Advertisement

ಕುಡಿದ ಮತ್ತಿನಲ್ಲಿ ಸಹೋದರಿ, ತಾಯಿ ಮೇಲೆ ಅತ್ಯಾಚಾರ ಎಸಗುತ್ತಿದ್ದ ಪುತ್ರನ ಹತ್ಯೆ

09:52 AM Nov 20, 2019 | Nagendra Trasi |

ಮಧ್ಯಪ್ರದೇಶ:ಕುಡಿದ ಮತ್ತಿನಲ್ಲಿ ತಾಯಿ, ಸಹೋದರಿ ಹಾಗೂ ತಮ್ಮನ ಪತ್ನಿಯ ಮೇಲೆ ಅತ್ಯಾಚಾರ ಎಸಗುತ್ತಿದ್ದ ಕಾಮುಕ ಮಗನನ್ನು ಪೋಷಕರೇ ಹತ್ಯೆಗೈದಿರುವ ಘಟನೆ ಮಧ್ಯಪ್ರದೇಶದ ಡಾಟಿಯಾ ಎಂಬಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ದಿನಂಪ್ರತಿ ಕಂಠಪೂರ್ತಿ ಕುಡಿದು ಬರುತ್ತಿದ್ದ ಮಗ ತಾಯಿ, ತಂಗಿ ಎನ್ನದೇ ಅತ್ಯಾಚಾರ ಎಸಗುತ್ತಿದ್ದ. ನವೆಂಬರ್ 11ರಂದು ರಾತ್ರಿ ಕುಡಿದು ಬಂದಿದ್ದ ಮಗ ತನ್ನ ಕಿರಿಯ ಸಹೋದರನ ಪತ್ನಿಯ ಮೇಲೆ ಅತ್ಯಾಚಾರ ನಡೆಸಲು ಮುಂದಾಗಿದ್ದ. ಈ ಸಂದರ್ಭದಲ್ಲಿ ಆತನ ಉಸಿರುಗಟ್ಟಿಸಿ ಸಾಯಿಸಿರುವುದಾಗಿ ತಂದೆ ಪೊಲೀಸರ ತನಿಖೆಯಲ್ಲಿ ತಪ್ಪೊಪ್ಪಿಕೊಂಡಿರುವುದಾಗಿ ವರದಿ ತಿಳಿಸಿದೆ.

ಈ ಹಿಂದೆ ಹಲವು ಬಾರಿ ಕುಡಿದ ಮತ್ತಿನಲ್ಲಿ ಅತ್ಯಾಚಾರ ಎಸಗಿದ್ದ, ಈ ಬಾರಿ ಆತನನ್ನು ಕೊಂದು ಶವವನ್ನು ಗೋಪಾಲ್ ದಾಸ್ ಗುಡ್ಡದ ಸಮೀಪ ಎಸೆದಿರುವುದಾಗಿ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ನವೆಂಬರ್ 12ರಂದು 24ರ ಹರೆಯದ ಪುತ್ರನ ಬಗ್ಗೆ ಪೊಲೀಸರು ವಿಚಾರಿಸಿದಾಗ ಈ ವಿಷಯ ಬೆಳಕಿಗೆ ಬಂದಿರುವುದಾಗಿ ಡಾಟಿಯಾ ಸಬ್ ಡಿವಿಶನಲ್ ಆಫ್ ಪೊಲೀಸ್ ಗೀತಾ ಭಾರದ್ವಾಜ್ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ, ಆತನ ಪತ್ನಿ, ಕಿರಿಯ ಸಹೋದರ, ಕಿರಿಯ ಸಹೋದರನ ಪತ್ನಿ ಸೇರಿ ನಾಲ್ವರನ್ನು ಬಂಧಿಸಿದ್ದು, ಸೋಮವಾರ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next