆಂದು ಸರ್ಕಾರ ತೆಗೆದುಕೊಳ್ಳುವ ಅವೈಜ್ಞಾನಿಕ ಕ್ರಮದ ಬಗ್ಗೆ ಅಸಮಾಧಾದಾನ ವ್ಯಕ್ತಪಡಿಸಿದರು.
1 ನಿಮಿಷಕ್ಕೆ 1 ಲೀ.ಹಾಲು: ಕೋಚಿಮಲ್ ನಿರ್ದೇಶಕ ಎನ್.ಹನುಮೇಶ್ ಮಾತನಾಡಿ, ಸ್ವಯಂಚಾಲಿತ ಯಂತ್ರದಿಂದ 1 ನಿಮಿಷಕ್ಕೆ ಒಂದು ಲೀ.ಹಾಲು ಸುಲಭವಾಗಿ ಕರೆಯುವುದರಿಂದ ಕುಟುಂಬಗಳಲ್ಲಿ ಇನ್ನೆರಡು ಹಸುಗಳನ್ನುಸಾಕಬಹುದು ಎಂದರು. ಗುಣಮಟ್ಟದ ಹಾಲು ಸಿಗುವುದರಿಂದ ಒಕ್ಕೂಟದಿಂದ ಪ್ರತಿ ಲೀ.10 ಪೈಸೆ, ಸಂಘಕ್ಕೆ 20 ಪೈಸೆ ಕೊಡಲಾಗುತ್ತದೆ. ಪ್ರತಿ ಲೀ.27 ರೂ ನೀಡಲಾಗುವುದು ಎಂದರು.
ಮಾಸ್ತೇನಹಳ್ಳಿ ಡೇರಿ ಅಧ್ಯಕ್ಷ ಎಂ.ಆರ್.ಆಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಆರ್.ಭದ್ರಪ್ಪ, ದಿಂಬಾಲ್ ಅಶೋಕ್, ಬಗಲಹಳ್ಳಿ ಚಂದ್ರೇಗೌಡ, ಶಶಿಕುಮಾರ್, ಗ್ರಾಪಂ ಅಧ್ಯಕ್ಷ ಬಿ.ಎಂ. ರವಿಕುಮಾರ್, ಅಶ್ವತ್ಥಪ್ಪ, ಪ್ರಕಾಶ್, ವೆಂಕಟೇಶ್, ಹಾ.ಉ.ಸ.ಸಂ ಕಾರ್ಯದರ್ಶಿ ಆರ್.ಎಂ.ಗೋಪಾಲಕೃಷ್ಣ, ನರಸಿಂಹಯ್ಯ ಇದ್ದರು.
ಮೇ 1ರಿಂದ ಮೇವಿಗೆ 50 ರೂ ಇಳಿಕೆ ಮಾಡಲಾಗುತ್ತಿದೆ ಈ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ಖಾಸಗೀ ಡೇರಿಗಳಿಗೆ ಹಾಲು ಹಾಕದೇ ನಮ್ಮ ಒಕ್ಕೂಟದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಹಕಾರ ಸಂಘಗಳಲ್ಲಿ ಮಾತ್ರ ಹಾಲು ಹಾಕಬೇಕು.
–ಎನ್.ಹನುಮೇಶ್, ಕೋಚಿಮಲ್ ನಿರ್ದೇಶಕ